ಹುಲಿಕಲ್ ವೀರಭದ್ರಸ್ವಾಮಿ ವೈಭವದ ರಥೋತ್ಸವ
ಹಾಸನ

ಹುಲಿಕಲ್ ವೀರಭದ್ರಸ್ವಾಮಿ ವೈಭವದ ರಥೋತ್ಸವ

December 11, 2018

ಬೇಲೂರು: ಪುರಾಣ ಪ್ರಸಿದ್ಧ ಹಾಗೂ ಸಂತ ಗುರುಗಳು ಪಾದವಿಟ್ಟ ಪರಮ ಸುಕ್ಷೇತ್ರವೆಂದೇ ಖ್ಯಾತಿಯಾಗಿರುವ ಬೇಲೂರು ತಾಲೂಕು ಹಳೇಬೀಡು ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕಲ್ ಶ್ರೀ ವೀರಭದ್ರೇಶ್ವರಸ್ವಾಮಿಯ ಕೆಂಡೋತ್ಸವ ಹಾಗೂ ದಿವ್ಯ ರಥೋತ್ಸವ ಅತ್ಯಂತ ಭಕ್ತಿಭಾವದಿಂದ ನಡೆಯಿತು. ರಥೋತ್ಸವಕ್ಕೆ ಸಾವಿ ರಾರು ಜನರು ಆಗಮಿಸಿ ಧನ್ಯರಾದರು.

ತಾಲೂಕಿನ ಪುಷ್ಪಗಿರಿ ಹಾಗೂ ಹುಲಿ ಕಲ್ ಬೆಟ್ಟದಲ್ಲಿ ನಡೆಯುವ ಕಾರ್ತಿಕೋ ತ್ಸವಕ್ಕೆ ರಾಜ್ಯದ ಮೂಲೆ-ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಂತೆಯೇ ಹಳೇ ಬೀಡು ಸಮೀಪದಲ್ಲಿನ ಶ್ರೀ ಹುಲಿಕಲ್ ವೀರ ಭದ್ರೇಶ್ವರಸ್ವಾಮಿ ಕೆಂಡೋತ್ಸವ ಮತ್ತು ದಿವ್ಯ ರಥೋತ್ಸವಗಳಿಗೆ ಸಾವಿರಾರು ಜನರು ಆಗಮಿಸುವುದು ಇಲ್ಲಿನ ವಾಡಿಕೆ ಯಾಗಿದೆ. ಬೆಳಗ್ಗಿನಿಂದಲೇ ವೀರಭದ್ರೇಶ್ವರ ಸ್ವಾಮಿಗೆ ಗಂಗಾಪೂಜೆಯಿಂದ ಕ್ಷೀರಾ ಭಿಷೇಕ, ಪಂಚಾಮೃತಾಭಿಷೇಕ ಹಾಗೂ ರುದ್ರಾಭಿಷೇಕ ನಡೆಸಿ ಮಹಾಮಂಗಳಾ ರತಿ ನಡೆಸಿದರು. ಬಳಿಕ ವೀರಭದ್ರ ಸ್ವಾಮಿ ಯನ್ನು ಉಯ್ಯಾಲೆಯಲ್ಲಿ ಕುಳ್ಳರಿಸಿ ಭಕ್ತ ರಿಂದ ಉಯ್ಯಾಲೆ ಉತ್ಸವ ನಡೆಸಿದರು. ತರುವಾಯ ಕೆಂಡೋತ್ಸವ ನಡೆಸಲಾ ಯಿತು. ಸುಮಾರು 11 ಗಂಟೆಗೆ ದಿವ್ಯ ರಥಕ್ಕೆ ವಿವಿಧ ಪೂಜೆ ಸಲ್ಲಿಸಿದ ಬಳಿಕ ದೇವಾ ಲಯದ ಮುಂಭಾಗದಿಂದ ರಥಕ್ಕೆ ಚಾಲನೆ ನೀಡಿದರು. ರಥ ಸಾಗುತ್ತಿರುವ ವೇಳೆಯಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ತಮ್ಮ ಭಕ್ತಿಯ ಹರಕೆ ಪೂರೈಸಿದರು. ರಥೋ ತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಬೇಕರಿ ಮಾಲೀಕರ ಸಂಘದಿಂದ ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇಗುಲದ ಖಜಾಂಚಿ ಹಾಗೂ ಜೆಡಿಎಸ್ ಮುಖಂಡ ಗ್ರಾನೈಟ್ ರಾಜಶೇಖರ್, ಹುಲಿಕಲ್ ಶ್ರೀ ವೀರಭದ್ರೇಶ್ವರ ಉದ್ಭವ ಮೂರ್ತಿಯಾಗಿದ್ದು, ಇಲ್ಲಿನ ಸಂತರು ಬಂದು ನೆನೆಸಿದ ಬಗ್ಗೆ ಇತಿಹಾಸ ಹೇಳು ತ್ತದೆ, ಇಂತಹ ದೇಗುಲ ತೀವ್ರ ಶಿಥಿಲ ವಾದ ಹಿನ್ನಲೆಯಲ್ಲಿ ಸರ್ವ ಭಕ್ತರ ಸಹಕಾರ ದಿಂದಲೇ ಇಂದು ಸಂಪೂರ್ಣ ಶಿಲೆ ಯಿಂದಲೇ ದೇಗುಲವನ್ನು ನಿರ್ಮಿಸ ಲಾಗಿದೆ, ಅಲ್ಲದೆ ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಅಡಿಗೆ ಮನೆ, ಊಟ ಮನೆ, ವಿಶ್ರಾಂತಿ ಗೃಹ, ಕಲ್ಯಾಣ ಮಂಟಪ ಹೀಗೆ ನಾನಾ ಸವ ಲತ್ತುಗಳನ್ನು ನಿರ್ಮಿಸಲಾಗಿದೆ, ಮುಂದಿನ ದಿನದಲ್ಲಿ ಬೆಟ್ಟದ ತುಂಬ ಕಾಡು ಜಾತಿಯ ಮರಗಳನ್ನು ಬೆಳೆಸಬೇಕು ಎಂಬವುದು ನಮ್ಮ ಆಸೆಯಾಗಿದ್ದು, ಸರ್ವರ ಸಹಕಾರ ಬೇಕು ಎಂದ ಅವರು ಸುಮಾರು 108 ಅಡಿಯ ಶಿವನ ಪ್ರತಿಮೆ ನಿರ್ಮಿಸಬೇಕಿದೆ ಎಂದರು.

Translate »