ಕೆಆರ್‌ಎಸ್‌ ಭರ್ತಿ
ಮಂಡ್ಯ, ಮೈಸೂರು

ಕೆಆರ್‌ಎಸ್‌ ಭರ್ತಿ

July 15, 2018

ಮಂಡ್ಯ:  ಜಲಾ ನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಜೀವನದಿ ಕಾವೇರಿ ಮಾತೆ ಮೈದುಂಬಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಸದ್ಯಕ್ಕೆ 123.20 ಅಡಿ ನೀರು ತುಂಬಿರುವುದರಿಂದ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ 17 ಗೇಟ್‍ಗಳ ಮೂಲಕ ಸುಮಾರು 50ಸಾವಿರ ಕ್ಯೂಸೆಕ್ಸ್ ನೀರನ್ನು ಇಂದು ನದಿಗೆ ಬಿಡಲಾಗುತ್ತಿದೆ.

ಸತತ ಮೂರು ವರ್ಷಗಳ ಬರಗಾಲದಿಂದ ನೀರಿನ ಕೊರತೆ ಅನುಭವಿಸಿದ್ದ ಕೆಆರ್‌ಎಸ್‌ ಈ ಬಾರಿ ಸಂಪೂರ್ಣ ಭರ್ತಿ ಯಾಗಿದೆ. ದಶಕಗಳ ನಂತರ ಅವಧಿಗೂ ಮುನ್ನವೇ ಕೆಆರ್‌ಎಸ್‌ ಭರ್ತಿಯಾಗಿರು ವುದು ಮಂಡ್ಯ ಸೇರಿದಂತೆ ಕಾವೇರಿ ಕೊಳ್ಳದ ರೈತರಲ್ಲಿ ಸಂತಸ ತಂದಿದೆ.

ಜಲಾಶಯ ಭರ್ತಿಯಾಗುತ್ತಿದ್ದಂತೆ ಇಂದು ಬೆಳಿಗ್ಗೆ ಸಭೆ ನಡೆಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಅಣೆಕಟ್ಟೆಯಿಂದ ನೀರು ಹೊರ ಬಿಡಲು ನಿರ್ಧಾರ ಕೈಗೊಂಡರು.

ಕೆಆರ್‌ಎಸ್‌ ಅಧೀಕ್ಷಕ ಅಭಿಯಂತರ ಅಮರ್‍ನಾಥ್, ಕಾರ್ಯಪಾಲಕ ಅಭಿ ಯಂತರ ಬಸವರಾಜೇಗೌಡ ನೇತೃತ್ವದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಅಣೆ ಕಟ್ಟೆಯ 106 ಅಡಿ ಎತ್ತರದಲ್ಲಿರುವ 17 ಗೇಟ್‍ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಯಿತು. ಕೆಆರ್‌ಎಸ್‌ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 123.20 ಅಡಿ ಇದೆ.

ದೋಣಿವಿಹಾರ ಸ್ಥಗಿತ-ಪ್ರವಾಸಿಗರ ದಂಡು: ಕಾವೇರಿ ಮೈದುಂಬಿರುವುದ ರಿಂದ ಪ್ರವಾಸಿ ತಾಣ ಬಲಮುರಿಯಲ್ಲಿ ಕಾವೇರಿ ನದಿಯ ವೈಭವ ಜೋರಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಬಳಿ ಇರುವ ಪ್ರವಾಸಿತಾಣ ಬಲಮುರಿಯ ಸೊಬಗಿಗೆ ಮನಸೋತ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಅತ್ತ ಧಾವಿಸುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ಇನ್ನು ಹೆಚ್ಚುವರಿ ನೀರು ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಂಗನತಿಟ್ಟು ಸಹಾಯಕ ವಲಯ ಅರಣ್ಯಾಧಿಕಾರಿ ಅನನ್ಯ ರಾಜ್ ಬೋಟಿಂಗ್ ಸ್ಥಗಿತ ಗೊಳಿಸುವ ಕ್ರಮಕೈಗೊಂಡಿದ್ದಾರೆ. ಇದ ರಿಂದಾಗಿ ಪಕ್ಷಿಧಾಮದಲ್ಲಿ ಬೋಟಿಂಗ್‍ಗೆ ಬರುತ್ತಿದ್ದ ಪಕ್ಷಿ ಪ್ರಿಯರಲ್ಲಿ ನಿರಾಸೆಯುಂಟಾಗಿದೆ.

