ಜಿಪಂ 777.28 ಕೋಟಿ ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯಕ್ಕೆ ಸಿಂಹಪಾಲು
ಮಂಡ್ಯ

ಜಿಪಂ 777.28 ಕೋಟಿ ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯಕ್ಕೆ ಸಿಂಹಪಾಲು

June 21, 2018
  • ಸಿಇಓ ಶರತ್ ಹೊರಗಿಟ್ಟು ಬಜೆಟ್ ಮಂಡಿಸಿದ ಅಧ್ಯಕ್ಷೆ ನಾಗರತ್ನ
  • ಅನುದಾನ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ ಸಭೆ ಬಹಿಷ್ಕರಿಸಿದ ಸದಸ್ಯ ಶಿವಣ್ಣ
  • ತಾಪಂಗೆ ಅತೀ ಹೆಚ್ಚು, ಗ್ರಾಪಂಗಳಿಗೆ ಅತಿ ಕಡಿಮೆ ಅನುದಾನ ಹಂಚಿಕೆ

ಮಂಡ್ಯ: ನಗ ರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು, ರೂ.265.31 ಕೋಟಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯ ಕ್ರಮಗಳಿಗೆ, ರೂ.510.83 ಕೋಟಿಯನ್ನು ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ಮತ್ತು ರೂ.1.14 ಕೋಟಿಯನ್ನು ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಿಗೆ ಅನುದಾನ ವನ್ನು ಹಂಚಿಕೆ ಮಾಡಲಾಗಿದೆ ಎಂದರು.

2018-19ನೇ ಸಾಲಿಗೆ ಸರ್ಕಾರದಿಂದ ಜಿಪಂ ಕಾರ್ಯಕ್ರಮದಡಿ ರೂ. 77728.43 ಲಕ್ಷಗಳನ್ನು ಜಿಲ್ಲೆಗೆ ಹಿಂದಿನ ವರ್ಷಕ್ಕಿಂತ ಒಟ್ಟಾರೆ ರೂ. 1117.82 ಲಕ್ಷಗಳ ಅನುದಾನ ವನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಶಿಕ್ಷಣಕ್ಕೆ ಸಿಂಹಪಾಲು: ಈ ಸಾಲಿನಲ್ಲಿ ಶಿಕ್ಷಣಕ್ಕೆ ಸಿಂಹಪಾಲು ಅನುದಾನ ಘೋಷಿ ಸಲಾಗಿದೆ. ಶಿಕ್ಷಣ ಇಲಾಖೆಯ ಎಲ್ಲಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು 437.13 ಕೋಟಿ ರೂ. ಅನುದಾನ ಹಂಚಿಕೆ ಮಾಡ ಲಾಗಿದೆ. ಬಿಸಿಯೂಟ ಕಾರ್ಯಕ್ರಮಕ್ಕೆ 47.65 ಕೋಟಿ ರೂ. ನಿಗದಿಪಡಿಸಿದೆ. ಕಳೆದ ವರ್ಷ ಬಿಸಿಯೂಟಕ್ಕೆ 40.42 ಕೋಟಿ ರೂ. ಹಣ ವನ್ನು ಒದಗಿಸಿದ್ದು, ಈ ಬಾರಿ 7.233 ಕೋಟಿ ರೂ. ಹೆಚ್ಚುವ ಅನುದಾನ ಒದಗಿಸಲಾಗಿದೆ.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ 9 ಲಕ್ಷ ರೂ. ನಿಗದಿಯಾಗಿದೆ. ಜಿಲ್ಲೆಯಲ್ಲಿ 234 ಗ್ರಾಮ ಲೋಕ ಶಿಕ್ಷಣ ಸಮಿತಿಗಳಿದ್ದು, ಆಯ್ದ ಗ್ರಾ.ಪಂ.ಗಳಲ್ಲಿ ಮೂಲ ಸಾಕ್ಷರತೆ ಹಮ್ಮಿ ಕೊಳ್ಳಲಾಗಿದೆ. ಜನ್-ಧನ್, ಬಾಲ್ಯ ವಿವಾಹ ನಿಷೇಧ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಸ್ವಚ್ಛ ಭಾರತ್ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ವಿವರಿಸಿದರು.

