ರಾಯರ ಮಠದಲ್ಲಿ ಬಜೆಟ್ ಪ್ರತಿಗೆ ಪೂಜೆ
ಮೈಸೂರು

ರಾಯರ ಮಠದಲ್ಲಿ ಬಜೆಟ್ ಪ್ರತಿಗೆ ಪೂಜೆ

March 6, 2020

ಬೆಂಗಳೂರು, ಮಾ.5(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆಗೂ ಮುನ್ನ ನಗರದ ಮಲ್ಲೇಶ್ವರಂನಲ್ಲಿ ರುವ ರಾಯರ ಮಠಕ್ಕೆ ತೆರಳಿ ಬಜೆಟ್ ಪ್ರತಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅರಮನೆ ಆವರಣ ದಲ್ಲಿ ಸಚಿವ ರಾಮುಲು ಅವರ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಅಲ್ಲಿಂದ ನೇರ ವಾಗಿ ವಿಧಾನಸೌಧಕ್ಕೆ ಆಗಮಿಸಿ, ಸಂಪುಟ ಸಭೆ ಯಲ್ಲಿ ಭಾಗವಹಿಸಿ, 2020-21ನೇ ಸಾಲಿನ ಮುಂಗಡ ಪತ್ರಕ್ಕೆ ಅನುಮೋದನೆ ಪಡೆದರು.

ಶ್ವೇತಧಾರಿ ಯಡಿಯೂರಪ್ಪ ಹಸಿರು ಶಾಲು ಹೊದ್ದು, ತಮ್ಮ ಸಹೋದ್ಯೋಗಿಗಳ ಜೊತೆ ಮುಂಗಡ ಪತ್ರದ ಪ್ರತಿಯ ಸೂಟ್‍ಕೇಸ್ ಹೊತ್ತು 10.55ಕ್ಕೆ ವಿಧಾನಸಭೆ ಪ್ರವೇಶಿಸಿದರು. 4ನೇ ಅವಧಿಗೆ ಮುಖ್ಯಮಂತ್ರಿ ಯಾಗಿರುವ ಯಡಿಯೂರಪ್ಪ ಹೊಸ ಸರ್ಕಾರದ ಮೊದಲ ಸಾಲಿನ ಬಜೆಟ್‍ನ್ನು ಇಂದು ಮಂಡಿಸುವ ಮೂಲಕ 7 ಬಾರಿ ಮಂಡನೆ ಮಾಡಿದ ಕೀರ್ತಿಗೆ ಒಳಗಾದರು. ಉಪ ಮುಖ್ಯಮಂತ್ರಿಯಾಗಿ 2 ಬಾರಿ, ಮುಖ್ಯಮಂತ್ರಿಯಾಗಿ 5 ಬಾರಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ.

Translate »