ರಾಮನಾಥಪುರ: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಪ್ರಚಾರದ ಜನ ಜಾಗೃತಿ ರಥಯಾತ್ರೆ ದಿಬ್ಬಣಕ್ಕೆ ಶರಣೆ ಶಾಂತಮ್ಮ ಮುಂತಾದವರು ಪೂಜೆ ಸಲ್ಲಿಸಿದರು.
ರಾಮನಾಥಪುರ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆಬ್ರವರಿ 1ರಿಂದ 6ರವರೆಗೆ ನಡೆಯುವ ಕಾರ್ಯಕ್ರಮದ ಪ್ರಯುಕ್ತ ಆಗಮಿಸಿರುವ ಜನಜಾಗೃತಿ ರಥಯಾತ್ರೆ ದಿಬ್ಬಣಕ್ಕೆ ವೀರಶೈವ ಮಹಾ ಸಭಾ, ಶರಣ ಸಾಹಿತ್ಯ ಪರಿಷತ್, ವಿವಿಧ ಸಮಾಜದ ಮುಖಂಡರು ಬರ ಮಾಡಿ ಕೊಂಡರು.
ಹಿರಿಯ ಮುಖಂಡ ವೀರಪ್ಪಾಜಿ, ವೀರಶೈವ ಮಹಾಸಭಾ ಅಧ್ಯಕ್ಷ ಕೋಟ ವಾಳು ವಿರುಪಾಕ್ಷ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರ ಸ್ವಾಮಿ, ಸಂಚಾಲಕ ಬಸವ ಪಟ್ಟಣ ಪಂಚಾಕ್ಷರಿ, ಸದಸ್ಯರಾದ ಮೆಡಿಕಲ್ ಸಂತೋಷ್, ಸುಬ್ಬರಾಯಿ, ಮಹೋತ್ಸವ ಸಮಿತಿ ಸಂಚಾಲಕರಾದ ಗುರುಲಿಂಗಪ್ಪ, ಮಹದೇವಸ್ವಾಮಿ, ಕುಮಾರ್, ಪ್ರದೀಪ್, ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.