ಜ.26 ರಂದು ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಹಾಸನ

ಜ.26 ರಂದು ಜಕಣಾಚಾರಿ ಸಂಸ್ಮರಣಾ ದಿನಾಚರಣೆ

January 24, 2019

ಹಾಸನ: ನಗರದ ಎಂ.ಜಿ.ರಸ್ತೆ, ಶ್ರೀ ಅನ್ನಪೂರ್ಣೆಶ್ವರಿ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಶ್ರೀ ಕಾಳಿಕಾಂಬ ದೇವಾ ಲಯದ ನಿವೇಶನದಲ್ಲಿ ಜ.26ರಂದು ಬೆಳಿಗ್ಗೆ 11 ಗಂಟೆಗೆ ಜಕಣಾ ಚಾರಿ ಸಂಸ್ಮರಣಾ ದಿನಾಚರಣೆ ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ವಿ.ಹರೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಶ್ವಕರ್ಮ ಜಗದ್ಗುರು ಪೀಠ ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ, ಉದ್ಘಾಟನೆ ಯನ್ನು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಮುಖ್ಯ ಅತಿಥಿಯಾಗಿ ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್ ಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ, ಸಂಶೋಧಕ ಸತೀಶ್ ಮುಳ್ಳೂರು ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಮಾಸ್ಟರ್ ಹೃದಯ ರವರಿಂದ ಗೀತಗಾಯನ ಮತ್ತು ಕುಮಾರಿ ಭೂಮಿಕಾರವರಿಂದ ಭರತನಾಟ್ಯ, ಸಮಾಜದ ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

ಸನಾತನ ಭಾರತೀಯ ಸಂಪ್ರದಾಯ ಅಳಿಯದೇ ಉಳಿಯು ವಲ್ಲಿ ಮಹತ್ತರವಾದ ಮೈಲಿಗಲ್ಲು ಎಂದರೆ ದೇವಾಲಯಗಳು. ಇಂತಹ ದೇವಾಲಯಗಳ ನಿರ್ಮಾಣದಲ್ಲಿ ಪ್ರಸಿದ್ಧರಾದವರು ಅಮರ ಶಿಲ್ಪಿ ಜಕಣಾಚಾರಿ. ಜಿಲ್ಲೆಯ ಹೆಸರನ್ನು ವಿಶ್ವ ಭೂಪಟ ದಲ್ಲಿ ಅಜರಾಮರವಾಗಿರುವಂತೆ 9 ಶತಮಾನಗಳ ಹಿಂದೆ ನಿರ್ಮಾಣವಾದ ಬೇಲೂರು, ಹಳೇಬೀಡು ದೇವಸ್ಥಾನಗಳು ಪ್ರಮುಖ. ಇವರ ನೆನಪನ್ನು ಹಸಿರಾಗಿಡುವಂತೆ ಬೇಲೂರು ದೇವಾಲಯದ ಆವರಣದಲ್ಲಿ ಅಮರ ಶಿಲ್ಪಿ ಜಕಣಾ ಚಾರಿಯವರು. ಇವರ ನೆನಪನ್ನು ಹಸಿರಾಗಿಡುವಂತೆ ಬೇಲೂರು ದೇವಾಲಯದ ಆವರಣದಲ್ಲಿ ಅಮರ ಶಿಲ್ಪಿಯ ಪ್ರತಿಮೆ ಅನಾವರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಮಹಾ ಸಭಾದ ಮಾಜಿ ಅಧ್ಯಕ್ಷ ಬಿ.ಸಿ. ಶಂಕರಾಚಾರ್ ಮಾತನಾಡಿ, 900 ವರ್ಷಗಳು ಕಳೆದರೂ ಸರ್ಕಾರವು ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸುವಲ್ಲಿ ಮುಂದಾಗುತ್ತಿಲ್ಲ ಎಂದು ದೂರಿದರು. ವಿಶ್ವವಿದ್ಯಾನಿಲಯಕ್ಕೆ ಜಕಣಾಚಾರಿ ಹೆಸರು ಇಡಬೇಕು. ನಗರದ ತಣ್ಣೀರುಹಳ್ಳ ವೃತ್ತಕ್ಕೆ ಜಕಣಾಚಾರಿ ಹೆಸರನ್ನು ಇಡಬೇಕು. ಬೇಲೂರು-ಹಳೇಬೀಡು ಸ್ಥಳದಲ್ಲಿ ಶಿಲ್ಪಿಗಳ ತರಬೇತಿ ಕೇಂದ್ರಕ್ಕೆ 10 ಎಕರೆ ಜಮೀನನ್ನು ನೀಡುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಕರ್ಮ ಮಹಾಸಭಾ ಸಮಾಜದ ಮುಖಂಡರು ಜಿ.ವಿ.ಜಗನ್ನಾಥ್, ಎ.ಬ್ಯಾಟರಂಗಾಚಾರ್, ಬಿ.ಲೋಕೇಶ್ ಇತರರು ಉಪಸ್ಥಿತರಿದ್ದರು.

Translate »