ಗನ್‍ಮ್ಯಾನ್ ಮೂಲಕ ಗಲೀಜಾದ ಶೂ, ಬಟ್ಟೆ ಸ್ವಚ್ಛಪಡಿಸಿಕೊಂಡ ಗೃಹ ಸಚಿವರು!
ಮೈಸೂರು

ಗನ್‍ಮ್ಯಾನ್ ಮೂಲಕ ಗಲೀಜಾದ ಶೂ, ಬಟ್ಟೆ ಸ್ವಚ್ಛಪಡಿಸಿಕೊಂಡ ಗೃಹ ಸಚಿವರು!

September 5, 2018

ಬೆಂಗಳೂರು: ಸಾರ್ವಜನಿಕರ ಎದುರೇ ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಕೊಳೆ ಯಾದ ತಮ್ಮ ಶೂ ಮತ್ತು ಬಟ್ಟೆಯನ್ನು ಗನ್‍ಮ್ಯಾನ್ ಮೂಲಕ ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ.

ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಹಲಸೂರಿನ ರಾಜ ಕಾಲುವೆ ಬಳಿ ಭೇಟಿ ನೀಡಿ ಪರಿಶೀಲಿಸುತ್ತಿದ್ದ ವೇಳೆ ಅವರ ಬಟ್ಟೆ ಹಾಗೂ ಶೂ ಗಲೀಜಾಯಿತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಗನ್ ಮ್ಯಾನ್‍ಗೆ ಉಪಮುಖ್ಯಮಂತ್ರಿಗಳು ಕೊಳೆಯಾದ ಶೂ ಕ್ಲೀನ್ ಮಾಡುವಂತೆ ಆದೇಶ ನೀಡಿ, ಸಾರ್ವಜನಿಕರ ಎದುರೇ ಸ್ವಚ್ಛ ಗೊಳಿಸಿಕೊಂಡರು. ಪೊಲೀಸರ ಆರ್ಡರ್ ಲೀ ಪದ್ಧತಿಯನ್ನು ರದ್ದು ಮಾಡಿದ ಇವರೇ ಈ ರೀತಿ ವರ್ತನೆ ತೋರಿರು ವುದಕ್ಕೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ.

ಕೇವಲ ಕೆಸರು ನೀರು ಸಿಡಿದಿದ್ದಕ್ಕೆ ಚಡಪಡಿಸಿದ ಅವರು, ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮೊದಲು ಗಮನಹರಿಸಬೇಕು. ಪ್ರಮುಖ ಹಾಗೂ ಗೌರವಾನ್ವಿತ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಅವರು, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಮೊದಲು ತಿಳಿದು ಕೊಳ್ಳಬೇಕು ಎಂದು ಡಿಸಿಎಂ ನಡೆಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

Translate »