ಕ್ರೀಡೆಗೆ ಆದ್ಯತೆ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 1.54 ಕೋಟಿ ಹಣ ಒದಗಿಸಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕ್ರೀಡಾಂಗಣ ಸೇರಿದಂತೆ 6 ತಾಲೂಕು ಕ್ರೀಡಾಂಗಣಗಳಿದ್ದು, ಶ್ರೀರಂಗ ಪಟ್ಟಣದಲ್ಲಿ ಒಂದು ತಾಲೂಕು ಯುವಜನ ಕೇಂದ್ರವಿದೆ. ಯೋಜನೆಯ ಅನುದಾನದಲ್ಲಿ ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಸದರಿ ಅನುದಾನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವೇತನ, ಕಚೇರಿ ವೆಚ್ಚ, ಅಂತರ ರಾಷ್ಟ್ರ, ರಾಷ್ಟ್ರ ಹಾಗೂ ರಾಜ್ಯ ಮಟ್ಟ ದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಪೆÇ್ರೀತ್ಸಾಹಧನ, ಸಂಘ ಸಂಸ್ಥೆಗಳಿಗೆ ಕ್ರೀಡಾ ಸಲಕರಣೆಗಳನ್ನು ಕೊಳ್ಳಲು ಅನುದಾನ, ಗ್ರಾಮಾಂತರ ಪ್ರದೇಶದ ಆಟದ ಮೈದಾನ ಗಳ ಅಭಿವೃದ್ಧಿ, ಕ್ರೀಡಾಕೂಟಗಳನ್ನು ನಡೆಸು ವುದು, ಪರಿಸರ, ಹಿರಿಯ ನಾಗರಿಕರ, ಮಹಿಳಾ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಅಂಗ ವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.

ಆಸ್ಪತ್ರೆ ಕಟ್ಟಡ ದುರಸ್ತಿಗೆ ಒತ್ತು: ಆರೋಗ್ಯ ಇಲಾಖೆಗೆ 56.92 ಕೋಟಿ ರೂ. ನೀಡಿದ್ದು, ಈ ಹಣದಲ್ಲಿ ಕಟ್ಟಡಗಳ ದುರಸ್ತಿಗೆ 69 ಲಕ್ಷರೂ, ಸಲಕರಣೆಗಳ ಖರೀದಿ, ರಿಪೇರಿಗೆ 18 ಲಕ್ಷ ರೂ, ಸಾಮಗ್ರಿಗಳ ಖರೀದಿಗೆ 18 ಲಕ್ಷ ರೂ ಹಾಗೂ ತಾ.ಪಂ. ಲೆಕ್ಕ ಶೀರ್ಷಿಕೆಯಲ್ಲಿ ಸಾಮಗ್ರಿಗಳ ಖರೀದಿಗಾಗಿ 18 ಲಕ್ಷ ರೂ. ಗಳನ್ನು ಉಪಯೋಗಿಸಿಕೊಳ್ಳಲು ನಿರ್ಧರಿ ಸಲಾಗಿದೆ ಎಂದರು.

ಬುಡಕಟ್ಟು ಯೋಜನೆಗೆ ಅನುದಾನ: ಸಮಾಜ ಕಲ್ಯಾಣ ಇಲಾಖೆಗೆ 42.72 ಕೋಟಿ ರೂ. ನಿಗದಿಯಾಗಿದೆ. ಜಿ.ಪಂ. ಕಾರ್ಯಕ್ರಮ ಗಳಿಗೆ 17.24 ಕೋಟಿ, ತಾ.ಪಂ. ಕಾರ್ಯ ಕ್ರಮಗಳಿಗೆ 25.47 ಕೋಟಿ, ಈ ಪೈಕಿ ಪರಿ ಶಿಷ್ಟ ಜಾತಿ ಉಪಯೋಜನೆಗೆ 1.58 ಕೋಟಿ ರೂ., ಬುಡಕಟ್ಟು ಯೋಜನೆಗೆ 32ಲಕ್ಷರೂ. ಅನುದಾನ ಒದಗಿಸಲಾಗಿದೆ ಎಂದರು.

