ಜಿಲ್ಲಾದ್ಯಂತ ಭತ್ತ ಖರೀದಿ ಕೇಂದ್ರ ಸ್ಥಾಪನೆ : ಡಿ.16 ರಿಂದ ಪ್ರಕ್ರಿಯೆ ಪ್ರಾರಂಭ  
ಹಾಸನ

ಜಿಲ್ಲಾದ್ಯಂತ ಭತ್ತ ಖರೀದಿ ಕೇಂದ್ರ ಸ್ಥಾಪನೆ : ಡಿ.16 ರಿಂದ ಪ್ರಕ್ರಿಯೆ ಪ್ರಾರಂಭ  

December 11, 2018

ಹಾಸನ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2018-19ನೇ ಸಾಲಿನಲ್ಲಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಭತ್ತವನ್ನು ರೈತರಿಂದ  ನೇರವಾಗಿ ನೋಂದಾಯಿತ ಅಕ್ಕಿ ಗಿರಣಿ ಗಳ ಮೂಲಕ ಖರೀದಿಸಲು ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳ ಅವರನ್ನು ಖರೀದಿ ಏಜೆನ್ಸಿ ಯಾಗಿ ನೇಮಕ ಮಾಡಿ ಆದೇಶಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ರೈತ ರಿಂದ ತಾಲೂಕುಗಳ ಕೃಷಿ ಉತ್ಪನ್ನ ಮಾರು ಕಟ್ಟೆ ಪ್ರಾಂಗಣದಲ್ಲಿನ ಖರೀದಿ ಕೇಂದ್ರ ಗಳಲ್ಲಿ ಗುಣಮಟ್ಟ ಪರಿಶೀಲಿಸಿ ಪ್ರಕ್ರಿ ಯೆಯು ಡಿ.5ರಿಂದ 15 ರವರೆಗೆ ಹಾಗೂ ಭತ್ತ ಖರೀದಿ ಪ್ರಕ್ರಿಯೆ ಡಿ.16 ರಿಂದ 15 ಮಾರ್ಚ್ 2019ರ ವರೆಗೆ ಇರುತ್ತದೆ.

ಖರೀದಿ ದರ: ಭತ್ತ (ಸಾಮಾನ್ಯ) ಕ್ವಿಂಟಾಲ್‍ಗೆ ರೂ. 1750, ಭತ್ತ ಗ್ರೇಡ್ ಎ ಕ್ವಿಂಟಾಲ್‍ಗೆ 1770.

ರೈತರ ನೋಂದಣಿ ಕೇಂದ್ರಗಳ ವಿವರ: ಆಲೂರು ಮತ್ತು ಹಾಸನ ತಾಲೂಕುಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ) ಹಾಸನ, ಅಧಿಕಾರಿ ಎಂ ರಂಗಸ್ವಾಮಿ, ದೂ. 9449864440, ಅರ ಕಲಗೂಡು ತಾಲೂಕಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ) ಅರಕಲಗೂಡು, ಅಧಿಕಾರಿ ಜಯಕುಮಾರ್, ದೂ. 9449864441, ಬೇಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ. ಎಂ.ಸಿ.) ಬೇಲೂರು, ಅಧಿಕಾರಿ ಶಿವಣ್ಣ ದೂ, 9449864429, ಚನ್ನರಾಯ ಪಟ್ಟಣ ತಾಲೂಕಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ.) ಚನ್ನರಾಯಪಟ್ಟಣ್ಣ ಅಧಿಕಾರಿ ಪುಟ್ಟ ಸ್ವಾಮಿ, ದೂ. 9449864460, ಹೊಳೆ ನರಸೀಪುರ ತಾಲೂಕಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ) ಹೊಳೆನರಸೀಪುರ, ಅಧಿಕಾರಿ ಶಂಭು ಗೌಡ, ದೂ. 9880627205, ಸಕಲೇಶ ಪುರ ತಾಲೂಕಿಗೆ ಕೃಷಿ ಉತ್ಪನ್ನ ಮಾರು ಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ)  ಸಕಲೇಶ ಪುರ, ಅಧಿಕಾರಿ ಜಗದೀಶ ದೂ. 9008 576085. ಭತ್ತ ಖರೀದಿಗೆ ಸರ್ಕರವು ನಿಗದಿಪಡಿಸಿರುವ ಗುಣ ಮಟ್ಟದ ವಿವರ : ತೇವಾಂಶ 17%, ಸಾವ ಯುವ 1.0%, ಹಾನಿಗೊಂಡ, ಬಣ್ಣ ಬದಲಿಸಿದ, ಮೊಳಕೆ ಒಡೆದು ಹುಳು ಕೊಡೆದ ಕಾಳುಗಳು 5%, ಪೂರ್ಣ ಪ್ರಮಾಣದಲ್ಲಿ ಬಲಿಯದ, ಮುದುಡಿದ ಹಾನಿಗೊಂಡ ಕಾಳುಗಳು 3%, ಕಳಪೆ ಧಾನ್ಯಗಳಿಂದ ಮಿಶ್ರಿತವಾದ ಕಾಳುಗಳು, 6% ಇತರೆ ವಸ್ತುಗಳು 1%.

