ಕೆಎಂಎಫ್, ಹೆಚ್‍ಡಿಸಿಸಿ ಬ್ಯಾಂಕ್ ಹೆಚ್‍ಡಿಡಿ ಕುಟುಂಬದ ಆಸ್ತಿಮಾಜಿ ಸಚಿವ ಎ.ಮಂಜು ಆರೋಪ
ಹಾಸನ

ಕೆಎಂಎಫ್, ಹೆಚ್‍ಡಿಸಿಸಿ ಬ್ಯಾಂಕ್ ಹೆಚ್‍ಡಿಡಿ ಕುಟುಂಬದ ಆಸ್ತಿಮಾಜಿ ಸಚಿವ ಎ.ಮಂಜು ಆರೋಪ

July 16, 2019

ಹಾಸನ, ಜು.15- ಜಿಲ್ಲೆಯ ಹಾಸನ ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕುಟುಂಬದ ಆಸ್ತಿಯಾಗಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಹಾಸನ ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‍ನಲ್ಲಿ ಸಾಕಷ್ಟು ಭ್ರಷ್ಟಾ ಚಾರ ನಡೆಯುತ್ತಿದ್ದು, ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಹೆಚ್‍ಡಿಸಿಸಿ ಬ್ಯಾಂಕಿನಲ್ಲಿ ದೇವೇಗೌಡರ ಕುಟುಂಬಸ್ಥರು, ಸಂಬಂಧಿಕರಿಗೆ ಮಾತ್ರ ಸಾಕಷ್ಟು ಸಾಲ ನೀಡಲಾಗುತ್ತಿದೆ. ಆದರೆ ಅರ್ಹ ಫಲಾನುಭವಿಗಳಿಗೆ ಈ ಸಾಲ ಸೌಲಭ್ಯ ಗಳು ದೊರೆಯುತ್ತಿಲ್ಲ. ಕೆಎಂಎಫ್, ಹೆಚ್‍ಡಿಸಿಸಿ ಬ್ಯಾಂಕ್ ದೇವೇಗೌಡ ಕುಟುಂಬದ ಆಸ್ತಿಯೇ? ಎಂದು ಇದೇ ವೇಳೆ ಪ್ರಶ್ನಿಸಿದರು.

ರಾಜ್ಯದ ಮೈಸೂರು, ಶಿವಮೊಗ್ಗ ಮತ್ತಿತರ ಹಾಲು ಒಕ್ಕೂಟಗಳಲ್ಲಿ ಉತ್ಪಾದಕರಿಗೆ ಲೀ.ಹಾಲಿಗೆ 25 ರೂ. ನೀಡುತ್ತಿದ್ದರೆ, ಹಾಸನ ಹಾಲು ಒಕ್ಕೂಟ ದಲ್ಲಿ ಮಾತ್ರ 23 ರೂ. ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ದಿನವೊಂದಕ್ಕೆ 10 ಲಕ್ಷ ಲೀ. ಹಾಲು ಉತ್ಪಾದನೆ ಯಾಗುತ್ತಿದ್ದು, 20 ಲಕ್ಷ ರೂ. ಹಾಲು ಉತ್ಪಾದಕ ರಿಗೆ ಮೋಸವಾಗುತ್ತಿದೆ ಎಂದು ದೂರಿದರು.

ಕಳೆದ 14 ವರ್ಷಗಳಿಂದ ಮೋಸವಾಗುತ್ತಿ ದ್ದರೂ, ರೈತರು ಈ ಬಗ್ಗೆ ಎಲ್ಲಿಯೂ ಬಾಯಿ ಬಿಡುತ್ತಿಲ್ಲ. 6 ತಿಂಗಳ ಬಾಕಿ ಹಣ ಪಾವತಿಸದೇ ಅದೇ ಹಣವನ್ನು ಜನರಲ್ ಬಾಡಿ ಸಭೆಯಲ್ಲಿ ಆದಾಯವೆಂದು ತೋರಿಸುತ್ತಿದ್ದಾರೆ. ಈಗಾಗಲೇ ಹಾಸನ ಹಾಲು ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರ ಕಲಂ 64ರ ತನಿಖೆಯಿಂದ ಸಾಬೀತಾಗಿದೆ. ಈ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.