ಪಶುಪಾಲನಾ ಇಲಾಖೆ ಹೆಚ್ಚಿನ ಅನುದಾನ: ಕೃಷಿ ಇಲಾಖೆಗೆ ಪ್ರಸಕ್ತ ವರ್ಷ 8.18 ಕೋಟಿ ರೂ. ಅನುದಾನ ನೀಡಿದ್ದರೆ, ತೋಟಗಾರಿಕೆ ಇಲಾಖೆಗೆ 7.24 ಕೋಟಿ ರೂ. ಅನುದಾನ ಒದಗಿಸಿದೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವೆಗಳಿಗೆ 26.01 ಕೋಟಿ ರೂ. ಹಣ ಒದಗಿಸಲಾಗಿದೆ. ವೇತನಕ್ಕಾಗಿ 23.34 ಕೋಟಿ ರೂ., ವೇತನೇತರ ಬಾಬ್ತು 2.67 ಕೋಟಿ ರೂ. ಹಣವನ್ನು ಒದಗಿಸಿ ರುವುದಾಗಿ ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳ ವಿವಿಧ ಲೆಕ್ಕಶೀರ್ಷಿಕೆ ಯಡಿ 82.05 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದಂತೆ ಐಸಿಡಿಎಸ್ ಘಟಕದ ಆಡಳಿತ ವೆಚ್ಚ ಲೆಕ್ಕ ಶೀರ್ಷಿಕೆ ವೇತನಾಂಶಕ್ಕಾಗಿ 37 ಲಕ್ಷ, ಹೊರ ಗುತ್ತಿಗೆ ಸಿಬ್ಬಂದಿ ವೇತನಕ್ಕೆ 3 ಲಕ್ಷ ಸೇರಿ ಒಟ್ಟು 40 ಲಕ್ಷ ಮೀಸಲಿಟ್ಟಿದ್ದರೆ, ಆಡಳಿತ ಮತ್ತು ನಿರ್ದೇಶನದ ಆಡಳಿತ ವೆಚ್ಚ ಹಾಗೂ ಅಧಿಕಾರಿ, ಸಿಬ್ಬಂದಿ ವೇತನ ಕ್ಕಾಗಿ 15 ಲಕ್ಷ, ವೇತನೇತರ ಬಾಬ್ತು 5.72 ಲಕ್ಷ, ಹೊರಗುತ್ತಿಗೆಗಾಗಿ 3 ಲಕ್ಷ ಸೇರಿ ಒಟ್ಟು 23.72 ಲಕ್ಷ ಅನುದಾನ ನಿಗದಿಪಡಿಸ ಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷೆ ಪಿ.ಕೆ.ಗಾಯಿತ್ರಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್. ಯೋಗೇಶ್, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಬೋರಯ್ಯ, ಉಪ ಕಾರ್ಯದರ್ಶಿ ಕೃಷ್ಣರಾಜು ಸೇರಿದಂತೆ ಇತರರು ಹಾಜರಿದ್ದರು.

ಸಭೆಯಿಂದ ಹೊರಗುಳಿದ ಸಿಇಓ

ಮಂಡ್ಯ: ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ ಇನ್ನೂ ಕೂಡ ಮುಂದುವರೆದಿದ್ದು ಅಧ್ಯಕ್ಷೆ ನಾಗರತ್ನ ಅವರು, ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಬಿ.ಶರತ್ ಅವರನ್ನು ಸಭೆಯಿಂದ ಹೊರಗಿಟ್ಟು ಬಜೆಟ್ ಮಂಡಿಸಿದ ಪ್ರಸಂಗ ನಡೆಯಿತು. ವಿಧಾನಸಭಾ ಚುನಾವಣೆಗೂ ಮುಂಚಿನಿಂದಲೂ ಸಿಇಓ ಶರತ್ ಮತ್ತು ಅಧ್ಯಕ್ಷರು, ಸದಸ್ಯರ ನಡುವೆ ಹಲವು ವಿಚಾರಗಳಲ್ಲಿ ತಿಕ್ಕಾಟ ನಡೆದಿತ್ತು. ಹಲವು ಬಾರಿ ಸಭೆ ಕರೆಯುವಂತೆ ಮನವಿ ಮಾಡಿದ್ದರೂ ಕರೆಯುತ್ತಿಲ್ಲ ಎಂದು ಅಧ್ಯಕ್ಷೆ ಹಾಗೂ ಸದಸ್ಯರು ಸಿಇಓ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇಂದಿನ ಸಭೆ ಹಾಗೂ ಬಜೆಟ್ ಮಂಡನಾ ವಿಶೇಷ ಪೂರ್ವ ಸಭೆಯಲ್ಲೂ ಸಿಇಓ ವಿರುದ್ಧ ಅಸಮಾಧಾನ ಹೊರಹಾಕಿರುವ ಅಧ್ಯಕ್ಷೆ ನಾಗರತ್ನ ಹಾಗೂ ಸದಸ್ಯರು ಅವರನ್ನು ಹೊರಹೋಗುವ ತನಕವೂ ಸಭೆಗೆ ಹಾಜರಾಗಿರಲಿಲ್ಲ. ಸಭೆ 11 ಗಂಟೆಗೆ ನಿಗದಿಯಾಗಿತ್ತು. ಸಿಇಓ ಬಿ.ಶರತ್ ಅವರು ಸರಿಯಾದ ಸಮಯಕ್ಕೆ ಸಭಾಂಗಣಕ್ಕೆ ಆಗಮಿಸಿದರು. 11.50ರವರೆಗೂ ಯಾವೊಬ್ಬ ಸದಸ್ಯರೂ ಸಭಾಂಗಣದತ್ತ ಮುಖಮಾಡ ಲಿಲ್ಲ. ಅಧ್ಯಕ್ಷೆ ನಾಗರತ್ನ ಅವರು ತಮ್ಮ ಕೊಠಡಿಯಲ್ಲೇ ಸದಸ್ಯರೊಂದಿಗೆ ಕುಳಿತಿದ್ದರು.

