ಹೇಮಾವತಿ ಭರ್ತಿಗೆ 22 ಅಡಿಯಷ್ಟೇ ಬಾಕಿ
ಹಾಸನ

ಹೇಮಾವತಿ ಭರ್ತಿಗೆ 22 ಅಡಿಯಷ್ಟೇ ಬಾಕಿ

June 21, 2018

ಹಾಸನ: ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಾಸನದ ಜೀವ ನದಿ ಹೇಮಾ ವತಿಗೆ ಒಳ ಹರಿವು ಕೂಡ ಹೆಚ್ಚಿದ್ದು, ಜಲಾಶಯ ಭರ್ತಿಗೆ 22 ಅಡಿಗಳಷ್ಟೇ ಬಾಕಿ ಇದೆ.

ಹೇಮಾವತಿ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮಥ್ರ್ಯ 2922 ಅಡಿಗಳು. ಹಾಸನ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಹೇಮಾವತಿಗೆ 2,900.37 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾ ಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹಣಾ ಸಾಮಥ್ರ್ಯ 37.103 ಟಿಎಂಸಿ. ಪ್ರಸ್ತುತದಲ್ಲಿ ನೀರಿನ ಸಂಗ್ರಹ 19.92 ಟಿಎಂಸಿ ಇದೆ.

ಕಳೆದ ವರ್ಷ ಇದೇ ದಿನದಲ್ಲಿ 3.35 ಟಿಎಂಸಿ ನೀರು ಮಾತ್ರ ಸಂಗ್ರಹವಿತ್ತು. ಪ್ರಸ್ತುತ ನೀರಿನ ಒಳ ಹರಿವಿನ ಪ್ರಮಾಣ 4760 ಕ್ಯೂಸೆಕ್ ಇದ್ದರೆ ಕಳೆದ ವರ್ಷ 8859 ಕ್ಯೂಸೆಕ್‍ಗಳಿತ್ತು. ಮತ್ತು 200 ಕ್ಯೂಸೆಕ್ ಒಳ ಹರಿವಿದ್ದರೆ ಕಳೆದ ವರ್ಷ 150 ಕ್ಯೂಸೆಕ್‍ಗಳಷ್ಟಿತ್ತು. ಒಟ್ಟಾರೆ ಕಳೆದ ನಾಲ್ಕೈದು ವರ್ಷ ಗಳಿಂದ ಬರದ ಬೇಗೆಯಿಂದ ಬಸವಳಿದಿದ್ದ ಹೇಮಾವತಿ ಜಲಾನಯನ ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಹೇಮೆ ಒಡಲಿನಲ್ಲಿ ಉತ್ತಮ ನೀರು ಸಂಗ್ರಹವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

Translate »