ಭಾರತೀಯ ವಿದ್ಯಾಭವನದ ಬಿಪಿಬಿಇಎಂನಲ್ಲಿ ಜಪಾನೀ ಭಾಷಾ ಕಲಿಕೆ ಕೋರ್ಸ್
ಮೈಸೂರು

ಭಾರತೀಯ ವಿದ್ಯಾಭವನದ ಬಿಪಿಬಿಇಎಂನಲ್ಲಿ ಜಪಾನೀ ಭಾಷಾ ಕಲಿಕೆ ಕೋರ್ಸ್

July 24, 2018

ಮೈಸೂರು: ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಭವನ್ಸ್ ಪ್ರ್ರಿಯಂವದಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಬಿಪಿಬಿಇಎಂ)ನಲ್ಲಿ ಜಪಾನ್ ಭಾಷಾ ಕಲಿಕೆಯ ನೂತನ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಬಿಪಿಬಿಇಎಂನ ಪ್ರೊ.ಹೆಚ್.ಎಂ.ವಾಣಿ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಸ್‍ನಲ್ಲಿ ದಿನನಿತ್ಯದ ವ್ಯವಹಾರಗಳಾದ ಸುಲಭ ಸಂಭಾಷಣೆ, ಒಬ್ಬರನ್ನೊಬ್ಬರು ಪರಿಚಯಿಸುವುದು ಇನ್ನಿತರ ವಿಷಯಗಳನ್ನು ಬೋಧಿಸಲಾಗುವುದು. ಕೋರ್ಸ್‍ನ ಕೊನೆಯಲ್ಲಿ ವಿದ್ಯಾರ್ಥಿಗಳೂ ಜಪಾನೀ ಭಾಷೆಯಲ್ಲಿ ಸಾಮಾನ್ಯ ವ್ಯವಹಾರ ನಡೆಸುವ ಪರಿಣಿತಿ ಹೊಂದಲಿದ್ದಾರೆ. 20 ವಾರಗಳ ಕೋರ್ಸ್ ಅನ್ನು ವಾರಾಂತ್ಯ ದಿನಗಳಲ್ಲಿ ಎರಡು ಗಂಟೆಗಳ ಕಾಲ ಕಲಿಸಲಾಗುವುದು. ಒಟ್ಟು ಶುಲ್ಕ ರೂ.2,000 ಎಂದರು.

ಜಪಾನ್ ದೇಶವು ಎಲೆಕ್ಟ್ರಾನಿಕ್, ರೊಬೊಟಿಕ್ಸ್ ಮತ್ತು ಇನ್ನಿತರೆ ತಂತ್ರಜ್ಞಾನಗಳ ವಿನ್ಯಾಸ ಮತ್ತು ತಯಾರಿಕೆಗಳು ವಿಶ್ವದಲ್ಲಿಯೇ ಪ್ರಮುಖ ಕೈಗಾರಿಕಾ ರಾಷ್ಟ್ರವಾಗಿದೆ. ಭಾರತವು ಜಪಾನ್ ದೇಶದೊಡನೆ ಅನೇಕ ಕೈಗಾರಿಕೆಗಳ ಸಹಭಾಗಿತ್ವವನ್ನು ಹೊಂದಿದೆ.

ಹೋಂಡ, ಸುಜುಕಿ, ಟೊಯೋಟ, ಸಾನ್ಯೋ, ತೋಶಿಬಾ ಇನ್ನೂ ಕೆಲವು ಉದ್ಯೋಗಗಳು ಇಂಡಿಯಾ-ಜಪಾನ್ ಸಹಕಾರದಿಂದ ಮುನ್ನಡೆಯುತ್ತಿವೆ. ಭಾರತೀಯರು ಅಧಿಕ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉನ್ನತ ತಾಂತ್ರಿಕ ಸಹಕಾರ, ಪರಿಣಿತಿ ಪಡೆಯುವಿಕೆ ಹಾಗೂ ಪ್ರವಾಸ ಮಾಡಲು ಜಪಾನ್ ದೇಶಕ್ಕೆ ಭೇಟಿ ನೀಡುತಿದ್ದಾರೆ. ಹೀಗಾಗಿ ಜಪಾನ್ ಭಾಷೆಯ ಕಲಿಕೆಗೆ ನಮ್ಮ ಸಂಸ್ಥೆ ವಿಪುಲ ಅವಕಾಶ ಒದಗಿಸಲಿದೆ ಎಂದು ಹೇಳಿದರು.

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳು ವ್ಯಾಕರಣದ ರೀತಿಯಲ್ಲಿಯೆ ಇರುವ ಜಪಾನಿ ವ್ಯಾಕರಣವೂ ಇದ್ದು, ಇದು ಕಲಿಯುವವರಿಗೆ ಹೆಚ್ಚು ಸುಲಭವಾಗಿದೆ. ಆ.2ನೇ ವಾರದಲ್ಲಿ ಕೋರ್ಸ್ ಆರಂಭವಾಗಲಿದೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಕಿರು ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಪ್ರೊ.ಎ.ವಿ.ನರಸಿಂಹಮೂರ್ತಿ, ಪ್ರೊ.ಎ.ಟಿ.ಭಾಷ್ಯಂ ಉಪಸ್ಥಿತರಿದ್ದರು.

Translate »