ಕಾನೂನು ಅರಿವಿನಿಂದ ಸಮಸ್ಯೆಗಳು ದೂರ: ನ್ಯಾ.ಸಾಗರ್ ಜಿ.ಪಾಟೀಲ್
ಹಾಸನ

ಕಾನೂನು ಅರಿವಿನಿಂದ ಸಮಸ್ಯೆಗಳು ದೂರ: ನ್ಯಾ.ಸಾಗರ್ ಜಿ.ಪಾಟೀಲ್

May 23, 2019

ಚನ್ನರಾಯಪಟ್ಟಣ: ಸಾರ್ವಜನಿ ಕರು ಕಾನೂನು ತಿಳುವಳಿಕೆಯನ್ನು ಹೆಚ್ಚಿಸಿ ಕೊಳ್ಳುವ ಮೂಲಕ ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಸಾಗರ್ ಜಿ.ಪಾಟೀಲ್ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆ ಗಳ ಸಹಯೋಗದಲ್ಲಿ ಕಾನೂನು ಸಾಕ್ಷರತಾ ರಥದೊಂದಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ನೆಮ್ಮದಿಯ ಜೀವನಕ್ಕೆ ಕಾನೂನಿನ ಅರಿ ವಿನ ಅವಶ್ಯಕತೆಯಿದ್ದು, ಇದಕ್ಕಾಗಿ ಕಾನೂನು ಸೇವಾ ಸಮಿತಿಯನ್ನು ಬಳಕೆ ಮಾಡಿ ಕೊಳ್ಳಬೇಕು. ಅರ್ಹರಿಗೆ ಉಚಿತವಾಗಿ ಕಾನೂನು ನೆರವು ದೊರಕಿಸಲು ಸಮಿತಿ ಮುಂದಾಗಿದ್ದು, ವಾರ್ಷಿಕ ಆದಾಯ 1.25 ಲಕ್ಷ ರೂ. ಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದವರೂ ಈ ನೆರವು ಪಡೆ ಯಲು ಅರ್ಹರಾಗಿರುತ್ತಾರೆ ಎಂದರು.

23 ರಂದು ಬೆಳಿಗ್ಗೆ 10 ಗಂಟೆಗೆ ಗುಲ ಸಿಂದ ಪಂಚಾಯಿತಿ ಆವರಣಕ್ಕೆ ಕಾನೂನು ರಥ ತೆರಳಲಿದ್ದು, ಅಧ್ಯಕ್ಷೆ ಕಾಂತರಾಜಮ್ಮ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಪಿಎನ್‍ಡಿಟಿ ಕಾಯ್ದೆ ಕುರಿ ತಂತೆ ವಕೀಲರಾದ ಬಿ.ಕೆ.ವೆಂಕಟರಮಣೇ ಗೌಡ ಮತ್ತು ಲತಾಮಣಿ ಮಾಹಿತಿ ನೀಡ ಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬಾಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ವಕೀಲ ರಾದ ಸಿ.ಎಲ್.ಭಾಗ್ಯ ಮತ್ತು ಅನ್ನಪೂರ್ಣ ಅವರು ಪೆÇೀಕ್ಸೋ ಕಾಯ್ದೆ ಮತ್ತು ಜನನ ಮತ್ತು ಮರಣ ಕಾಯ್ದೆ, ಬಾಲ್ಯವಿವಾಹ ಕುರಿತಂತೆ ಮಾತನಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಗೋವಿನಕೆರೆ ಪಂಚಾಯಿತಿ ಆವರಣದಲ್ಲಿ ವಕೀಲರಾದ ಟಿ.ಕೆ.ಹಲಗಪ್ಪ ಮತ್ತು ಪದ್ಮಾವತಿ, ಬಾಧಿತರ ಪರಿಹಾರ ಯೋಜನೆ ಮತ್ತು ರಾಜೀ ಸಂಧಾನದ ಬಗ್ಗೆ ಮಾತನಾಡಿ ತಿಳಿವಳಿಕೆ ಮೂಡಿಸಲಿ ದ್ದಾರೆ ಎಂದು ಹೇಳಿದರು.

ಮೇ 24ರಂದು ಉದಯಪುರ ಪಂಚಾ ಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷ ಕಾಂತರಾಜು ಅಧ್ಯಕ್ಷತೆಯಲ್ಲಿ ವಕೀಲರಾದ ಕೆ.ಎನ್.ಸುಂದರ್‍ರಾಜ್ ಮತ್ತು ಎಂ. ಆರ್.ನಿಂಗರಾಜಯ್ಯ ಅವರು ಆಸ್ತಿ ಹಕ್ಕು, ನೋಂದಣಿ ಕಾಯ್ದೆ ಹಾಗೂ ಕರ್ನಾಟಕ ಪೆÇಲೀಸ್ ಕಾಯ್ದೆ ಕುರಿತಂತೆ ವಿಷಯ ಗಳನ್ನು ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬರಗೂರು ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಕೆಂಪಮ್ಮ ಅಧ್ಯಕ್ಷತೆ ಯಲ್ಲಿ ಮಕ್ಕಳ ಪಾಲನೆ ಮತ್ತು ಸಂರಕ್ಷಣೆ ಹಾಗೂ ಪಂಚಾಯತ್ ರಾಜ್ ಕಾಯ್ದೆ ಹಾಗೂ ಮೂಲ ಹಕ್ಕುಗಳ ಬಗ್ಗೆ ಕ್ಷೇತ್ರ ಶಿಕ್ಷಣಾ ಧಿಕಾರಿ ಎಚ್.ಕೆ.ಪುಷ್ಪಲತಾ ಮತ್ತು ವಕೀಲ ರಾದ ಲತಾಮಣಿ ಉಪನ್ಯಾಸ ನೀಡಲಿದ್ದು, ಬ್ಯಾಡರಹಳ್ಳಿ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ವಕೀಲರಾದ ಸುಧಾ ಮತ್ತು ಟಿ.ಕೆ.ಹಲಗಪ್ಪ ಅವರು ಜನನ ಮತ್ತು ಮರಣ ಕಾಯ್ದೆ ಹಾಗೂ ಬಾಲ್ಯವಿವಾಹ ಕಾಯ್ದೆ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ ಎಂದರು.

ಈ ವೇಳೆ ಸಹಾಯಕ ಸರ್ಕಾರಿ ಅಭಿ ಯೋಜಕ ಹರೀಶ್, ತಾಪಂ ಕಾರ್ಯ ನಿರ್ವ ಹಣಾಧಿಕಾರಿ ಎಚ್.ಎಸ್.ಚಂದ್ರ ಶೇಖರ್, ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಮುರಳೀ ಧರ್, ಶಿಶು ಅಭಿವೃದ್ಧಿ ಅಧಿಕಾರಿ ಕೆ.ಶಾರದಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪುಷ್ಪಲತಾ, ಬಿಆರ್‍ಸಿ ವರಲಕ್ಷ್ಮೀ ಇದ್ದರು.

Translate »