ಭತ್ತ ಬೆಳೆದ ರೈತರಿಗೆ ಸೂಚನೆ

* ಹಾಸನ ಜಿಲ್ಲೆಯ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಎಕರೆಗೆ 25 ಕ್ವಿಂಟಾಲ್ ಮೀರದಂತೆ ಗರಿಷ್ಠ 40 ಕ್ವಿಂಟಾಲ್ ವರೆಗೆ ಭತ್ತವನ್ನು ಖರೀದಿಸಲಾಗುವುದು.

* ರೈತರು ಡಿ.5ರಿಂದ ಡಿ.15ರವರೆಗೆ ತಮ್ಮ ಹೆಸರನ್ನು ತಮ್ಮ ತಾಲೂಕು ವ್ಯಾಪ್ತಿಯ ಎಪಿಎಂಸಿ ಆವರಣದಲ್ಲಿ ತೆರೆದಿರುವ ಎಂ.ಎಸ್.ಪಿ ಭತ್ತ ನೋಂದಣಿ ಕೇಂದ್ರದಲ್ಲಿ ಆನ್‍ಲೈನ್ ಮೂಲಕ ತಮ್ಮ ಬೆರಳಚ್ಚು/ಬಯೋ ಮೆಟ್ರಿಕ್ ನೀಡಿ ನೋಂದಣಿ ಮಾಡಿಕೊಳ್ಳಬೇಕು.

* ನೋಂದಣಿ ವೇಳೆ ರೈತರು ಭತ್ತ ಬೆಳೆದ ಬಗ್ಗೆ ಚಾಲ್ತಿ ಪಹಣಿ (ಕಂಪ್ಯೂಟರ್ ಪಹಣಿ), ತಹಸೀಲ್ದಾರರಿಂದ ಪಡೆದ ಬೆಳೆ ದೃಢೀಕರಣದ ಪತ್ರ, ಸಣ್ಣ ಮತ್ತು ಅತೀ ಸಣ್ಣ ರೈತರೆಂಬ ಬಗ್ಗೆ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಐ.ಎಫ್.ಎಸ್.ಸಿ ಕೋಡ್‍ನೊಂದಿಗೆ ನೀಡಬೇಕು.

* ನೋಂದಣಿ ವೇಳೆ ಭತ್ತದ ಸ್ಯಾಂಪಲ್ ಅನ್ನು ನೋಂದಣಿ ಕೇಂದ್ರದಲ್ಲಿ ಹಾಜರಿರುವ ಕೃಷಿ ಇಲಾಖೆ ಗ್ರೇಡರ್‍ಗಳಿಂದ/ಗುಣಮಟ್ಟ ಪರಿವೀಕ್ಷಕರಿಂದ ತೇವಾಂಶ ಮಾಪಕದಲ್ಲಿ ಪರಿಶೀಲಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಭತ್ತದ ಮಾದರಿಯ ಗುಣಮಟ್ಟವು ಒಪ್ಪಿಗೆಯಾಗಿರುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆದುಕೊಳ್ಳುವುದು.

