ಜುಬಿಲಂಟ್ ಪ್ರಕರಣ; ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ದಸಂಸ ಆಗ್ರಹ
ಮೈಸೂರು

ಜುಬಿಲಂಟ್ ಪ್ರಕರಣ; ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ದಸಂಸ ಆಗ್ರಹ

May 24, 2020

ಮೈಸೂರು, ಮೇ 23(ಪಿಎಂ)- ಕೊರೊನಾ ಸೋಂಕು ಮೈಸೂರು ಜಿಲ್ಲೆ ಯಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಕಾರಣ ವಾದ ನಂಜನಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆ ವಿರುದ್ಧ ಕ್ರಿಮಿ ನಲ್ ಪ್ರಕರಣ ದಾಖಲಿಸಿ, ತನಿಖೆಯನ್ನು ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು. ಕಾರ್ಖಾನೆಯಿಂದಾಗಿ ಕೊರೊನಾ ಸೋಂಕಿನ ಕಷ್ಟಕ್ಕೆ ಸಿಲುಕಿದವ ರಿಗೆ ಕಂಪನಿಯೇ ಪರಿಹಾರ ಭರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಮೈಸೂರಿನ ನಜರ್‍ಬಾದ್ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪ್ರಕರಣದಲ್ಲಿ ಸರ್ಕಾರ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮೊದಲು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರನ್ನು ತನಿಖೆಗೆ ನೇಮಿಸಿ ಪೂರ್ಣ ತನಿಖೆಗೆ ಅವಕಾಶ ನೀಡಲಿಲ್ಲ. ಇದು ಅನುಮಾನ ಹೆಚ್ಚಿಸಿದೆ ಎಂದರು.

ಕೇಂದ್ರ ನಿರ್ಲಕ್ಷ್ಯ: ದೇಶಾದ್ಯಂತ ಕೊರೊನಾ ಸೋಂಕು ಹರಡಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಆರಂಭದಲ್ಲಿ ಸೋಂಕನ್ನು ಕೇಂದ್ರ ಗಂಭೀರವಾಗಿ ಪರಿ ಗಣಿಸಲಿಲ್ಲ. ಬದಲಿಗೆ `ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ಆಸಕ್ತಿ ತೋರಿತು. ವಿದೇಶ ದಿಂದ ಕೊರೊನಾ ಸೋಂಕು ತಂದ ಶ್ರೀಮಂತರನ್ನು ಕ್ವಾರಂಟೈನ್ ಮಾಡದೇ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯನ್ನೇ ಕೊರೊನಾ ಹರಡಲು ಕಾರಣ ಎನ್ನು ವಂತೆ ವ್ಯವಸ್ಥಿತವಾಗಿ ಸಂಚು ನಡೆಸಲಾ ಯಿತು. ಆ ಮೂಲಕ ಕೇಂದ್ರ ತನ್ನ ಲೋಪ ಮರೆಮಾಚಲು ಯತ್ನಿಸಿತು ಎಂದು ಆರೋಪಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ. ದೇವೇಂದ್ರ, ಜಿಲ್ಲಾ ಖಜಾಂಚಿ ಮೂಡಳ್ಳಿ ಮಹದೇವ್, ಮುಖಂಡರಾದ ಪಿ.ಎಂ. ಗೋವಿಂದರಾಜು, ಶಿವರಾಜು ಮತ್ತಿತ ರರು ಸುದ್ದಿಗೋಷ್ಠಿಯಲ್ಲಿದ್ದರು.

Translate »