ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ
ಚಾಮರಾಜನಗರ

ದೇಶದ ಸಾರ್ವಭೌಮತ್ವ, ಸಾಮರಸ್ಯ ಸಾರುವ ಸಂಕೇತ ರಾಷ್ಟ್ರಧ್ವಜ

August 4, 2018

ಕೊಳ್ಳೇಗಾಲ: ದೇಶದ ಅಖಂಡತೆ ಸಾರ್ವಭೌಮತ್ವ. ಸಾಮರಸ್ಯ ಸಾರುವ ಏಕೈಕ ಸಂಕೇತ ರಾಷ್ಟ್ರಧ್ವಜ ಆಗಿದ್ದು, ಈ ಸಂಕೇತದ ಜೊತೆ ರಾಷ್ಟ್ರಗೀತೆ, ರಾಷ್ಟ್ರದ್ವಜ, ರಾಷ್ಟ್ರ ಲಾಂಛನ, ಸಂವಿಧಾನ ಹಾಗೂ ರಾಷ್ಟ್ರಪತಿ ಎಂಬ ಈ 5 ಅಂಶಗಳು ದೇಶದ ಪಂಚಕಳಸಗಳಿದ್ದಂತೆ. ಅವುಗಳನ್ನು ನಾವು ಎಲ್ಲಿವರೆವಿಗೆ ಸಾಮರಸ್ಯದಿಂದ ಗೌರವಿಸುತ್ತೇವೋ ಅಲ್ಲಿತನಕ ದೇಶದಲ್ಲಿ ನೆಮ್ಮದಿಯ ಬದುಕು ಕಾಣಬಹುದಾಗಿದೆ ಎಂದು ಸಾಹಿತಿ ಹಾಗೂ ಭಾರತ್ ಸೇವಾದಳದ ಕಾರ್ಯದರ್ಶಿ ಪಳನಿಸ್ವಾಮಿ ಜಾಗೇರಿ ಹೇಳಿದರು.

ಅವರು ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗಾಗಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಅಯೋ ಜಿಸಲಾಗಿದ್ದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಸಾಕಷ್ಟು ಕಡೆ ಧ್ವಜದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೆ ಧರ್ಮಾ ಅಂಧತೆಯಿಂದ ಗಲಾಟೆ ನಡೆದಿರುವುದನ್ನು ನಾವು ಕಾಣಬಹುದು. ಜಾತೀಯ ಭಾವನೆ ಹಾಗೂ ತಪ್ಪು ತಳುವಳಿಕೆಯಿಂದ ಅಗೌರವ ಉಂಟುಮಾಡಿರುವುದು ಹಾಗೂ ತಲೆಕೆಳಗಾಗಿ ಉಲ್ಟಾ ಹಾಕಿರುವ ಅನೇಕ ಘಟನೆ ಗಳನ್ನು ಸಾಕಷ್ಟಿವೆ. ಅದರ ನಿವಾರಣೆಗಾಗಿ ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು. ಪಂಚಾಯ್ತಿ ವ್ಯಾಪ್ತಿಯ ಡಿ ಗ್ರೂಪ್ ನೌಕರರಿಗೆ ಇಂದಿನ ಶಿಬಿರಾರ್ಥಿಗಳು ಸೂಕ್ತ ಮಾಹಿತಿ ನೀಡಬೇಕಿದೆ. ರಾಷ್ಟ್ರಧ್ವಜದ ಮಧ್ಯದಲ್ಲಿ ಚರಕ ಇಲ್ಲದ ಕುರಿತು ಇಂದಿಗೂ ಅನೇಕ ಗುಮಾನಿ ಗಳಿದೆ. ಅವೆಲ್ಲಾ ಗುಮಾನಿಗಳು ಸುಳ್ಳು. ಅಂತರಾಷ್ಟ್ರಿಯ ಧ್ವಜ ನಿಯಮದ ಪ್ರಕಾರವೇ ಧ್ವಜ ರೂಪಿತವಾಗಿದೆ ಎಂದ ತಿಳಿಸಿದರು. ಪ್ರಸ್ತುತ ನಾವು ತ್ರಿವರ್ಣಗಳುಳ್ಳ ಧ್ವಜವನ್ನು ನಾವು ಕಾಣುತ್ತಿದ್ದೇವೆ. ರಾಷ್ಟ್ರಧ್ವಜದ ಬಣ್ಣಗಳು ಜಾತಿಯ ಸಂಕೇತವಲ್ಲ. ಅವು ಭಾವನೆಗಳನ್ನು ಬಿಂಬಿಸುವ ಸಂಕೇತ. ತ್ಯಾಗ ಹಾಗೂ ಧೈರ್ಯದ ಸಂಕೇತವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಮಾತನಾಡಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಕುರಿತು ತರಬೇತಿ ಕಾರ್ಯಾಗಾರ ಅಯೋಜಿಸಿರುವುದು ಹೆಮ್ಮೆಯ ಹಾಗೂ ಸಂತಸದ ಸಂಗತಿ ಎಂದರು. ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ನಾಗರಾಜು, ತಾಪಂನ ಯೋಜನಾ ನಿರ್ದೇಶಕ ನಿಂಗರಾಜು, ಈರಯ್ಯ, ಪ್ರಸಾದ್ ಇನ್ನಿತರರಿದ್ದರು.

Translate »