ಅಮಿತ್ ಶಾ ಸೂಚಿಸಿದರೆ ಕರ್ನಾಟಕದಲ್ಲಿ ಸರ್ಕಾರ ರಚನೆ
ಮೈಸೂರು

ಅಮಿತ್ ಶಾ ಸೂಚಿಸಿದರೆ ಕರ್ನಾಟಕದಲ್ಲಿ ಸರ್ಕಾರ ರಚನೆ

July 17, 2018

ನವದೆಹಲಿ: ಕರ್ನಾಟಕದಲ್ಲಿ ಸರ್ಕಾರ ರಚಿ ಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತಸದಿಂದ ಸರ್ಕಾರ ರಚಿಸುತ್ತೇ ನೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ವಿಷಕಂಠನಂತೆ ನೋವುಗಳನ್ನು ನುಂಗಿ, ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಖ್ಯಮಂತ್ರಿಯಾಗುವ ಕುಮಾರಸ್ವಾಮಿಯವರ ಕನಸು ನನಸಾಗಿದೆ. ಮುಖ್ಯಮಂತ್ರಿ ಯಾಗಿರುವುದು ತಮಗೆ ಸಂತಸ ತಂದಿಲ್ಲ ಎಂದು ಅವರು ಹೇಳಿದ್ದಾರೆ. ಈ ಬೇಸರ ಹೆಚ್ಚು ದಿನಗಳ ಕಾಲವಿರುವು ದಿಲ್ಲ. ಪರಿಸ್ಥಿತಿಗಳು ಶೀಘ್ರದಲ್ಲಿಯೇ ಬದಲಾಗಲಿವೆ. ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತಸದಿಂದ ಸರ್ಕಾರ ರಚನೆ ಮಾಡುತ್ತೇನೆಂದು ಹೇಳಿದ್ದಾರೆ. ಯಾವುದೇ ಪಕ್ಷಗಳು ಕೈಜೋಡಿಸದೇ ಇರುವುದರಿಂದ ಕಾಂಗ್ರೆಸ್ ಪಕ್ಷ ಇದೀಗ ಹತಾಶೆಗೊಳಗಾಗಿದೆ. ಇದೀಗ ಕಾಂಗ್ರೆಸ್ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕರ್ನಾಟಕದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಪರಿಸ್ಥಿತಿಗಳು ಬದಲಾದವು.

ತಮಗಾಗುತ್ತಿರುವ ಅವಮಾನದಿಂದಾಗಿ ಕೆಲವೊಮ್ಮೆ ಕಾಂಗ್ರೆಸ್ ನಾಯಕರು ದೇಗುಲಗಳಿಗೆ ಭೇಟಿ ನೀಡಿದರೆ, ಮತ್ತೆ ಕೆಲವೊಮ್ಮೆ ಮುಸ್ಲಿಮರಿಗೆ ಬೆಂಬಲ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ. ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ರಾಜ್ಯ ಸಮ್ಮಿಶ್ರ ಸರ್ಕಾರ ಮುಖ್ಯಮಂತ್ರಿ ಯಾಗಿರುವುದಕ್ಕೆ ಕಾರ್ಯಕರ್ತರಿಗೆ ಸಂತೋಷವಾಗಿದೆ. ಆದರೆ, ನಾನು ಸಂತೋಷದಲ್ಲಿಲ್ಲ. ನೋವಿನ ವಿಷ ನುಂಗುತ್ತಿರುವ ನಾನು ವಿಷಕಂಠನಾಗಿದ್ದು, ನಿಮಗೆ ಅಮೃತ ನೀಡುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆಂದು ಕುಮಾರಸ್ವಾಮಿಯವರು ಹೇಳಿದ್ದರು.

Translate »