ಹಾಸನ ಲೋಕಸಭಾ ಕ್ಷೇತ್ರ: ಫಲಿತಾಂಶಕ್ಕೆ ಕ್ಷಣಗಣನೆ: ಪ್ರಜಾಮತ ಮಂಜುಗೋ, ಪ್ರಜ್ವಲ್‍ಗೋ..?
ಹಾಸನ

ಹಾಸನ ಲೋಕಸಭಾ ಕ್ಷೇತ್ರ: ಫಲಿತಾಂಶಕ್ಕೆ ಕ್ಷಣಗಣನೆ: ಪ್ರಜಾಮತ ಮಂಜುಗೋ, ಪ್ರಜ್ವಲ್‍ಗೋ..?

May 23, 2019

ಹಾಸನ: ಲೋಕಸಭಾ ಚುನಾ ವಣಾ ಫಲಿತಾಂಶಕ್ಕೆ ಇನ್ನು ಕೆಲವೇ ಕ್ಷಣ ಗಳು ಮಾತ್ರ ಉಳಿದಿದ್ದು, ಜಿಲ್ಲೆಯ ನೂತನ ಸಂಸದ ಯಾರು ಎನ್ನುವುದು ಸಂಜೆಯೊಳಗೆ ಬಹಿರಂಗಗೊಳಲಿದೆ.

8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂ ಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದರೂ, ಜೆಡಿ ಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ನಡುವೆ ತೀವ್ರ ಹಣಾಹಣಿ ಕಂಡು ಬಂದಿತ್ತು. ಏ. 18ರಂದು ನಡೆದಿದ್ದ ಚುನಾವಣೆಯಲ್ಲಿ ಶೇ 77.28ರಷ್ಟು ಮತ ದಾನವಾಗಿದೆ. ಬರೋಬ್ಬರಿ ತಿಂಗಳ ನಂತರ ಮತಗಳ ಎಣಿಕೆಗೆ ಮುಹೂರ್ತ ನಿಗದಿಯಾಗಿದ್ದು, ಹಾಸನದ ಡೈರಿ ವೃತ್ತದ ಬಳಿಯಿರುವ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಸಂಜೆ ವೇಳೆಗೆ ಸ್ಪಷ್ಟ ಫಲಿ ತಾಂಶ ಹೊರಬೀಳುವ ಸಾಧ್ಯತೆ ಇದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಆರಂಭದಿಂದಲೂ ಪ್ರಜ್ವಲ್‍ಗೆ ವಿಘ್ನ: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ವ ಕ್ಷೇತ್ರ ಹಾಸನ ವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧೆ ಮಾಡಿದ್ದರೆ, ಗೌಡರ ಆಶೀರ್ವಾದ ದೊಂದಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಪ್ರಜ್ವಲ್ ರೇವಣ್ಣಗೆ ಆರಂಭದಿಂದಲೂ ಹಲವು ಅಡೆ-ತಡೆಗಳು ಎದುರಾಗುತ್ತಲೇ ಇವೆ.

ಕ್ಷೇತ್ರದಲ್ಲಿ ಲೋಕಸಭಾ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಮೈತ್ರಿ ಪಕ್ಷದಲ್ಲಿ ಭಿನ್ನಮತಗಳು ಸ್ಫೋಟಗೊಂಡಿದ್ದವು. ದೇವೇಗೌಡರು ಸ್ಪರ್ಧೆ ಮಾಡಿದರೆ ಮಾತ್ರ ಮೈತ್ರಿ ಅನ್ವಯ ಕಾಂಗ್ರೆಸ್ ಬೆಂಬಲಿಸಲಿದೆ. ಅದರ ಬದಲು ಪ್ರಜ್ವಲ್ ಅಭ್ಯರ್ಥಿಯಾದರೆ ಬೆಂಬಲವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದ ಮಾಜಿ ಸಚಿವ ಎ.ಮಂಜು, ಪ್ರಜ್ವಲ್ ಅಭ್ಯರ್ಥಿ ಎನ್ನುತ್ತಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದರು.

