ಕೌಟಿಲ್ಯ ವಿದ್ಯಾರ್ಥಿಗಳಿಂದ ಮೈನವಿರೇಳಿಸುವ ಸಾಹಸ ಸಾಮಥ್ರ್ಯ ಪ್ರದರ್ಶನ
ಮೈಸೂರು

ಕೌಟಿಲ್ಯ ವಿದ್ಯಾರ್ಥಿಗಳಿಂದ ಮೈನವಿರೇಳಿಸುವ ಸಾಹಸ ಸಾಮಥ್ರ್ಯ ಪ್ರದರ್ಶನ

June 12, 2018

ಮೈಸೂರು: ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಹಾಗೂ ಎದೆಗಾರಿಕೆ ಬರಬೇಕಾದರೆ ವಿದ್ಯಾರ್ಥಿದೆಸೆಯಿಂದಲೇ ಮಕ್ಕಳನ್ನು ಉತ್ತೇಜಿಸಬೇಕೆಂಬ ಕಾಯಕಲ್ಪದ ಕಾರ್ಯಕ್ರಮವಾಗಿ ಕೌಟಿಲ್ಯ ವಿದ್ಯಾಲಯವು ತನ್ನ ಅಡ್ವೆಂಚರ್ ಕ್ಲಬ್ ಹಾಗೂ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‍ನ ಸಹಯೋಗದೊಂದಿಗೆ ಆಗಿಂದ್ದಾಗೆ ಹಮ್ಮಿಕೊಳ್ಳುವ ಸಾಹಸ ಕ್ರೀಡೆಗಳ ಮುಂದುವರೆದ ಭಾಗವಾಗಿ ಶನಿವಾರ ಪಾಂಡವಪುರದ ಕುಂತಿಬೆಟ್ಟದ ಸುತ್ತಮುತ್ತ ಹಲವಾರು ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಸಾಂಪ್ರದಾಯಿಕ ಕ್ರೀಡೆಗಳ ಜತೆ ಜತೆಗೇ ಸಾಹಸ ಕ್ರೀಡೆಗಳೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕೌಟಿಲ್ಯ ವಿದ್ಯಾಲಯವು ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದ ಒಂದು ಪ್ರಮುಖ ಭಾಗವೆಂದು ಪರಿಗಣಿಸಿ, ವಿದ್ಯಾಲಯ ದಲ್ಲಿ ಈಗಾಗಲೇ ಈಜು, ಕರಾಟೆ, ಟೆನ್ನಿಸ್, ಸ್ಕೇಟಿಂಗ್ ಈ ಮೊದ ಲಾದ ಸ್ಪರ್ಧಾತ್ಮಕ ಕ್ರೀಡೆಗಳೊಂದಿಗೆ ಪ್ಯಾರಾ ಸೇಲಿಂಗ್, ರಿವರ್ ರ್ಯಾಫ್ಟಿಂಗ್, ಕಯಾಕಿಂಗ್, ರಾಕ್ ಕ್ಲೈಂಬಿಂಗ್ (ಶಿಲಾರೋಹಣ) ಮೊದಲಾದ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಲು ಉತ್ತೇಜಿ ಸುವ ಕ್ರೀಡೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂದು ವಿದ್ಯಾಲಯದ ನೂರಾರು ಐದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ವಿವಿಧ ಸಾಹಸ ಕ್ರೀಡೆಗಳಲ್ಲಿ ಭಾಗ ವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‍ನ ಕ್ಯಾಪ್ಟನ್ ಶ್ರೀಮತಿ ರುಕ್ಮಿಣ ಚಂದ್ರನ್ ಹಾಗೂ ತಂಡವರು ಮತ್ತು ಅಡ್ವೆಂಚರ್ ಕ್ಲಬ್‍ನ ಸದಸ್ಯರಾದ ಶ್ರೀಮತಿ ಶ್ವೇತಾ ಜಿಸಿ., ಲೋಕೇಶ್ ಮತ್ತು ರಮೇಶ್, ವಿದ್ಯಾರ್ಥಿ ಗಳಿಗೆ ಸೂಕ್ತ ಮಾರ್ಗದರ್ಶನದಲ್ಲಿ ನೀಡಿ, ಪ್ರೋತ್ಸಾಹಿಸಿದರು.

Translate »