ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ: ಗುಂಡ್ಲುಪೇಟೆ, ಚಾ.ನಗರದಲ್ಲಿ ಬಿಜೆಪಿ ವಿಜಯೋತ್ಸವ
ಚಾಮರಾಜನಗರ

ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ: ಗುಂಡ್ಲುಪೇಟೆ, ಚಾ.ನಗರದಲ್ಲಿ ಬಿಜೆಪಿ ವಿಜಯೋತ್ಸವ

February 28, 2019

ಚಾಮರಾಜನಗರ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ್ದನ್ನು ಸ್ವಾಗತಿಸಿ ಹಾಗೂ ಉಗ್ರರನ್ನು ಬಲಿ ಪಡೆದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು.

ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭಾರತದ ಬಾವುಟ ಹಿಡಿದು ವಿಜಯೋ ತ್ಸವದ ಮೆರವಣಿಗೆಯನ್ನು ಮುಖಂಡರು ಹಾಗೂ ಕಾರ್ಯಕರ್ತರು ಆರಂಭಿಸಿದರು. ಪ್ರಮುಖ ಬೀದಿಗಳ ಮೂಲಕ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡರು. ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ನಡೆದ 12 ದಿನಗಳ ಲ್ಲಿಯೇ ಭಾರತ ಪಾಕಿಸ್ತಾನದ ಮೇಲೆ ತನ್ನ ಸೇಡನ್ನು ತೀರಿಸಿಕೊಂಡಿದೆ. ಕೇವಲ 21 ನಿಮಿಷಗಳ ದಾಳಿಯಲ್ಲಿ 350 ಉಗ್ರರು ಬಲಿ ಆಗಿದ್ದಾರೆ. ಇದು ದೇಶಕ್ಕೆ ದೊರೆತ ದೊಡ್ಡ ಜಯ ಎಂದು ಅಭಿಪ್ರಾಯಪಟ್ಟರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ನೂರೊಂದುಶೆಟ್ಟಿ, ನಾಗೇಂದ್ರ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಪೃಥ್ವಿರಾಜ್, ಚೂಡ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ನಗರಸಭಾ ಸದಸ್ಯರಾದ ಸುದರ್ಶನ್‍ಗೌಡ, ಶಿವರಾಜು, ಮಮತಾ, ಆಶಾ, ರಾಜ್ಯ ಎಸ್‍ಟಿ ಮೋರ್ಚಾ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮ ನಾಯಕ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಣಿಕಂಠ, ನಗರ ಘಟಕದ ಅಧ್ಯಕ್ಷ ಸುಂದರ್ ರಾಜ್, ಮುಖಂಡರಾದ ಮಾರ್ಕೆಟ್ ಕುಮಾರ್, ಶಿವಣ್ಣ, ಪ್ರಸಾದ, ದಾಕ್ಷಾಯಿಣಿ, ವನಜಾಕ್ಷಿ, ಪುಷ್ಪಮಾಲಾ ಇತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗುಂಡ್ಲುಪೇಟೆ ವರದಿ(ಸೋಮ್.ಜಿ): ಪಾಕಿಸ್ತಾನ ಉಗ್ರನೆಲೆಯನ್ನು ಧ್ವಂಸ ಮಾಡುವು ದರೊಂದಿಗೆ ಭಾರತೀಯ ಸೇನೆ ಸಾಧಿಸಿರುವ ಯಶಸ್ಸನ್ನು ಬೆಂಬಲಿಸಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿತು.

ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತು ಮುಖಂಡ ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಮುಂಭಾಗ ದಲ್ಲಿ ಸಮಾವೇಶಗೊಂಡ ಮುಖಂಡರು, ಕಾರ್ಯಕರ್ತರು ಮತ್ತು ಪದಾಧಿಕಾರಿ ಗಳು ಪಟಾಕಿ ಸಿಡಿಸಿ ಪಾಕಿಸ್ತಾನಕ್ಕೆ ಧಿಕ್ಕಾರ ಮತ್ತು ಭಾರತದ ಸೈನಿಕರಿಗೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಪುರಸಭೆ ಸದಸ್ಯ ಎಸ್.ಗೋವಿಂದರಾಜನ್, ಮುಖಂಡರಾದ ಆಲತ್ತೂರು ಬಾಬು, ಕಿರಣ್, ಮಹದೇವಪ್ರಸಾದ್, ನಾಗೇಂದ್ರ, ರಾಘವಾಪುರ ದೇವಯ್ಯ, ನಿವೃತ್ತ ಡಿವೈಎಸ್‍ಪಿ ಶಿವಬಸಪ್ಪ, ಬೆಳಚಲವಾಡಿ ರಾಜಶೇಖರ್, ದೊಡ್ಡಹುಂಡಿ ಜಗದೀಶ್, ಕೆ.ಆರ್. ಲೋಕೇಶ್, ಎಸ್.ಸಿ.ಮಂಜುನಾಥ್, ಮಲ್ಲಿಕಾರ್ಜುನ್ ಇತರರು ಇದ್ದರು.

Translate »