12 ಗಂಟೆ ಸುಮಾರಿಗೆ ಸಿಇಓ ಅವರು ತಮ್ಮ ಕೊಠಡಿಯತ್ತ ತೆರಳಿದರು. ಆ ಬಳಿಕ ಅಧ್ಯಕ್ಷೆ ನಾಗರತ್ನ ಅವರ ಪತಿ ಸ್ವಾಮಿ ಅವರು ಅಲ್ಲಿಗೆ ತೆರಳಿ ಸಿಇಓ ಅವರೊಂದಿಗೆ ಮಾತುಕತೆ ನಡೆಸಿದರು. ಸಭೆಗೆ ಸಿಇಓ ಗೈರು ಹಾಜರಾದರೆ ಮಾತ್ರ ಬಜೆಟ್ ಮಂಡನೆ ನಡೆಯುತ್ತದೆ ಎಂದು ಮನವೊಲಿಸಿದರು ಎಂದು ತಿಳಿದು ಬಂದಿದೆ. ಅದರಂತೆ ಸಿಇಓ ಶರತ್ ಅವರು ಕೊಠಡಿಯಲ್ಲಿದ್ದರೂ ಸಭಾಂಗಣದತ್ತ ಸುಳಿಯಲಿಲ್ಲ. ನಂತರ ಸಿಇಓ ಗೈರು ಹಾಜರಿನಲ್ಲಿ ಉಪಕಾರ್ಯದರ್ಶಿ ಕೃಷ್ಣರಾಜು ಸಮ್ಮುಖದಲ್ಲಿ ಬಜೆಟ್ ಮಂಡಿಸಿದರು.

ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಿಇಓ ಶರತ್, ಅನಾರೋಗ್ಯ ಕಾರಣದಿಂದ ಬಜೆಟ್ ಮಂಡನಾ ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆ ಬಹಿಷ್ಕರಿಸಿದ ಸದಸ್ಯ ಶಿವಣ್ಣ

ಅನುದಾನ ಹಂಚಿಕೆಯಲ್ಲಿನ ತಾರತಮ್ಯತೆ ಖಂಡಿಸಿ ಬಸರಾಳು ಕ್ಷೇತ್ರದ ಸದಸ್ಯ ಚಂದಗಾಲು ಶಿವಣ್ಣ ಅವರು ಜಿ.ಪಂ ಬಜೆಟ್ ಮಂಡನಾ ಸಭೆಯನ್ನು ಬಹಿಷ್ಕರಿಸಿದ ಪ್ರಸಂಗವೂ ಜರುಗಿತು. ನಿಗದಿತ ಸಮಯಕ್ಕೆ ಆರಂಭವಾದ ಸಭೆಗೆ ಚಂದಗಾಲು ಶಿವಣ್ಣ, ಬಜೆಟ್ ಮಂಡನೆಯ ಕೆಲಹೊತ್ತಿನವರೆಗೂ ಸಭೆಯಲ್ಲಿದ್ದರೂ, ತಮ್ಮ ಬಸರಾಳು ಕ್ಷೇತ್ರಕ್ಕೆ ಅಗತ್ಯ ಅನುದಾನ ದೊರಕಿಲ್ಲವೆಂಬ ಮಾಹಿತಿ ದೊರೆತ ಕೆಲವೇ ಕ್ಷಣದಲ್ಲಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧ ಅಸಮಾಧಾನ ಹೊರಹಾಕಿದರು. ತಮ್ಮ ಕ್ಷೇತ್ರಕ್ಕೆ ಸೂಕ್ತ ಅನುದಾನ ದೊರತಿಲ್ಲ. ಕ್ಷೇತ್ರದ ಮತದಾರರ ಸಮಸ್ಯೆಗೆ ಸ್ಪಂದಿಸಲಾಗುತ್ತಿಲ್ಲ. ನಾವಿಲ್ಲಿದ್ದು ಪ್ರಯೋಜನವೇನು ಎಂದು ಆಕ್ರೋಶವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

Translate »