ಹಾಸನ ತಾಲೂಕು ಪಂಚಾಯಿತಿ ಕೆಡಿಪಿ ಸಭೆ
ಹಾಸನ

ಹಾಸನ ತಾಲೂಕು ಪಂಚಾಯಿತಿ ಕೆಡಿಪಿ ಸಭೆ

January 8, 2019

ಎಂಎಸ್‍ಐಎಲ್‍ನಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ
ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ
ಹಾಸನ: ಸರ್ಕಾರದಿಂದ ತೆರೆ ಯಲ್ಪಟ್ಟಿರುವ ಎಂಎಸ್‍ಐಎಲ್ ಮದ್ಯ ದಂಗಡಿಯಲ್ಲಿ ಮದ್ಯದ ದರ ನಮೂದಿ ಸಿರುವ ನಾಮಫಲಕ ಹಾಕದೆ ಒಂದೊಂದು ಬಾಟಲಿಗೆ 5 ರಿಂದ 10 ರೂ.ಗಳ ಹೆಚ್ಚಿಗೆ ದರ ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ತಾಪಂ ಸದಸ್ಯರು ಮಾತ ನಾಡಿ, ಮದ್ಯದ ಬಾಟಲಿ ಮೇಲೆ ಮುದ್ರಿತ ವಾಗಿರುವ ದರಕ್ಕಿಂತ ಹೆಚ್ಚಿನ ದರವನ್ನು ಎಂಎಸ್‍ಐಎಲ್ ಮದ್ಯದಂಗಡಿಯಲ್ಲಿ ಗ್ರಾಹಕರು ನೀಡಬೇಕಾಗಿದೆ.
ಮದ್ಯದಂ ಗಡಿಗೆ ಹೋಗಿ ಪರಿಶೀಲಿಸಿ, ಮದ್ಯದ ಬಾಟಲಿ ಮೇಲೆ ಇರುವ ಎಂಆರ್‍ಪಿ ದರವನ್ನು ಮುಂದೆ ನಾಮಫಲಕದಲ್ಲಿ ಹಾಕಬೇಕು ಎಂಬ ಆದೇಶ ಇದ್ದರೂ ಯಾಕೆ ಪಾಲಿ ಸುತ್ತಿಲ್ಲ ಮತ್ತು ಸರ್ಕಾರ ಅಂಗಡಿಗಳಲ್ಲಿ ಹೆಚ್ಚಿನ ದರ ಪಡೆಯಲಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಯಾಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಅಬಕಾರಿ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿ ವೆಂಕಟೇಶ್, ಕಳೆದ ಮೂರು ತಿಂಗಳಿ ನಿಂದ ವಿವಿಧ ಕಡೆ ಅಬಕಾರಿ ದಾಳಿ ಮಾಡಿ, 42 ಕಡೆ ಭೇಟಿ ಮಾಡಿ 12 ಕೇಸುಗಳನ್ನು ದಾಖಲಿಸಲಾಗಿದ್ದು, ಬಂಧಿಸಿ ಜಿಲ್ಲಾ ಧಿಕಾರಿ ಮುಂದೆ ನಿಲ್ಲಿಸಲಾಗಿದೆ ಎಂದರು. ಇವರ ಉತ್ತರಕ್ಕೆ ಆಕ್ರೋಶಗೊಂಡ ಸದಸ್ಯರು ಎಂಆರ್‍ಪಿಯನ್ನು ಪಾಲಿಸದ ಮದ್ಯದಂ ಗಡಿ ಮೇಲೆ ನೀವು ಯಾವ ಪ್ರಕರಣ ದಾಖಲಿಸಿರುವುದಿಲ್ಲ. ಜೊತೆಗೆ ಬೆಲೆಯ ನಾಮಫಲಕ ಕೂಡ ಹಾಕಿರುವುದಿಲ್ಲ. ಎಂಎಸ್‍ಐಎಲ್‍ನಲ್ಲೇ ಹೆಚ್ಚು ಬೆಲೆ ಪಡೆ ದರೆ, ಉಳಿದ ಲಿಕ್ಕರ್ಸ್ ಶಾಪ್‍ನಲ್ಲಿ ಇನ್ನೆಷ್ಟು ಹಣ ಹೆಚ್ಚಿಗೆ ಪಡೆಯಬಹುದು ಎಂದು ಪ್ರಶ್ನಿಸಿದರು.
ಪುರದಮ್ಮದಲ್ಲಿರುವ ಎಂಎಸ್ ಐಎಲ್ ಮದ್ಯದಂಗಡಿಯಲ್ಲಿ ಒಂದು ಬಾಟಲಿಗೆ 15 ರೂ.ಗಳನ್ನು ಹೆಚ್ಚಿಗೆ ಪಡೆ ಯುತ್ತಿದ್ದಾರೆ. ಎಂಆರ್‍ಪಿ ಪಾಲಿಸದ ವರಿಗೆ ಎಷ್ಟು ಕೇಸು ಮಾಡಿದ್ದೀರಿ? ಯಾರೋ ಬಡವರಿಗೆ ಹೋಗಿ ಕೇಸು ಮಾಡುತ್ತಿದ್ದೀರಿ ಎಂದು ಸಿಡಿಮಿಡಿ ಗೊಂಡರು. ಮುಂದಿನ ಸಭೆಗೆ ಬರುವಾಗ ಯಾರ್ಯಾರಿಗೆ ಕೇಸು ದಾಖಲಿಸಿದ್ದೀರಿ ಎಂಬ ಪೂರ್ಣ ವಿವರದ ದಾಖಲೆ ಕೊಡಬೇಕು ಮತ್ತು ಬಾಟಲಿಗಳ ಮೇಲೆ ಇರುವ ದರದ ಪಟ್ಟಿಯನ್ನು ಕೂಡ ನೀಡಿ ಎಂದು ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಸೂಚಿಸಿದರು.

