ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಹಾಸನ

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

May 30, 2019

ಬೇಲೂರು: ಪಟ್ಟಣದ ಮಲ್ಲಿ ಕಾರ್ಜುನ ಮೆಡಿಕಲ್ ಆವರಣದಲ್ಲಿ ದೇಶ ಭಕ್ತರ ಬಳಗದಿಂದ ಏರ್ಪಡಿಸಿದ್ದ ವೀರ ಸಾವರ್ಕರ್ ಜನ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಅಧಿಕ ಅಂಕಗಳನ್ನು ಪಡೆದ ಗೆಂಡೇಹಳ್ಳಿ ಸರ್ಕಾರಿ ಶಾಲೆಯ ರಕ್ಷಿತ್, ಚೀಕನಹಳ್ಳಿ ಸರ್ಕಾರಿ ಶಾಲೆಯ ಸಾಗರ್, ತಾರೀಮರ ಸರ್ಕಾರಿ ಶಾಲೆಯ ಶಶಾಂಕ್ ವಿದ್ಯಾರ್ಥಿ ಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ವೀರ ಸಾವರ್ಕರ್ ಅವರು ಒಬ್ಬ ದೇಶ ಭಕ್ತನಾಗಿರದೆ ಉತ್ತಮ ವಾಗ್ಮಿ ಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇಂತಹ ಮಹನಿಯರ ಜಯಂತಿಯಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ವ್ಯಾಸಂಗ ಮಾಡಿದ ವಿದ್ಯಾರ್ಥಿ ಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರು ವುದು ಶ್ಲಾಘನೀಯವಾಗಿದೆ ಎಂದರು.

ಮುಖಂಡ ರಾಜಶೇಖರ್ ಮಾತನಾಡಿ, ದೇಶದ ಮಹಾನೀಯರ ಜಯಂತಿ ಆಚ ರಿಸಿದರೆ ಸಾಲದು ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕು. ದೇಶದ ಸಾತಂತ್ರ್ಯ ಹೋರಾಟದಲ್ಲಿ ಹಲವು ಮಹನೀಯರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅವರನ್ನು ಎಲ್ಲರೂ ಸದಾ ಸ್ಮರಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಳಗದ ರೂಪ ಮಂಜು ನಾಥ್, ಮಹೇಶ್, ಸುಬ್ರಹ್ಮಣ್ಯ, ಕೇಶವ ಮೂರ್ತಿ, ಹಯವದನ, ಶ್ರೀನಿವಾಸ್, ಶಿಕ್ಷಕ ಶಿವಮರಿಯಪ್ಪ ಸೇರಿದಂತೆ ಇನ್ನಿತರರಿದ್ದರು.

Translate »