ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ, ವಿಜಯಶಂಕರ್ ಸೇರಿ ಕಣದಲ್ಲಿ 22 ಮಂದಿ
ಮೈಸೂರು

ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್‍ಸಿಂಹ, ವಿಜಯಶಂಕರ್ ಸೇರಿ ಕಣದಲ್ಲಿ 22 ಮಂದಿ

March 30, 2019

ಮೈಸೂರು: ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಮೂವರು ಪಕ್ಷೇತರರು ಇಂದು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದರು.

ಪಿ.ಎಸ್.ಯಡೂರಪ್ಪ, ಎಂ.ಖಲೀಲ್ ಹಾಗೂ ಎಂ. ಶ್ರೀನಿವಾಸ್, ಶುಕ್ರವಾರ ಮಧ್ಯಾಹ್ನ ಮೈಸೂರು ಜಿಲ್ಲಾ ಚುನಾವಣಾ ಧಿಕಾರಿ ಅಭಿರಾಂ ಜಿ. ಶಂಕರ್ ಅವರಿಗೆ ಅರ್ಜಿ ಸಲ್ಲಿಸಿ, ತಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡರು. ಇದರಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ದಲ್ಲಿ ಬಿಜೆಪಿಯ ಪ್ರತಾಪ್‍ಸಿಂಹ, ಕಾಂಗ್ರೆಸ್‍ನ ಸಿ.ಹೆಚ್. ವಿಜಯ ಶಂಕರ್, ಬಿಎಸ್‍ಪಿಯ ಬಿ.ಚಂದ್ರ ಸೇರಿದಂತೆ ಒಟ್ಟು 22 ಮಂದಿ ಕಣದಲ್ಲಿ ಉಳಿದಂತಾಗಿದೆ. ಒಟ್ಟಾರೆ ಈ ಮೊದಲು 30 ಮಂದಿ ಯಿಂದ 50 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ ಮಾರ್ಚ್ 27 ರಂದು ಐಎನ್‍ಸಿಯ ಜೆ.ಜೆ. ಆನಂದ್, ಪಕ್ಷೇತರರಾದ ಸತೀಶ್ ಪೈ, ಮಧು, ಅಕೀಲ್ ಅಹಮದ್ ಹಾಗೂ ಎಂ.ಸಿದ್ದರಾಜು ನಾಮಪತ್ರಗಳು ತಿರಸ್ಕøತ ವಾಗಿದ್ದವು. ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ ಸಿ.ಹೆಚ್. ವಿಜಯಶಂಕರ್ ನೇರ ಹಣಾಹಣಿ ನಿರೀಕ್ಷೆ ಇದೆ. ಬಿಎಸ್‍ಪಿಯ ಬಿ.ಚಂದ್ರ, ಐಎನ್‍ಸಿಪಿಯ ಅಯೂಬ್ ಖಾನ್, ಸಿಯುಸಿಐನ ಪಿ.ಎಸ್. ಸಂಧ್ಯಾ, ಬಿಪಿಪಿಯ ಆಶಾರಾಣಿ, ಕೆಪಿಪಿಯ ಪಿ.ಕೆ. ಬಿದ್ದಪ್ಪ, ಪಕ್ಷೇತರರಾದ ಶ್ರೀನಿವಾಸಯ್ಯ, ಬಿ.ಡಿ. ನಿಂಗಪ್ಪ, ಎಂ.ಜೆ. ಸುರೇಶ್‍ಗೌಡ, ಎಂ. ಲಿಂಗರಾಜು, ಎನ್.ಕೆ. ಕಾವೇರಿಯಮ್ಮ, ಸೋಮಸುಂದರ್, ವೆಂಕಟೇಶ್, ಲೋಕೇಶ್‍ಕುಮಾರ್, ಆರ್. ಮಹೇಶ್, ಎನ್. ನಾಗೇಶ, ರವಿ, ರಾಜು, ಸಿ.ಎಂ.ಮಹದೇವ, ಆನಂದಕುಮಾರ್ ಹಾಗೂ ಸೈಯದ್ ಅಲಿ ಶಾನ್ ಕಣದಲ್ಲಿದ್ದಾರೆ.

ಕಡೇ ದಿನ: ಉಮೇದುವಾರಿಕೆ ವಾಪಸ್ ಪಡೆಯಲು ಇಂದು ಕಡೇ ದಿನವಾಗಿತ್ತು. ಮಾ. 28 ಯಾರೊಬ್ಬರೂ ಉಮೇದುವಾರಿಕೆ ಹಿಂಪಡೆದಿರಲಿಲ್ಲವಾದ ಕಾರಣ ಇಂದು 10 ರಿಂದ 15 ಮಂದಿ ಪಕ್ಷೇತರರು ನಾಮಪತ್ರ ವಾಪಸ್ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಅಧಿಕಾರಿಗಳೂ ಅದಕ್ಕೆ ತಕ್ಕಂತೆ ದಾಖಲಾತಿಗಳನ್ನು ಸಿದ್ಧಪಡಿಸಿ ಕೊಂಡು ಕಾದಿದ್ದರು. ಮಧ್ಯಾಹ್ನ 1.30 ಗಂಟೆವರೆಗೆ ಪಿ.ಎಸ್. ಯಡೂರಪ್ಪ ಮತ್ತು ಎಂ. ಖಲೀಲ್ ಮಾತ್ರ ವಾಪಸ್ ಪಡೆದಿದ್ದರು. ಮಧ್ಯಾಹ್ನ 2 ರಿಂದ 3 ಗಂಟೆ ವೇಳೆಗೆ ಅಂತಿಮ ಘಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ಬಹುತೇಕರು ಬರಬಹುದೆಂದು ನಿರೀಕ್ಷಿಸಲಾಗಿತ್ತಾದರೂ, ಆ ವೇಳೆ ಎಂ. ಶ್ರೀನಿವಾಸ ಅವರನ್ನು ಬಿಟ್ಟರೆ ಬೇರೆ ಯಾರೂ ಉಮೇದುವಾರಿಕೆ ಹಿಂಪಡೆಯಲಿಲ್ಲ. ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ನೀಡುವ ಸಂಬಂಧ ಚುನಾವಣಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಅಭ್ಯರ್ಥಿಗಳು ಹಾಗೂ ಏಜೆಂಟರೊಂದಿಗೆ ಸಭೆ ನಡೆಸಿ ಅವರು ಕೇಳಿರುವ ಚಿಹ್ನೆಗಳನ್ನು ಪ್ರಾಶಸ್ತ್ಯಕ್ಕನುಗುಣವಾಗಿ ಮಂಜೂರು ಮಾಡಿದರು. 22 ಅಭ್ಯರ್ಥಿಗಳು ಮಾ. 30ರಿಂದ ಪ್ರಚಾರದಲ್ಲಿ ನಿರತರಾಗುವರು. ಏ. 18 ರಂದು ಮತದಾನ, ಮೇ 23ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.

Translate »