ರೇವಣ್ಣ ಅವರಿಗೆ ಸಚಿವ ಸ್ಥಾನ ಸಿಕ್ಕ ಬಳಿಕ ತಮ್ಮ ಹಳೆ ಚಾಳಿ ಮುಂದುವರೆಸಿದ್ದಾರೆ. ತಾವು ಪ್ರಾಣ ಬಿಟ್ಟರೂ ಸರಿ ಕೆಎಂಎಫ್ ಗದ್ದುಗೆ ಮಾತ್ರ ಬಿಟ್ಟುಕೊಡುವುದಿಲ್ಲ ಎಂಬಂತೆ ರೇವಣ್ಣ ವರ್ತಿಸು ತ್ತಿದ್ದಾರೆ ಎಂದ ಅವರು, ಅರಸೀಕೆರೆ ಡೈರಿಯಲ್ಲಿ ನಡೆದಿರುವ ಹಗರಣದ ಬಗ್ಗೆಯೂ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ಮೈತ್ರಿ ಸರ್ಕಾರದ ಅಸ್ಥಿರತೆ ಕುರಿತು ಮಾತ ನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಬಗ್ಗೆ ಅಂದೇ ಬಿ.ಎಸ್.ಯಡಿಯೂರಪ್ಪ ಅಪ್ಪ-ಮಕ್ಕಳನ್ನು ನಂಬಬೇಡಿ, ಬೀದಿಗೆ ಬರ್ತೀರಾ ಎಂದು ಸದನದಲ್ಲಿ ಹೇಳಿದ ಮಾತುಗಳು ನಿಜವಾ ಗಿವೆ. ಅವರ ಮಾತಿನಂತೆ ಜೆಡಿಎಸ್ ನಂಬಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಮ್ಮ ಶಾಸಕರಿಗಾಗಿ ಮುಂಬೈನ ಬೀದಿಗಳಲ್ಲಿ ನಿಲ್ಲುವಂ ತಹ ವಾತಾವರಣ ಸೃಷ್ಟಿಯಾಯಿತು ಎಂದು ವ್ಯಂಗ್ಯವಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ನಾಯಕರು ಈಗ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಜೆಡಿಎಸ್ ಜೊತೆ ಕಾಂಗ್ರೆಸ್ ಹೋದರೆ ತನ್ನ ಅಸ್ತಿತ್ವವನ್ನೇ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದು ನಾನು ಮೊದಲೇ ಹೇಳಿದ್ದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಬಿಎಸ್‍ವೈ ನೇತೃತ್ವದ ಸರ್ಕಾರ ಬರಲಿದ್ದು, ರಾಜ್ಯಕ್ಕೆ ಒಳ್ಳೆಯ ಆಡಳಿತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರ ಹೆಸರಿಡುವುದಕ್ಕಾಗಿಯೇ ಹಾಸನ ದಲ್ಲಿ ಸಾವಿರಾರು ಎಕರೆಯಲ್ಲಿ ಲೇಔಟ್ ಮಾಡುತ್ತಿ ರುವ ಸಚಿವ ರೇವಣ್ಣ, ಹಿಂದೆ ನಗರಕ್ಕೆ ನೀರು ಒದಗಿಸುತ್ತಿದ್ದ ಕೆರೆಯನ್ನು ಮುಚ್ಚಿ ಹಾಕಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇಷ್ಟೆಲ್ಲಾ ನಡೆಯುತ್ತಿ ದ್ದರೂ ಮುಖ್ಯಮಂತ್ರಿಗಳು ತಮ್ಮ ಸಹೋದರನಿಗೆ ಬುದ್ಧಿಮಾತು ಹೇಳಲಾಗದಂತಹ ಪರಿಸ್ಥಿತಿಯಲ್ಲಿ ದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭ ಗೊಂಡಿದೆ. ಆದರೆ ಎನ್.ಆರ್.ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವಂತಹ ರಸ್ತೆ ಅಗಲೀ ಕರಣ ಕೆಲಸ ಮಾತ್ರ ಆಗಿದ್ದು, ಕೇವಲ ಒಂದು ಬದಿ ಕಟ್ಟಡಗಳನ್ನು ಒಡೆದು ಹಾಕುತ್ತಿದ್ದಾರೆ. ಆದರೆ ಸಚಿವರ ಆಪ್ತರ ಕಟ್ಟಡವನ್ನು ಏಕೆ ಒಡೆಯುತ್ತಿಲ್ಲ? ಇದರ ಹಿಂದಿರುವ ಹುನ್ನಾರವಾದರೂ ಏನು ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾರಾಯಣಗೌಡ, ಗವಿ ರಂಗೇಗೌಡ ಇತರರು ಪಾಲ್ಗೊಂಡಿದ್ದರು.

ಮೈತ್ರಿ ಸರ್ಕಾರದ ಹಲವು ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದೆ. ಆದರೆ ರೇವಣ್ಣ ಮಾತ್ರ ಲೋಕೋಪಯೋಗಿ ಇಲಾಖೆಯ ಸುಮಾರು 200 ಜನರನ್ನು ವರ್ಗಾವಣೆ ಮಾಡುವ ಮೂಲಕ ದಂಧೆ ನಡೆಸುತ್ತಿದ್ದಾರೆ. ತಕ್ಷಣವೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ವರ್ಗಾವಣೆಗೆ ತಡೆಯಾಜ್ಞೆ ನೀಡಬೇಕು.
– ಎ.ಮಂಜು, ಮಾಜಿ ಸಚಿವ

Translate »