* ರೈತರಿಗೆ ಸಾಗಾಣಿಕೆ ವೆಚ್ಚ ಮತ್ತು ಸಮಯ ಉಳಿತಾಯವಾಗಲೆಂದು ತಮ್ಮ ಸಮೀಪದ (ನೋಂದಾಯಿತ) ಅಕ್ಕಿ ಗಿರಣಿ ಗಳನ್ನು ಆಯ್ಕೆ ಮಾಡಿಕೊಂಡು ಭತ್ತವನ್ನು ನೀಡಲು ಅವಕಾಶವಿರುತ್ತದೆ ಹಾಗೂ ಭತ್ತದ ಮಾದರಿಯನ್ನು ಗುಣಮಟ್ಟ ದೃಢೀ ಕರಣ ಪತ್ರದೊಂದಿಗೆ ಒಯ್ಯುವುದು. ದಾಸ್ತಾನು ನೀಡಿದ ಬಗ್ಗೆ ಅಕ್ಕಿಗಿರಣಿಗಳಿಂದ ದಾಸ್ತಾನು ಸ್ವೀಕೃತಿ ರಶೀದಿ ಪಡೆಯುವುದು.

* ರೈತರು ಉತ್ತಮ ಗುಣಮಟ್ಟದ ಭತ್ತವನ್ನು (ಎಫ್.ಎ.ಕ್ಯೂ) ಮೊದಲೇ ನಿಗದಿಯಾಗಿರುವ ಮಿಲ್ಲುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ತೆಗೆದುಕೊಂಡು ಹೋಗುವುದು.

* ರೈತರು ಉತ್ತಮ ಗುಣಮಟ್ಟದ ಗೋಣಿ ಚೀಲಗಳಲ್ಲಿಯೇ ಭತ್ತವನ್ನು ತೆಗೆದುಕೊಂಡು ಬರುವುದು.

* ರೈತರು ತಮ್ಮ ದಾಸ್ತಾನನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಯಾವುದೇ ಮಧ್ಯವರ್ತಿಗಳನ್ನು ಬಳಸುವಂತಿಲ್ಲ ಹಾಗೂ ರೈತರು ಖರೀದಿ ನೋಂದಣಿ ಕೇಂದ್ರದಲ್ಲಾಗಲೀ ಅಥವಾ ಅಕ್ಕಿ ಗಿರಣಿಗಳಲ್ಲಾಗಲೀ ಭತ್ತ ಮಾರಾಟ ಸಂದರ್ಭದಲ್ಲಿ ಯಾವುದೇ ಹಣವನ್ನು ಪಾವತಿಸುವಂತಿಲ್ಲ.

* ರೈತರಿಂದ ಭತ್ತ ಖರೀದಿಸಿದ ನಂತರ ಅಕ್ಕಿ ಗಿರಣಿದಾರರು ಆನ್‍ಲೈನ್‍ನಲ್ಲಿ ಖರೀದಿಸಿದ ಪ್ರಮಾಣ ಮತ್ತು ಗುಣಮಟ್ಟ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲಿ ನಮೂದಿಸಿದ ನಂತರ ಖರೀದಿ ಮಾಡಿದ ಭತ್ತದ ಪ್ರಮಾಣಕ್ಕೆ ಅನುಗುಣವಾಗಿ ಖರೀದಿ ಏಜೆನ್ಸಿಯಾದ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ವತಿಯಿಂದ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

* ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ:

ರಂಗಸ್ವಾಮಿ, ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳ, ಹಾಸನ ಶಾಖೆ.

ಪುಟ್ಟಸ್ವಾಮಿ, ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳ, ಚನ್ನರಾಯಪಟ್ಟಣ ಶಾಖೆ.

Translate »