`ನೆಲದ ಸಂಸ್ಕøತಿ ಮರೆತರೆ ಬೌದ್ಧಿಕ ಉನ್ನತಿ ಅಸಾಧ್ಯ’
ಹಾಸನ

`ನೆಲದ ಸಂಸ್ಕøತಿ ಮರೆತರೆ ಬೌದ್ಧಿಕ ಉನ್ನತಿ ಅಸಾಧ್ಯ’

July 6, 2019

ಶ್ರವಣಬೆಳಗೊಳ, ಜು.5- ನೆಲ ಸಂಸ್ಕøತಿ ನಮ್ಮ ದೇಶದ ಸಂಪತ್ತು. ಇದನ್ನು ಮರೆತರೆ ಬೌದ್ಧಿಕ ಉನ್ನತಿ ಸಾಧ್ಯವಿಲ್ಲ ಎಂದು ಗಮನ ಸೆಳೆದ ಜನಪದ ತಜ್ಞ ಮೇಟಿಕೆರೆ ಹಿರಿಯಣ್ಣ, ಯುವಜನತೆ ಸಾಹಿತ್ಯ ಓದುವ, ಬರೆ ಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿತವಚನ ನೀಡಿದರು.

ಪಟ್ಟಣದ ಎಸ್‍ಎನ್ ಪಿಯು ಕಾಲೇಜಿನ ಚಾರುಶ್ರೀ ಸಭಾಂಗಣದಲ್ಲಿ ನಡೆದ ಯುವ ಜನರಿಗಾಗಿ ಹೋಬಳಿ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಅವರು ಮಾತ ನಾಡಿದರು. ಸ್ಪರ್ಧೆ ಉದ್ಘಾಟಿಸಿದ ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ, ಹಣಕ್ಕೆ ಪ್ರಾಧಾನ್ಯತೆ ನೀಡಿ ಕಲೆ, ಸಂಸ್ಕøತಿ ಮರೆಯುತ್ತಿದ್ದೇವೆ. ಉತ್ತಮ ಬದುಕು ಕಟ್ಟಲು ಜನಪದ ಸಂಸ್ಕøತಿ, ಮೌಲ್ಯ ಯುತ ಆಚಾರ-ವಿಚಾರ, ಸಾಹಿತ್ಯ ಜ್ಞಾನ ಮುಖ್ಯ. ಯುವಜನರು ಜನಪದ ಸಾಹಿತ್ಯ ದಿಂದ ದೂರ ಉಳಿಯುತ್ತಿರುವುದು ಆತಂಕದ ಸಂಗತಿ. ಪಠ್ಯಪುಸ್ತಕಗಳಿಂದಷ್ಟೇ ಸಂಸ್ಕಾರ ಪಡೆಯಲು ಸಾಧ್ಯವಿಲ್ಲ. ಪಠ್ಯೇತರ ಚಟು ವಟಿಕೆಗಳ ಮೂಲಕವೂ ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು ಎಂದರು.

ಪರಿಷತ್ ತಾ.ಅಧ್ಯಕ್ಷ ಸ್ವಾಮೀಗೌಡ ಮಾತನಾಡಿದರು. 25 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಬಾಲಕಿ ಯರ ವಿಭಾಗದಲ್ಲಿ ಎಲ್.ಜೆ.ಕಾರುಣ್ಯ ಪ್ರಥಮ, ಲಕ್ಷ್ಮಿದೇವಿ ದ್ವಿತೀಯ, ಮೋನಿಕ ತೃತೀಯ ಹಾಗೂ ಬಾಲಕರ ವಿಭಾಗದಲ್ಲಿ ಹೇಮಂತ್ ಪ್ರಥಮ, ಹರೀಶ್ ದ್ವಿತೀಯ, ಸಮೂಹ ಗಾಯನದಲ್ಲಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾಶ್ರೀ ತಂಡ ಪ್ರಥಮ, ಎಸ್‍ಎನ್ ಪಿಯು ಕಾಲೇಜಿನ ಎಲ್.ಜೆ. ಕಾರುಣ್ಯ ತಂಡ ದ್ವಿತೀಯ ಹಾಗೂ ಐಶ್ವರ್ಯ ತಂಡ ತೃತೀಯ ಸ್ಥಾನ ಪಡೆಯಿತು. ಪ್ರಾಂಶು ಪಾಲರಾದ ಎಸ್.ದಿನೇಶ್, ಅಶೋಕ್, ಎಸ್‍ಎಸ್‍ಡಿಜೆಜೆಪಿ ಸಂಘದ ಕಾರ್ಯದರ್ಶಿ ಮಹೇಶ್, ಸಂಚಾಲಕ ವಡ್ಡರಹಳ್ಳಿ ಗಣೇಶ್ ಗೌಡ, ನಾಗೇಂದ್ರರಾಯ, ಗಾಯಕ ಮಂಜು ನಾಥ್, ಸಂತೋಷ್ ಕಾರ್ಯಕ್ರಮದಲ್ಲಿದ್ದರು.

Translate »