ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ  ಕ್ಷೇತ್ರದಲ್ಲಿ ಬಿಎಸ್‍ಪಿ ಪ್ರಬಲ ಪೈಪೋಟಿ
ಮೈಸೂರು

ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‍ಪಿ ಪ್ರಬಲ ಪೈಪೋಟಿ

March 12, 2019

ಮೈಸೂರು: ಮೈಸೂರು-ಕೊಡಗು ಮತ್ತು ಚಾಮರಾಜ ನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಾರ್ಟಿ ಪ್ರಬಲವಾಗಿದ್ದು, ಇತರೆ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಶಿವರಾಂ ಪೇಟೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವಿಭಾಗ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನಿಷ್ಠ 2 ಲೋಕಸಭಾ ಕ್ಷೇತ್ರಗಳನ್ನಾದರೂ ಬಿಎಸ್‍ಪಿ ಗೆಲ್ಲಲೇಬೇಕು. ಕನಿಷ್ಠ 8ರಿಂದ 10 ಲಕ್ಷ ಮತದಾರರನ್ನು ಕ್ರೋಢೀಕರಿಸಿ, ನಮ್ಮ ಪಕ್ಷದ ರಾಷ್ಟ್ರೀಯ ಮಾನ್ಯತೆ ಉಳಿಸಿಕೊಳ್ಳ ಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸು ವಂತೆ ಕರೆ ನೀಡಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಕೈ ಕಟ್ಟಿಸಿಕೊಂಡಿದ್ದೆವು. ಈಗ ನಮ್ಮ ಪಕ್ಷ ಸ್ವತಂತ್ರವಾಗಿದ್ದು, ಎಲ್ಲಾ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕಲು ಚಿಂತಿಸಿದೆ. ಒಂದೆರಡು ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸುವ ಜೊತೆಗೆ ನಾವು ಶಕ್ತಿವಂತರು ಎಂಬುದನ್ನು ಈ ಚುನಾ ವಣೆಯಲ್ಲಿ ಸಾಬೀತು ಪಡಿಸಬೇಕಿದೆ ಎಂದು ಎನ್.ಮಹೇಶ್ ಹೇಳಿದರು.

ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದ್ದು, ಜೊತೆಗೆ ಚಿಕ್ಕಬಳ್ಳಾಪುರ, ಬೀದರ್, ಕಲ ಬುರ್ಗಿ, ಚಿಕ್ಕೋಡಿ, ಬಾಗಲಕೋಟೆ ಕ್ಷೇತ್ರ ಗಳಲ್ಲಿಯೂ ಪಕ್ಷದ ಅಪಾರ ಬೆಂಬಲಿ ಗರಿದ್ದು, ಅಲ್ಲಿ ಪ್ರಬಲ ಪೈಪೋಟಿ ನೀಡಲಿ ದ್ದೇವೆ. ಈ ನಿಟ್ಟಿನಲ್ಲಿ ಮೈಸೂರು, ಚಾಮರಾಜ ನಗರ ಸೇರಿದಂತೆ ಸೂಕ್ತ ಕ್ಷೇತ್ರದಲ್ಲಿ ಅಭ್ಯರ್ಥಿ ಯನ್ನು ಕಣಕ್ಕಿಳಿಸಲಾಗುವುದು ಎಂದರು.

ಮೈಸೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವು ದರಿಂದ ಮೈಸೂರು ಮತ್ತು ಚಾಮರಾಜ ನಗರ ಲೋಕಸಭಾ ಕ್ಷೇತ್ರಗಳಲ್ಲಿ ಪರಸ್ಪರ ಪರಿಣಾಮ ಉಂಟಾಗುವುದರಿಂದ ಜಯ ಗಳಿಸಬಹುದಾದ ಸೂಕ್ತ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಹೇಳಿದರು.

ಪಕ್ಷದ ಪದಾಧಿಕಾರಿಗಳು, ಕಾರ್ಯ ಕರ್ತರು ಹಳ್ಳಿ ಹಳ್ಳಿಗಳಿಗೆ ಹೋಗಿ ಪಕ್ಷದ ಸಿದ್ಧಾಂತವನ್ನು ಮತದಾರರಿಗೆ ತಿಳಿ ಹೇಳುವ ಮೂಲಕ ಮತ ಗಳಿಸುವ ಪ್ರಯತ್ನ ಮಾಡ ಬೇಕಾಗಿದೆ ಎಂದು ಸಲಹೆ ನೀಡಿದರು.

ಆಕಾಂಕ್ಷಿಗಳಿಂದ ಅರ್ಜಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳು 10,000 ರೂ. ಶುಲ್ಕದೊ ಡನೆ ತಮ್ಮ ಎಲ್ಲಾ ವಿವರಗಳ ಸಹಿತ ಪಕ್ಷದ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹು ದಾಗಿದೆ. ಆದರೆ ಈ ಹಣ ಮರು ವಾಪಸಿಗೆ ಅವಕಾಶವಿಲ್ಲ ಎಂದೂ ತಿಳಿಸಿದರು.

ಮಾಯಾವತಿ ಭೇಟಿ ವೇಳೆ ಒಂದು ಲಕ್ಷ ಜನ: ಪಕ್ಷದ ರಾಷ್ಟ್ರೀಯ ನಾಯಕಿ ಮಾಯಾವತಿ ಮೈಸೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕನಿಷ್ಠ ಒಂದು ಲಕ್ಷ ಜನ ಸೇರುವಂತೆ ಸಿದ್ಧತೆ ಮಾಡಿಕೊಳ್ಳ ಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯ ಕರ್ತರು ಶ್ರಮಿಸಬೇಕಿದೆ. ಅಭ್ಯರ್ಥಿ ಘೋಷಣೆ ಬಳಿಕ ಮನೆ ಮನೆಗೆ ತೆರಳಿ ಮತ ಯಾಚಿಸುವಂತೆ ಮನವಿ ಮಾಡಿದರು.

ಜಾಲತಾಣ ಬಳಕೆ ಸಲ್ಲದು: ಯಾವುದೇ ಪಕ್ಷದ ಅಭ್ಯರ್ಥಿ ವಿರುದ್ಧ ಫೇಸ್‍ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಪ್ರಾಯಗಳನ್ನು ಹಾಕುವಂತಿಲ್ಲ. ಅಂಥವರ ವಿರುದ್ಧ ಚುನಾ ವಣಾ ಆಯೋಗ ಜೈಲಿಗೆ ಕಳುಹಿಸು ವುದಾಗಿ ಪ್ರಕಟಿಸಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಶಿಸ್ತಿನಿಂದ ಎದುರಿಸುವಂತೆಯೂ ಸಲಹೆ ನೀಡಿದರು. ಸಭೆಯಲ್ಲಿ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ವಿಭಾಗೀಯ ಉಸ್ತುವಾರಿ ರಾಹುಲ್, ಮೈಸೂರು ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಕಾರ್ಯದರ್ಶಿ ಪ್ರತಾಪ್, ಮಹಾನಗರಪಾಲಿಕೆ ಸದಸ್ಯೆ ಬೇಗಂ ಪಲ್ಲವಿ, ನಗರಾಧ್ಯಕ್ಷ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.

Translate »