ಹುಣಸೂರು ಜನ ಮನೆ ಮಗನನ್ನು ಗೆಲ್ಲಿಸಿದ್ದಾರೆ
ಮೈಸೂರು

ಹುಣಸೂರು ಜನ ಮನೆ ಮಗನನ್ನು ಗೆಲ್ಲಿಸಿದ್ದಾರೆ

December 10, 2019

ಹುಣಸೂರು ಕ್ಷೇತ್ರದ ಜನರು ತಮ್ಮ ಮನೆ ಮಗನಿಗೆ ಆಶೀರ್ವದಿಸಿ, ಗೆಲ್ಲಿಸಿ ದ್ದಾರೆ. ನನಗೆ ಈ ಫಲಿತಾಂಶ ನಿರೀಕ್ಷಿತ. ಅದರಂತೆ ಮತದಾರ ಕೈ ಹಿಡಿದಿದ್ದು, ನಾನು ಅವರಿಗೆ ಚಿರ ಋಣಿಯಾಗಿದ್ದೇನೆ ಎಂದು ಜಯಭೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆಯನ್ನೇ ಹರಿಸಿದರು. ಆದರೆ ನನ್ನ ತಾಲೂಕಿನ ಮತದಾರರು ಸ್ವಾಭಿಮಾನವನ್ನು ಮಾರಿಕೊಳ್ಳದೆ ಕ್ಷೇತ್ರದ ಅಸ್ಮಿತೆ ಪ್ರದರ್ಶಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನನ್ನ ಪ್ರತಿಸ್ಪರ್ಧಿ ವಿಶ್ವನಾಥ್ ಅವರ ಸಹಕಾರ ಪಡೆದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು. ನಮ್ಮ ಭಾಗದ ಪ್ರಭಾವಿ ನಾಯಕರಾದ ಜಿ.ಟಿ.ದೇವೇ ಗೌಡರು ಈ ಚುನಾವಣೆಯಲ್ಲಿ ತಟಸ್ಥರಾಗಿ ದ್ದರು. ಅಂತಿಮ ಕ್ಷಣದಲ್ಲಿ ಅವರ ಮಗ ಜಿ.ಡಿ. ಹರೀಶ್‍ಗೌಡರು ಬೆಂಬಲಿಸಿದರು. ಅದೂ ಸಹ ನಾನು ಅತ್ಯಧಿಕ ಮತಗಳಿಂದ ಜಯಗಳಿ ಸಲು ಸಾಧ್ಯವಾಯಿತು. ನನ್ನ ಗೆಲುವಿಗೆ ಸಹಕರಿ ಸಿದ ಎಲ್ಲಾ ಮುಖಂಡರು, ಕಾಂಗ್ರೆಸ್ ಕಾರ್ಯ ಕರ್ತರು, ಜನರಿಗೆ ನನ್ನ ಕೃತಜ್ಞತೆ ಸಲ್ಲಿಸು ತ್ತೇನೆ ಎಂದು ಮಂಜುನಾಥ್ ನುಡಿದರು.

ಕಡೇವರೆಗೂ ಮುನ್ನಡೆ ಸಾಧಿಸಿದ ಮಂಜುನಾಥ್
ಹುಣಸೂರು,ಡಿ.9(ಆರ್‍ಕೆ)-39,727 ಭಾರೀ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಅವರು ಆರಂಭ ದಿಂದ ಅಂತಿಮಸುತ್ತಿನವರೆಗೆ ಮುನ್ನಡೆ ಕಾಯ್ದು ಕೊಂಡರು. ಮತಎಣಿಕೆ ಆರಂಭವಾಗುತ್ತಿದ್ದಂತೆಯೇ 852 ಮತಗಳ ಮುನ್ನಡೆ ಸಾಧಿಸಿದ ಮಂಜುನಾಥ, ಅಂತಿಮ 20ನೇ ಸುತ್ತು ಮುಗಿದಾಗಲೂ ಒಟ್ಟು 92,679 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಎ.ಹೆಚ್.ವಿಶ್ವ ನಾಥ ಪಡೆದಿದ್ದ (52,998) ಮತಗಳಿಗಿಂತ ಒಟ್ಟು 39,727 ಮತಗಳ ಅಂತರದಿಂದ ಜಯಗಳಿಸಿದರು. 10ನೇ ಸುತ್ತಿನಲ್ಲೂ ವಿಶ್ವನಾಥ 28,160 ಮತ ಪಡೆದರೆ, ಕಾಂಗ್ರೆಸ್‍ನ ಮಂಜುನಾಥ 46,158 ಮತ ಗಳಿಸಿ ಒಟ್ಟು 17,998 ಮತಗಳ ಮುನ್ನಡೆ ಕಾಯ್ದುಕೊಂಡರು. ಆರಂಭದಿಂದ ಅಂತಿಮ ಸುತ್ತಿನವರೆಗೂ ಎಲ್ಲಾ 20 ಸುತ್ತು ಗಳಲ್ಲೂ ಮುನ್ನಡೆಯೇ ಹೊರತು. ಎಲ್ಲಿಯೂ ಹಿಂದೆ ತಿರುಗಿ ನೋಡಲಿಲ್ಲ. ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿ, ಮತ್ತೊಂದು ಉಪ ಚುನಾವಣೆಗೆ ಕಾರಣರಾದ ವಿಶ್ವನಾಥ್ ಬಗೆಗಿನ ಮತದಾರರ ಅಸಮಾಧಾನ, ಕಡೇಗಳಿಗೆಯಲ್ಲಿ ಆ ಭಾಗದ ಪ್ರಭಾವಿ ನಾಯಕರಾದ ಜಿ.ಟಿ.ದೇವೇಗೌಡರ ತಟಸ್ಥತೆ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಪಮಾನಿಸಿದರೆಂಬ ಆರೋಪ ಗಳು ಬಿಜೆಪಿಯ ವಿಶ್ವನಾಥಗೆ ಹಿನ್ನಡೆಯಾಗಿ ಮಂಜುನಾಥ ಎಲ್ಲಾ ಸುತ್ತುಗಳಲ್ಲೂ ಮುನ್ನಡೆ ಸಾಧಿಸಲು ಸಾಧ್ಯ ವಾಯಿತೆಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದರು.

Translate »