ಬೇಲೂರಿನ ಎಸ್‍ಬಿಐನಲ್ಲಿ ಸಾಲಮೇಳ
ಹಾಸನ

ಬೇಲೂರಿನ ಎಸ್‍ಬಿಐನಲ್ಲಿ ಸಾಲಮೇಳ

January 8, 2019

ಬೇಲೂರು: ಪಟ್ಟಣದ ಎಸ್‍ಬಿಐ ಬ್ಯಾಂಕಿನಿಂದ ಸಾಲ ಮೇಳ ಕಾರ್ಯಕ್ರಮ ವನ್ನು ಉದ್ಘಾಟಿಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬೇಲೂರು ನ್ಯಾಯಾಲಯದ ನ್ಯಾಯಾ ಧೀಶ ಶಶಿಧರ್ ಎಂ.ಗೌಡ ಅವರು, ಬ್ಯಾಂಕಿನ ಇತಿಹಾಸವನ್ನು ಕಂಡಂತೆ ಸ್ವತಂತ್ರ ಪೂರ್ವದಲ್ಲಿ ಆರ್ಥಿಕವಾಗಿ ಸಬಲೀಕರಣ ವಾಗಿ ಇರುವವರು ಮಾತ್ರ ಬ್ಯಾಂಕಿನ ವಹಿ ವಾಟುಗಳನ್ನು ನಿರ್ವಹಿಸುತ್ತಿದ್ದರು. ಬಡ ವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕೈಗೆ ಎಟುಕದ ವಸ್ತುವಾಗಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಎಲ್ಲಾ ಬಡವರೂ ಹಾಗೂ ಪ್ರತಿಯೊಬ್ಬ ನಾಗರಿಕರೂ ಕೂಡ ಬ್ಯಾಂಕಿನ ವಹಿವಾಟುಗಳನ್ನು ನಡೆಸಬ ಹುದು. ಇದು ಸರ್ಕಾರದ ಮಹದಾಸೆ ಯಾಗಿದೆ. ಈ ಸಾಲ ಮೇಳ ಕಾರ್ಯ ಕ್ರಮವು ಕಾರು, ಮನೆ ಲೋನ್ ಹಾಗೂ ಇನ್ನಿತರ ವಿವಿಧ ವ್ಯವಹಾರಗಳಿಗೆ ಸಾಲ ಕೊಡುವ ಮಹತ್ವಾಕಾಂಕ್ಷೆಗಳು ಸಾರ್ವ ಜನಿಕರಿಗೆ ನೆರವು ನೀಡುವ ವ್ಯವಸ್ಥೆಯಾ ಗಿದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿ ಕೊಳ್ಳಬೇಕೆಂದು ತಿಳಿಸಿದರು.

ಹಿಂದೆ ಸಾಲ ಸೌಲಭ್ಯಗಳನ್ನು ನೀಡ ಬೇಕೆಂದರೆ ದಾಖಲಾತಿಗಳನ್ನು ನಿಖರ ವಾಗಿ ಕೊಟ್ಟರೂ ಕೂಡ ಹಲವು ಬಾರಿ ಅಲೆದಾಡುವ ಸ್ಥಿತಿ ಉಂಟಾಗುತ್ತಿತ್ತು. ಸಾಲ ಕೊಡಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಇತ್ತೀಚೆಗೆ ಅತೀ ಶೀಘ್ರದಲ್ಲೇ ಸಾಲ ಕೊಡುವ ವ್ಯವಸ್ಥೆ ಬಂದಿದೆ. ಕೇವಲ 5-6 ದಿನಗಳಲ್ಲೇ ಸಾಲ ಮಂಜೂರಾತಿ ಮಾಡಿ ಕೊಡುತ್ತಾರೆ ಎಂದರು.

ಬ್ಯಾಂಕ್‍ನ ಸೀನಿಯರ್ ಮ್ಯಾನೇಜರ್ ರಮೇಶ್ ಬಾಬು ಮಾತನಾಡಿ, ಗ್ರಾಹಕರ ಸೇವೆ ಗಮನದಲ್ಲಿಟ್ಟುಕೊಂಡ ಎಸ್‍ಬಿಐ, ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲು ಮುಂದಾ ಗಿದೆ. ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲು ಹಾಗೂ ಅನುಕೂಲ ವಾಗುವ ರೀತಿಯಲ್ಲಿ ಸಾಲ ತೀರಿಸಲು ಈ ಸಾಲ ಮೇಳ ಮಾಡಿದೆ. ಕೃಷಿಕರಿಗೆ, ಹೌಸಿಂಗ್ ಬೋರ್ಡ್. ಬೈಕ್, ಕಾರ್ ಲೋನ್ ಕೂಡ ಪಡೆಯಬಹುದು ಮತ್ತು ಚಿನ್ನವನ್ನು ಕೂಡ ಇಡಬಹುದು. ಬೇಲೂರಿನ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಶೇ.4 ಬಡ್ಡಿ ಮಾತ್ರ ಬರುತ್ತದೆ. ಮೂರು ತಿಂಗಳಲ್ಲಿ ಸಾಲ ಪಡೆಯಬಹುದು. ನಮ್ಮ ಮೂರು ಶಾಖೆಗಳಲ್ಲಿ ಸಾಲವನ್ನು ಕೊಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ನಿರ್ಮ ಲಾಂಬ, ರಾಜನ್ ಮತ್ತು ನಾಗರಿಕರು ಉಪಸ್ಥಿತರಿದ್ದರು. ಈ ಸಾಲ ಮೇಳದಲ್ಲಿ ಸಾಲ ಪಡೆದುಕೊಂಡ ಪಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

Translate »