ಜೆಡಿಎಸ್ ವಿರುದ್ಧ ಮುನಿಸಿಕೊಂಡವರು, ಕಾಂಗ್ರೆಸ್‍ನ ವಿರೋಧಿಗಳು ಹಾಗೂ ಬಿಜೆಪಿ ನಾಯಕರ ಬೆಂಬಲದಿಂದ ಎ. ಮಂಜು ಸ್ಪರ್ಧೆ ಮಾಡಿದರೇ, ಪ್ರಜ್ವಲ್ ರೇವಣ್ಣ ಅವರಿಗೆ ತಮ್ಮ ಕುಟುಂಬದ ರಾಜಕೀಯ ಬುನಾ ದಿಯೇ ಆಧಾರ. ಜೊತೆಗೆ, ಮಗ ಪರ ಸಚಿವ ಹೆಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಕಾಂಗ್ರೆಸ್ ವರಿಷ್ಠರ ಬೆಂಬಲ ದೊಂದಿಗೆ ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದ ರಿಂದ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದರೂ ಜೆಡಿಎಸ್ ಗೆಲುವಿನ ವಿಶ್ವಾಸದಲ್ಲಿದೆ.
ಸಮೀಕ್ಷೆಯಲ್ಲಿ ಪ್ರಜ್ವಲ್ ಮುಂದು: ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿರು ವುದರಿಂದ ಮತ್ತು ಈ ಕ್ಷೇತ್ರ ಜೆಡಿಎಸ್‍ನ ಭದ್ರ ಕೋಟೆಯಾಗಿರುವುದರಿಂದ ದೋಸ್ತಿ ಅಭ್ಯರ್ಥಿ ಗೆಲುವು ಸುಲಭ ಎಂಬುದು ಎಲ್ಲರ ನಂಬಿಕೆ. ಚುನಾವಣೋತ್ತರ ಸಮೀಕ್ಷೆಗಳು ಕೂಡ ಇದನ್ನೇ ನುಡಿದಿದೆ. ಹೀಗಾಗಿ, ಗೌಡರ ಮೊಮ್ಮಗ ಪ್ರಜ್ವಲ್ ಚೊಚ್ಚಲ ಚುನಾವಣೆಯ ಲ್ಲಿಯೇ ಜಯಗಳಿಸಿ ಸಂಸದರಾಗುವ ಕನಸು ಹೊತ್ತಿದ್ದಾರೆ. ಆದರೆ, ಮೋದಿ ಅಲೆ ಮೇಲೆ ತೇಲುತ್ತಿರುವ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಕುರಿತು ಈಗಾಗಲೇ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲುಗೈ ಸಾಧಿಸಲಿದ್ದಾರೆ ಎಂದು ಮಾಹಿತಿ ಹೊರ ಹಾಕಿವೆ. ಬಿಜೆಪಿ ಅಭ್ಯರ್ಥಿ ಎ.ಮಂಜು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹಾಸನದ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 6 ಜೆಡಿಎಸ್ ಹಿಡಿತದಲ್ಲೇ ಇವೆ. ಹೊಳೆನರಸೀಪುರ, ಶ್ರವಣಬೆಳ ಗೊಳದಲ್ಲಿ ಅತೀ ಹೆಚ್ಚು ಮತಗಳು ಪ್ರಜ್ವಲ್ ಅವರಿಗೆ ಸಿಕ್ಕಿರುವ ಸಾಧ್ಯತೆ ಯಿದ್ದು, ಜೆಡಿಎಸ್‍ಗೆ ವರದಾನವಾಗಿ ಪರಿ ಣಮಿಸಿದೆ. ಒಟ್ಟಾರೆ ಮತಗಟ್ಟೆ ಸಮೀಕ್ಷೆ ಗಳು ಪ್ರಜ್ವಲ್ ರೇವಣ್ಣ ಅವರು ಗೆಲ್ಲಬಹುದು ಎಂದು ಅಭಿಪ್ರಾಯ ಪಡುತ್ತಿದ್ದರೂ ಪ್ರಜಾ ಮತ ಬಿಜೆಪಿ ಅಭ್ಯರ್ಥಿ ಎ.ಮಂಜುಗೋ ಅಥವಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್‍ಗೋ ಎಂಬುದನ್ನು ಕಾದು ನೋಡಬೇಕಿದೆ.

