ದೇಹ-ಮನಸ್ಸು ಸಮತೋಲನಕ್ಕೆ ಯೋಗ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಮತ
ಹಾಸನ

ದೇಹ-ಮನಸ್ಸು ಸಮತೋಲನಕ್ಕೆ ಯೋಗ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಮತ

June 21, 2018

ಹಾಸನ: ದೇಹ ಮನಸ್ಸುಗಳೆರಡನ್ನು ಸಮತೋಲನ ಮಾಡಿಕೊಳ್ಳುವ ಶಕ್ತಿ ಯೋಗಕ್ಕಿದ್ದು, ಇಂದು ವಿಶ್ವ ಮನ್ನಣೆ ಪಡೆದಿದೆ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವಕೇಂದ್ರ, ಎನ್‍ಎಸ್‍ಎಸ್, ಎನ್‍ಸಿಸಿ, ರೆಡ್ ಕ್ರಾಸ್, ಪತಂಜಲಿ ಯೋಗ ಪರಿವಾರ, ಸುಗ್ಗಿ-ಹುಗ್ಗಿ ಸಾಂಸ್ಕೃತಿಕ ಯುವಕ ಸಂಘ ಸಂಯುಕ್ತಾ ಶ್ರಯದಲ್ಲಿ ಸರ್ಕಾರಿ ಕಲಾ ವಾಣಿಜ್ಯ ಹಾಗೂ ಸ್ನಾತಕೋತ್ತರ ಸ್ವಾಯತ್ತ ಕಾಲೇಜು ಸಭಾಂಗಣ ದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಯೋಗ ಪ್ರಾತ್ಯಕ್ಷಿಕೆ ಹಾಗೂ ಜಿಲ್ಲಾ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ಪದ್ಧತಿಯನ್ನು ಪ್ರತಿಯೊಬ್ಬರೂ ಅನುಸರಿ ಸಿದಾಗ ದೇಹ ಹಾಗೂ ಮನಸ್ಸಿನ ಆರೋಗ್ಯ ಸಾಧ್ಯ. ಯೋಗಕ್ಕೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಇದನ್ನು ಅರಿತ ವಿದೇಶಿಯರು ಯೋಗಾ ಭ್ಯಾಸದಲ್ಲಿ ತೊಡಗುತ್ತಿದ್ದಾರೆ. ಭಾರತೀಯರಾದ ನಾವು ನಮ್ಮದೇ ನೆಲದ ಶಕ್ತಿಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪ್ರಾಸ್ತಾವಿಕ ನುಡಿಗಳ ನ್ನಾಡಿದ ಪತಾಂಜಲಿ ಯೋಗ ಸಮಿತಿ ಅಧ್ಯಕ್ಷ ಹರಿಹರಪುರ ಶ್ರೀಧರ್, ಯೋಗ ಭಾರತೀಯ ಸಂಸ್ಕøತಿ, ಪರಂಪರೆಯ ಪ್ರತೀಕ. ಪಾಶ್ಚಿಮಾತ್ಯ ದೇಶಗಳು ಯೋಗ ಶಿಕ್ಷಣಕ್ಕೆ ಮಾರು ಹೋಗುತ್ತಿವೆ. ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮನ್ನಣೆ ನೀಡಿರುವುದು ಇದರ ಹಿರಿಮೆಗೆ ಸಾಕ್ಷಿ. ಪತಂಜಲಿ ಮಹರ್ಷಿಗಳು ಕಲಿಸಿದ ಯೋಗಾಭ್ಯಾಸಕ್ಕೆ ಯಾವುದೇ ಜಾತಿ, ಧರ್ಮಗಳ ಹಾಗೂ ವಯೋಮಾನ ಲಿಂಗಗಳ ಅಂತರವಿಲ್ಲ, ಸಮಾನ ಮಾನಸಿಕ ಚಿಂತನೆಗೆ ಯೋಗಾಭ್ಯಾಸ ಸಹಕಾರಿ ಎಂದರು.

ಎವಿಕೆ ಕಾಲೇಜು ಪ್ರಾಧ್ಯಾಪಕ ಡಾ.ಯತೀಶ್ವರ್ ಉಪನ್ಯಾಸ ನೀಡಿ, ವಿಶ್ವದ 190 ರಾಷ್ಟ್ರಗಳಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಶರೀರ ಹಾಗೂ ಮನಸ್ಸುಗಳ ಸ್ವಾಸ್ಥ್ಯ ಕಾಪಾಡಲು ಯೋಗ ಸಹಕಾರಿ ಎಂದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್‍ಚಂದ್ರ ಅವರು ಯೋಗದ ಮಹತ್ವ ಹಾಗೂ ವಿಶ್ವ ಯೋಗ ದಿನಾ ಚರಣೆ ಉದ್ದೇಶಗಳ ಬಗ್ಗೆ ವಿವರಿಸಿದರು. ಭಾರತ್ ಸ್ವಾಭಿಮಾನಿ ಟ್ರಸ್ಟ್‍ನ ಜಿಲ್ಲಾ ಪ್ರಭಾರಿ ಶೇಷಪ್ಪ, ಯೋಗದ ಅನುಕೂಲಗಳನ್ನು ವಿವರಿಸಿದರು. ಸರ್ಕಾರಿ ಸ್ನಾತ್ತಕೋತ್ತರ ಕಾಲೇಜಿನ ಡೀನ್ ಪ್ರೊ.ವೈ.ಪಿ.ಮಲ್ಲೇಶ್‍ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಅನಂತಪ್ಪ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಬಿ.ಟಿ.ಮಾನವ, ಪ್ರಾಧ್ಯಾಪಕ ಹೊನ್ನೇಗೌಡ ಮತ್ತಿತರರಿದ್ದರು.

ಇದೇ ವೇಳೆ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಯುವ ಭಾರತ್ ಸಂಸ್ಥೆಯ ಜಿಲ್ಲಾ ಸಹ ಪ್ರಭಾರಿ ಮಂಜುನಾಥ್, ಸಹ ಪ್ರಭಾರಿ ಗಿರೀಶ್, ಮಹಿಳಾ ಪತಂಜಲಿ ಯೋಗ ಸಮಿತಿ ಸಹ ಪ್ರಭಾರಿ ರುಕ್ಮಿಣಿ ದೇವರಾಜ್ ಅವರು ಪ್ರಾತ್ಯಕ್ಷಿಕೆ ನೇತೃತ್ವ ವಹಿಸಿದ್ದರು.

Translate »