ತೋಟಗಾರಿಕೆ ಇಲಾಖೆ ವಿಚಾರವಾಗಿ ಮಾತನಾಡಿದ ಸದಸ್ಯರು, ತೋಟಗಾರಿಕೆ ಯಿಂದ ರೈತರಿಗೆ ಸಾಕಷ್ಟು ಯೋಜನೆ ಗಳಿವೆ. ಈ ಬಗ್ಗೆ ರೈತರಿಗೆ ಮೊದಲು ಮಾಹಿತಿ ಕೊಡಬೇಕು. ರೈತರ ಒಂದು ಬೆಳೆ ಬೆಳೆ ಯುವುದಿಲ್ಲ. ವರ್ಷಕ್ಕೆ ಮೂರು ಬೆಳೆ ರೈತರು ಬೆಳೆಯುತ್ತಾರೆ. ಪಾಣಿಯಲ್ಲಿ ಬೆಳೆ ಯನ್ನು ತಿಳಿಸೋಕೆ ಆಗಲ್ಲ. ಮಾಹಿತಿ ತರಿಸಿಕೊಂಡು ಅಂತಹ ರೈತರಿಗೆ ನೀವು ಗಮನ ಕೊಟ್ಟು ಅವಕಾಶ ಕಲ್ಪಿಸಬೇಕು. ತೋಟಗಾರಿಕೆ ಬೆಳೆಗೆ ಸಹಾಯಧನ ಯಾವುದು ಸಿಗುತ್ತಿಲ್ಲ ಎಂದು ದೂರಿ ದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಹನಿ ನೀರಾವರಿಗೆ ಸೇರಿದಂತೆ ಇತರೆಗೆ ಸಬ್ಸಿಡಿ ಧನ ರೈತರಿಗೆ ಕೊಡಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಕುರಿತು ಸದಸ್ಯರು ಮಾತ ನಾಡಿ, ಮಣ್ಣು ಪರೀಕ್ಷಾ ಕೇಂದ್ರಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿ ದೆಯಾ? ಯಾವ ಬೆಳೆ ಬೆಳೆಯಬೇಕು ಎಂಬು ದರ ಬಗ್ಗೆ ರೈತರಿಗೆ ಅರಿವು ಮೂಡಿಸ ಲಾಗುತ್ತಿದೆಯಾ? ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ರೈತರಿಗೆ ತಿಳುವಳಿಕೆ ಇಲ್ಲವಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಗ್ರಾಮ ಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಕ್ರಮವನ್ನು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಸದಸ್ಯರು ಇಲಾಖೆ ಅಧಿಕಾರಿ ಗಳಿಗೆ ಸಲಹೆ ನೀಡಿದರು.
ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮತ್ತು ಇತರೆ ಸಮಸ್ಯೆ ಬಗ್ಗೆ ಇಲಾಖೆ ಅಧಿಕಾರಿ ಗಳಿಗೆ ಯಾರಾದರೂ ತಿಳಿಸಿದರೆ ಸ್ಪಂದಿಸು ವುದಿಲ್ಲ ಎಂಬ ದೂರುಗಳು ಹೆಚ್ಚು ಕೇಳಿ ಬಂದಿದೆ. ಎಷ್ಟು ಕೊಳವೆ ಬಾವಿಗಳಿಗೆ ಅರ್ಜಿಗಳು ಬಂದಿದೆ. ಮುಂದೆ ಬೇಸಿಗೆ ಪ್ರಾರಂಭವಾಗುತ್ತದೆ.

ಯಾವ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗ ಬಾರದು. ಇದಕ್ಕೆ ನಿಮ್ಮ ಮೊದಲ ಆದ್ಯತೆ ಕೊಡಬೇಕು ಎಂದು ಅಧಿಕಾರಿಗಳಿಗೆ ಹೇಳಲಾಯಿತು. ನಿರಂತರ ಜ್ಯೋತಿ ಸಮ ರ್ಪಕವಾಗಿ ಆಗದ ಬಗ್ಗೆ ಸದಸ್ಯರು ಅಸ ಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ.ಸತೀಶ್, ಕಾರ್ಯನಿರ್ವ ಹಣಾಧಿಕಾರಿ ದೇವರಾಜೇಗೌಡ, ಉಪಾ ಧ್ಯಕ್ಷೆ ಬೇಬಿ, ಸಾಮಾಜಿಕ ಸ್ಥಾಯಿ ಸಮಿತಿ ಯು.ಕೆ.ಶಿವನಂಜಪ್ಪ ಇತರರರಿದ್ದರು.

Translate »