ಕೆ.ಆರ್.ಸಾಗರದ ಅಣೆಕಟ್ಟೆಗೆ ಭೇಟಿ ನೀಡಿದ ರಾಜ್ಯ ಆಂತರಿಕ ಭದ್ರತಾ ದಳದ (ಐಎಸ್‍ಡಿ) ಐಜಿಪಿ ಎಸ್.ರವಿ ಅವರು ಅಣೆಕಟ್ಟೆ ಭದ್ರತೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಭದ್ರತೆ ಕುರಿತು ಕಾವೇರಿ ನೀರಾವರಿ ನಿಗಮ ಮತ್ತು ಅಣೆಕಟ್ಟೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾ ಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‍ಐಎಸ್‍ಎಫ್) ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು. ಬಳಿಕ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಅಭಿಯಂತರ ಅಮರನಾಥ್ ಮತ್ತು ಕಾರ್ಯಪಾಲಕ ಅಭಿಯಂತರ ಕೆ.ಬಸವರಾಜೇಗೌಡ ಉಪಸ್ಥಿತರಿದ್ದು, ಅಣೆಕಟ್ಟೆಯ ವಾಸ್ತವ ಸ್ಥಿತಿಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಡಿವೈಎಸ್ಪಿ ವಿರೂಪಾಕ್ಷೆ ಗೌಡ ಮತ್ತು ಉಸ್ತುವಾರಿ ಪಿ.ಎಸೈ ಪ್ರಮೋದ್, ರಾಜ್ಯ ಆಂತರಿಕ ಭದ್ರತಾ ಎಸ್ಪಿ ಸಿದ್ದರಾಮಪ್ಪ, ಶ್ರೀರಂಗಪಟ್ಟಣ ವೃತ್ತದ ಡಿವೈಸ್ಪಿ ವಿಶ್ವನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ವಾಸು, ತಮ್ಮೇಗೌಡ,ಕೆಎಸ್‍ಐಎಸ್‍ಎಫ್ ಪಿ.ಎಸೈಗಳಾದ ಪ್ರಮೋದ್, ಕುಮಾರ್, ಸೋಹೆಲ್, ಗೋವರ್ಧನ್, ಶಶಿಕಲಾ ಇದ್ದರು.

ಪ್ರವಾಹ ಮುನ್ನೆಚ್ಚರಿಕೆ ಸೂಚನೆ: ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಆದ್ದರಿಂದ ಕಾವೇರಿ ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಧ್ಯಾಹ್ನ 1:20ರಿಂದಲೇ ನೀರು ಬಿಡುಗಡೆ: ರಾಜ್ಯಾದ್ಯಂತ ಉತ್ತಮ ಮಳೆಯಾಗು ತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು ಸುಮಾರು 49 ಸಾವಿರ ಕ್ಯೂಸೆಕ್ಸ್ ಒಳಹರಿವಿದೆ. ಕೆಆರ್‌ಎಸ್‌ ಭರ್ತಿಯಾಗಿದೆ. ಕಾವೇರಿ ಕೊಳ್ಳದ ಹೇಮಾವತಿ ಸೇರಿದಂತೆ ಇತರೆ ಕಡೆಗಳಿಂದಲೂ ಹೆಚ್ಚುವರಿ ನೀರು ಕೆಆರ್‌ಎಸ್‌ಗೆ ಹರಿದು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ 50,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಮಧ್ಯಾಹ್ನ 1.20ರಿಂದ 20,000, ಸಂಜೆ 4 ಗಂಟೆಗೆ ಹೆಚ್ಚುವರಿ 10,000, ರಾತ್ರಿ 10 ಕ್ಕೆ ಹೆಚ್ಚುವರಿ 20,000 ಕ್ಯೂಸೆಕ್ಸ್ ಸೇರಿ ಒಟ್ಟು 50,000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಕೃಷ್ಣರಾಜ ಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಜಲಾಶಯದಲ್ಲಿ ಒಟ್ಟು 152 ಗೇಟ್‍ಗಳಿವೆ. ಈ ಪೈಕಿ 8 ನೀರಾವರಿಗೆ ಬಿಡುವ ಗೇಟ್‍ಗಳಾದರೆ, ಇನ್ನುಳಿದವೆಲ್ಲಾ ಸರ್‍ಪ್ಲಸ್ ಅಥವಾ ಕ್ರೆÀ್ರಸ್ಟ್‍ಗೇಟ್‍ಗಳಾ ಗಿವೆ. ಹೆಚ್ಚುವರಿ ನೀರನ್ನು ಬಿಡುವ ಸಂದರ್ಭಗಳಲ್ಲಿ ಮಾತ್ರ ಈ ಸರ್‍ಪ್ಲಸ್‍ಗೇಟ್‍ಗಳನ್ನು ಓಪನ್ ಮಾಡಲಾಗುತ್ತದೆ. ಅಂತೆಯೇ ಇಂದು ಒಟ್ಟು 17 ಸರ್‍ಪ್ಲಸ್‍ಗೇಟ್‍ಗಳ ಮುಖಾಂತರ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಅವರು ವಿವರಿಸಿದರು.

Translate »