ಕಣದಲ್ಲಿರುವ ಉಳಿದ ನಾಲ್ವರು: ಉಳಿ ದಂತೆ ಕಣದಲ್ಲಿ ವಿನೋದ್‍ರಾಜ್ (ಬಿಎಸ್‍ಪಿ), ಚಂದ್ರೇಗೌಡ (ಉತ್ತಮ ಪ್ರಜಾಕೀಯ ಪಕ್ಷ), ಮಹೇಶ್ (ಪಕ್ಷೇತರ), ಆರ್.ಜಿ.ಸತೀಶ್ (ಪಕ್ಷೇತರ) ಅಭ್ಯರ್ಥಿಗಳಿದ್ದು, ಕ್ಷೇತ್ರದ ಮತದಾರರು ಇವರಿಗೆ ಎಷ್ಟು ಮತಗಳನ್ನು ನೀಡಿದ್ದಾರೆ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಬಹಿರಂಗಗೊಳ್ಳಲಿದೆ.

ಗೆಲುವು-ಸೋಲಿಗಿಂತ ಅಫಿಡವಿಟ್‍ನದ್ದೇ ಚರ್ಚೆ
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರಕ್ಕಿಂತ ಮಿಗಿಲಾಗಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಫಿಡವಿಟ್ ಸಲ್ಲಿಕೆಯ ವಿಷಯವೇ ಹೆಚ್ಚು ಚರ್ಚೆಯಾಗುತ್ತಿದೆ.

ಪ್ರಕರಣದಿಂದ ಫಲಿತಾಂಶದ ಮೇಲೆ ಯಾವುದೇ ಪರಿ ಣಾಮ ಬೀರುವುದಿಲ್ಲ ಎಂದು ಜೆಡಿಎಸ್ ಹೇಳುತ್ತಿದ್ದರೆ, ಬಿಜೆಪಿ ಕಾನೂನು ಸಮರದಲ್ಲಿ ಗೆಲುವು ತನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ. ಇದರಿಂದ ಚೊಚ್ಚಲ ಚುನಾವಣೆಯನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಗೆದ್ದರೂ ಸಂಭ್ರಮ ಬಿಜೆಪಿ ಪಾಲಾಗುವುದೇ ಎನ್ನುವ ಪ್ರಶ್ನೆ ಕ್ಷೇತ್ರದ ಮತದಾರರಲ್ಲಿ ಮೂಡಿದೆ.

ಐಟಿ ತನಿಖೆಗೆ ಡಿಸಿ ಸೂಚನೆ: ಈಗಾಗಲೇ ಬಿಜೆಪಿ ಅಭ್ಯರ್ಥಿ ಎ.ಮಂಜು, ವಕೀಲ ದೇವರಾಜೇಗೌಡ, ಪ್ರಜ್ವಲ್ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂಬ ಬಗ್ಗೆ ತಕರಾರು ತೆಗೆದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆಯೋಗ ಡಿಸಿಗೆ ಪತ್ರ, ಡಿಸಿ ಆಯೋಗಕ್ಕೆ ಪತ್ರ ಹೀಗೆ ಪತ್ರ ವ್ಯವಹಾರ ಸುದೀರ್ಘವಾಗಿ ನಡೆಯುತ್ತಿದ್ದು, ಅಂತಿಮವಾಗಿ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದು, ಆದಾಯ ತೆರಿಗೆ ಇಲಾಖೆ ಯಿಂದ ತನಿಖೆ ನಡೆಸಬೇಕಾಗಿರುವುದಾಗಿ ಉಲ್ಲೇಖಿಸಲಾಗಿದೆ.

ಎಣಿಕಾ ಕೇಂದ್ರವೇ ಕೇಂದ್ರ ಬಿಂದು
ಹಾಸನದ ಲೋಕಸಭೆ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ನಗರÀದ ಡೈರಿ ವೃತ್ತದ ಬಳಿಯಿರುವ ಸರ್ಕಾರಿ ಎಂಜಿನಿ ಯರಿಂಗ್ ಕಾಲೇಜಿನತ್ತಲೇ ಎಲ್ಲರ ಚಿತ್ತ ಹರಿದಿದೆ. ಏ. 18ರಂದು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಷೆತ್ರದ ಎಲ್ಲಾ ಮತಗಟ್ಟೆಗಳಲ್ಲಿನ ಯಂತ್ರಗಳನ್ನು ಎಂಜಿ ನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಬಿಗಿ ಬಂದೋಬಸ್ತ್‍ನೊಂದಿಗೆ ಇಡ ಲಾಗಿದೆ. ಇಂದು (ಮೇ 23) ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ.

Translate »