ವಿಶ್ವಗುರು ಬಸವಣ್ಣನ ತತ್ವಾದರ್ಶ ಪಾಲಿಸಲು ಸಲಹೆ
ಹಾಸನ

ವಿಶ್ವಗುರು ಬಸವಣ್ಣನ ತತ್ವಾದರ್ಶ ಪಾಲಿಸಲು ಸಲಹೆ

May 30, 2019

ರಾಮನಾಥಪುರ: ವಿಶ್ವ ಗುರು ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು. ಅವರ ತತ್ವಾ ದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅರಕಲಗೂಡು ದೊಡ್ಡಮಠದ ಮಲ್ಲಿ ಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಕೊಣನೂರು ಹೋಬಳಿ ಬಿಸಿಲ ಹಳ್ಳಿ ಗ್ರಾಮದಲ್ಲಿ ವೀರಶೈವ ಯುವಕ ಸಂಘ, ಹಿರಿಯ ವೀರಶೈವ ಮುಖಂಡರು ಗಳು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಆಯೋಜಿಸಿದ್ದ ಜಗದ್ಜೋತಿ ಬಸವೇಶ್ವರ ಜಯಂತಿ ಹಾಗೂ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ 112ನೇ ಜಯಂ ತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಸಮಾಜವನ್ನು ನಾಡಿನ ಉದ್ದಗಲಕ್ಕೂ ಕೊಂಡೊಯ್ದ ಮಹಾನ್ ನಾಯಕ ಬಸವಣ್ಣ ಎಂದು ಬಣ್ಣಿಸಿದ ಅವರು, ಬಸವೇಶ್ವರರು ಸ್ತ್ರೀಯರಿಗೆ ಸಮಾನ ಅವ ಕಾಶ ಕಲ್ಪಿಸಿದರು. 12ನೇ ಶತಮಾನದಲ್ಲೇ ಮೌಢ್ಯಗಳನ್ನು ಧಿಕ್ಕರಿಸಿದ ಭಕ್ತಿ ಭಂಡಾರಿ ಬಸವಣ್ಣ ಸರ್ವಕಾಲಕ್ಕೂ ಅನ್ವಯಿಸುವ ವಚನವನ್ನು ಸಮಾಜಕ್ಕೆ ಕೊಡಿಗೆಯಾಗಿ ನೀಡಿದ್ದಾರೆ. ಅವರ ಸಾವಿರಾರು ವಚನ ಗಳನ್ನು ನಾವು ಪಾಲಿಸಿದರೆ ಅವರ ಹೆಸರಿ ನಲ್ಲಿ ನಾವು ಜಯಂತಿ ಆಚರಿಸಿದ್ದಕ್ಕೆ ಸಾರ್ಥಕ ವಾಗುತ್ತದೆ ಎಂದು ಹೇಳಿದರು.

ಸಮಾಜಕ್ಕೆ ಒಳ್ಳೆಯ ಸಂದೇಶ ನೀಡ ಬೇಕೆನ್ನುವ ಸಂಕಲ್ಪದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ಗಳು ಇನ್ನೂ ಹೆಚ್ಚು ನಡೆಯಬೇಕು. ವೀರ ಶೈವ ಸಮುದಾಯದವರು ಸಂಘಟಿತ ರಾಗಿ ಜಾಗೃತರಾಗಬೇಕು. ಪ್ರತಿಯೊಬ್ಬರು ಸಾಮರಸ್ಯದಿಂದ ಇರಬೇಕು. ಬಸವಣ್ಣ ನವರು ನಡೆದು ತೋರಿಸಿದ ಮಾರ್ಗದಲ್ಲಿ ಸಾಗಿದ ಮಹಾನ್ ವ್ಯಕ್ತಿ ಡಾ.ಶ್ರೀಶಿವ ಕುಮಾರ ಮಹಾಸ್ವಾಮಿಗಳು. 12ನೇ ಶತ ಮಾನದಲ್ಲಿ ಬಸವಣ್ಣನವರು ಹಾಗೂ 21ನೇ ಶತಮಾನದಲ್ಲಿ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳು ನಾಡು ಕಂಡ ಮಹಾನ್ ನಾಯಕರು ಎಂದರು.

ಈ ವೇಳೆ ಕೆಸವತ್ತೂರು ಸಿದ್ದಲಿಂಗೇಶ್ವರ ಮಠದ ಶ್ರೀಬಸವರಾಜೇಂದ್ರ ಸ್ವಾಮೀಜಿ, ತಪೋವನ ಮನೆಹಳ್ಳಿ ಮಠದ ಮಹಾಂತ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಮಹಾಸಂಸ್ಥಾನ ಮಠದ ಸ್ವತಂತ್ರ ಬಸವ ಲಿಂಗ ಶಿವಯೋಗಿ ಸ್ವಾಮೀಜಿ, ಶಿರದನ ಹಳ್ಳಿ ಬಸವಕಲ್ಯಾಣ ಮಠದ ಶ್ರೀಸಿದ್ದ ಲಿಂಗ ಸ್ವಾಮೀಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಯೋಗೇಶ್, ತಾಲೂಕು ವೀರಶೈವ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಮಹೇಶ್, ಕಾರ್ಯದರ್ಶಿ ನಿರ್ವಾಣಪ್ಪ, ವಾಣಿಜ್ಯ ತೆರಿಗೆ ಅಧಿಕಾರಿ ಬಿ.ಇ.ಶಿವಕುಮಾರ್, ಕೊಣನೂರು ಹೋಬಳಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸುಂದರೇಶ್, ಗ್ರಾಪಂ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಕೊಣ ನೂರು ಹೋಬಳಿ ಅಖಿಲ ಭಾರತ ವೀರ ಶೈವ ಮಹಾಸಭಾದ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ಲೋಕೇಶ್, ಖಜಾಂಚಿ ನಾಗೇಂದ್ರ, ದೊಡ್ಡಬೆಮ್ಮತ್ತಿಯ ಕ್ರಷರ್ ಮಾಲೀಕ ಸುರೇಶ್, ಮುಖಂಡರಾದ ಚಂದ್ರಶೇಖರ್, ಈರಣ್ಣ, ಕಾಳಣ್ಣ, ಬಸಪ್ಪ, ಗಂಗಾಧರಪ್ಪ, ಸೋಮಣ್ಣ, ಚಂದ್ರಣ್ಣ, ಶಿವಲಿಂಗಪ್ಪ, ನಂಜಣ್ಣ, ಕೊಣನೂರು ಹೋಬಳಿ ವೀರಶೈವ ಮಹಾಸಭಾದ ಉಪಾ ಧ್ಯಕ್ಷ ವಿಶ್ವನಾಥ್, ಜಗದೀಶ್, ನಂಜಪ್ಪ, ಶಿವಣ್ಣ, ಹೇಮಾವತಿ ಬಲದಂಡೆ ನಾಲೆಯ ಮುಖ್ಯ ಇಂಜಿನಿ ಯರ್ ಸುಧಾಕರ್ ಉಪಸ್ಥಿತರಿದ್ದರು.

Translate »