ಮಕ್ಕಳ ತಪ್ಪುಗಳನ್ನು ಚಿಕ್ಕದರಲ್ಲೇ ತಿದ್ದುವುದು ಪೋಷಕರ ಕರ್ತವ್ಯ
ಹಾಸನ

ಮಕ್ಕಳ ತಪ್ಪುಗಳನ್ನು ಚಿಕ್ಕದರಲ್ಲೇ ತಿದ್ದುವುದು ಪೋಷಕರ ಕರ್ತವ್ಯ

July 21, 2019

ಬೇಲೂರು, ಜು.20- ಮನೆಯ ಪರಿಸರದಲ್ಲಿ ಮಕ್ಕಳ ಪ್ರಾರಂಭಿಕ ಹಂತದ ಬೆಳವಣಿಗೆಯು ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿ ಎಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಕಾಲೇಜಿನ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ.ಸಂತೋಷ್ ಹೇಳಿದರು.

ತಾಲೂಕಿನ ಅರೇಹಳ್ಳಿ ರೋಟರಿ ಸಂಸ್ಥೆ ಹಾಗೂ ರೋಟರಿ ಶಾಲೆ ಸಹಯೋಗದಲ್ಲಿ ರೋಟರಿ ಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ಸಭೆಯಲ್ಲಿ ಮಾತ ನಾಡಿದ ಅವರು, ಮಕ್ಕಳು ಚಿಕ್ಕ ವಯಸ್ಸಿ ನಲ್ಲಿ ಅನೇಕ ತಪ್ಪುಗಳನ್ನು ಮಾಡುವುದು ಸಹಜ. ಆ ತಪ್ಪು ಪೋಷಕರ ಗಮನಕ್ಕೆ ಬಂದ ತಕ್ಷಣವೇ ಅದನ್ನು ತಿದ್ದಿ ಸರಿಪಡಿ ಸಲು ಮುಂದಾಗಬೇಕು. ಮಗುವಿಗೆ ಪುನಃ ತಪ್ಪು ಮಾಡದಂತೆ ಸರಿಯಾದ ಮಾರ್ಗ ದರ್ಶನ ಮಾಡಬೇಕು ಎಂದÀರು.

ಮಕ್ಕಳು ಮನೆಯಲ್ಲಿ ಹೆಚ್ಚಾಗಿ ಟಿವಿ, ಮೊಬೈಲ್ ಜತೆಗೇ ಕಾಲ ಕಳೆಯುವುದು ಹೆಚ್ಚಿದೆ. ಪೋಷಕರು ಈ ವಿಚಾರದಲ್ಲಿ ಎಚ್ಚರ ವಹಿಸಬೇಕು. ಹಾಗೂ ಮಗುವಿ ನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆ ಮೂಲಕ ಮಗುವನ್ನು ಸಮಾಜ ಗುರುತಿಸುವಂತೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ್ದರು. ರೋಟರಿ ಸಂಸ್ಥೆ ಹಾಗೂ ಶಾಲಾಡಳಿತ ಏರ್ಪಡಿ ಸಿದ್ದ ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ಆರೋಗ್ಯದ ಮಾಹಿತಿ ನೀಡಿದ್ದಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ರೋಟರಿ ಸಂಸ್ಥೆ ಆಧ್ಯಕ್ಷ ಅರುಣ್, ಕಾರ್ಯದರ್ಶಿ ಪೃಥ್ವಿ, ಪಿಂಟೋ, ಶಾಲೆಯ ಮುಖ್ಯ ಶಿಕ್ಷಕಿ ತುಳಸಿ ಇತರರಿದ್ದರು.

Translate »