ಬೂತ್‍ನಲ್ಲಿ ನೀವು ಗೆದ್ದರೆ ದೇಶದಲ್ಲಿ ಬಿಜೆಪಿ ಗೆಲುವು: ನಿರಂಜನ್‍ಕುಮಾರ್
ಚಾಮರಾಜನಗರ

ಬೂತ್‍ನಲ್ಲಿ ನೀವು ಗೆದ್ದರೆ ದೇಶದಲ್ಲಿ ಬಿಜೆಪಿ ಗೆಲುವು: ನಿರಂಜನ್‍ಕುಮಾರ್

April 9, 2019

ಗುಂಡ್ಲುಪೇಟೆ: ಬೂತ್‍ನಲ್ಲಿ ನೀವು ಗೆದ್ದರೆ ದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ. ಆದ್ದರಿಂದ ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ನೀವು ಸಿಪಾಯಿಗಳಂತೆ ಕೆಲಸ ನಿರ್ವಹಿಸಿ ಮೋದಿ ಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದರೊಂದಿಗೆ ದೇಶವನ್ನು ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಿ ಎಂದು ಕಾರ್ಯ ಕರ್ತರಿಗೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಲಹೆ ನೀಡಿದರು.

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮುಡ್ನಾಕೂಡು ಮತ್ತು ಹರವೆ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಕರಪತ್ರ ವಿತರಿಸಿ ಮತ ಯಾಚಿಸಿದರು. ನಂತರ ಮತದಾರರು, ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಾಮ ರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವುದ ರೊಂದಿಗೆ ಇತಿಹಾಸ ಸೃಷ್ಟಿಸಿ. ಹೀಗಾಗಿ ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ಬಲಿಷ್ಠ ಗೊಳಿಸಿಕೊಂಡು ತಪ್ಪದೇ ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಎಂದರು.

ಈ ವೇಳೆ ದಕ್ಷಿಣ ಪ್ರಾಂತ ಸಂಚಾಲಕ ವೆಂಕಟರಾಮ್, ಮುಖಂಡರಾದ ಡಾ.ಮೋಹನ್, ಮಂಡಲ ಅಧ್ಯಕ್ಷ ಎನ್.ಮಲ್ಲೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ್, ಹರವೆ ಮಹೇಶ್, ಸುರೇಶ್, ನಾಗೇಂದ್ರ, ಸುನಿಲ್, ರವಿ ಕುಮಾರ್, ಪ್ರಕಾಶ್, ಮಹದೇವಸ್ವಾಮಿ, ಮಹೇಶ್, ಪರಶಿವಮೂರ್ತಿ ಸೇರಿದಂತೆ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.

Translate »