ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ  ಸಂತೋಷವಾಗಿಲ್ಲ: ಕುಮಾರಸ್ವಾಮಿ ಕಣ್ಣೀರು
ಮೈಸೂರು

ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ  ಸಂತೋಷವಾಗಿಲ್ಲ: ಕುಮಾರಸ್ವಾಮಿ ಕಣ್ಣೀರು

July 15, 2018

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷ ವಿದೆ, ಆದರೆ ನಾನು ಸಂತೋಷವಾಗಿಲ್ಲ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸನ್ಮಾನ ಕಾರ್ಯ ಕ್ರಮದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ನಾನು ಮೆರೆಯಬೇಕೆಂದು ಸಿಎಂ ಆಗಿಲ್ಲ, ನಾನು ಹೋದಕಡೆ ಜನ ಸೇರ್ತಾರೆ, ಸಂತೋಷ ಪಡ್ತಾರೆ. ಆದರೆ ಜನರು ನನ್ನ ಪಕ್ಷಕ್ಕೆ ಬಹುಮತ ನೀಡುವುದಿಲ್ಲ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ರಾಜ್ಯದ ಜನತೆ ನನಗೆ ಬಹುಮತ ಕೊಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ನಾನು ಹೋದಕಡೆ ಜನ ಸೇರ ತ್ತಾರೆ, ಸಂತೋಷ ಪಡ್ತಾರೆ, ಆದರೆ ದೌರ್ಭಾಗ್ಯವೆಂದರೆ ಅವರು ನಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ ಈ ಬಗ್ಗೆ ನನಗೆ ನೋವಿದೆ ಎಂದು ಸನ್ಮಾನ ಸಭೆಯಲ್ಲಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.

ನಾನು ಪೂರ್ಣ ಬಹುಮತ ದೊರೆತು ಸಿಎಂ ಆಗಿಲ್ಲ, ಸದ್ಯಕ್ಕೆ ಸನ್ಮಾನ ಸ್ವೀಕರಿಸುವಂತೆ ಬಲವಂತ ಮಾಡಬೇಡಿ ಎಂದು ಕುಮಾರಸ್ವಾಮಿ ಸನ್ಮಾನವನ್ನು ನಿರಾಕರಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ರೈತರ ಸಾಲ ಮನ್ನಾ ಪೈಕಿ ಈ ಹಿಂದಿನ ಸರ್ಕಾರ ಬಿಟ್ಟು ಹೋಗಿರುವ 4000 ಕೋಟಿ ರೂಪಾಯಿ ಸಾಲ ತೀರಿಸುವ ಹೊಣೆಗಾರಿಕೆ ಸಿಎಂ ಕುಮಾರಸ್ವಾಮಿ ಮೇಲಿದೆ. ಆರೋಗ್ಯವನ್ನೂ ಲೆಕ್ಕಿಸದೇ ಕುಮಾರಸ್ವಾಮಿ 18 ಗಂಟೆ ಕೆಲಸ ಮಾಡ್ತಾರೆ, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಇದೆ ಎಂದು ಹೇಳಿದ್ದಾರೆ.

Translate »