ನಾಳೆ ಮೈಸೂರಲ್ಲಿ ‘ಸ್ಫೂರ್ತಿ ಉತ್ಸವ’
ಮೈಸೂರು

ನಾಳೆ ಮೈಸೂರಲ್ಲಿ ‘ಸ್ಫೂರ್ತಿ ಉತ್ಸವ’

December 22, 2018

ಮೈಸೂರು : ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಃಂI)ದ ಅಂಗ ಸಂಸ್ಥೆಯಾದ ‘ಸ್ಫೂರ್ತಿ’ ಮಹಿಳಾ ಘಟಕವು ಭಾನುವಾರ (ಡಿ.23) ಮೈಸೂರಿನ ಕುವೆಂಪುನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ‘ಸ್ಫೂರ್ತಿ ಉತ್ಸವ’ವನ್ನು ಆಯೋಜಿಸಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಮೇಯರ್ ಪುಷ್ಪಲತಾ ಜಗನ್ನಾಥ ಅವರು ಉತ್ಸವವನ್ನು ಉದ್ಘಾಟಿಸಲಿದ್ದು, ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು ಎಂದು ಸ್ಫೂರ್ತಿ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ‘ಸಾವಯವ ಕೃಷಿ’ ಕುರಿತ ಅರಿವು ಕಾರ್ಯಕ್ರಮ ದಲ್ಲಿ ಮೈಸೂರು ಆಕಾಶವಾಣಿ ಕೃಷಿ ಬಾನುಲಿ ವಿಭಾಗದ ಮುಖ್ಯಸ್ಥರಾದ ಕೇಶವಮೂರ್ತಿ ಹಾಗೂ ಕೋ-ಆಪರೇಟಿವ್ ಫಾರ್ಮರ್ಸ್ ಅಸೋಸಿಯೇಷನ್ ಒಕ್ಕೂಟದ ರಮೇಶ್ ರಂಗಸಮುದ್ರ ಅವರು ರೈತ ಮಹಿಳೆಯರಿಗೆ ಸಾವಯವದ ಬಗ್ಗೆ ಜಾಗೃತಿ ಮೂಡಿಸುವರು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್.ಹೇಮಲತಾ ಅವರು ನ್ಯೂಟ್ರಿಷನ್ ಕುರಿತು ಉಪನ್ಯಾಸ ನೀಡುವರು. ಆಹಾರ ಮತ್ತು ಸಾವಯವ ಕುರಿತು ಒಟ್ಟು 47 ಮಳಿಗೆಗಳನ್ನು ವಸ್ತು ಪ್ರದರ್ಶನದಲ್ಲಿ ತೆರೆಯಲಿದ್ದು, ರೈತ ಮಹಿಳೆಯರು ತಾವು ಬೆಳೆದ ಸಾವಯವ ಹಣ್ಣು, ತರಕಾರಿ ಹಾಗೂ ಆಹಾರ ಪದಾರ್ಥಗಳ ಮಾರುಕಟ್ಟೆ ಮಾಡಲು ಅನುವು ಮಾಡಿ ಕೊಡಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ವಸ್ತು ಪ್ರದರ್ಶನ ತೆರೆದಿರುತ್ತದೆ.

Translate »