ಅಮರಗಿರಿ ಮಾಲೇಕಲ್ಲು ಲಕ್ಷ್ಮಿವೆಂಕಟೇಶ್ವರಸ್ವಾಮಿ ಪುರಪ್ರವೇಶ
ಹಾಸನ

ಅಮರಗಿರಿ ಮಾಲೇಕಲ್ಲು ಲಕ್ಷ್ಮಿವೆಂಕಟೇಶ್ವರಸ್ವಾಮಿ ಪುರಪ್ರವೇಶ

July 16, 2019

ಅರಸೀಕೆರೆ, ಜು.15- ತಾಲೂಕಿನ ಅಮರ ಗಿರಿ ಮಾಲೇಕಲ್ಲು ತಿರುಪತಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ಪುರಪ್ರವೇಶಕ್ಕೆ ನಗರದ ಗಡಿ ಭಾಗದಲ್ಲಿ ನಗರಸಭೆ ವತಿಯಿಂದ ಸೋಮವಾರ ಸ್ವಾಗತ ಕೋರಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆ ನಡೆದು ಮೂರನೇ ದಿನಕ್ಕೆ ನಗರದ ಶಿವಾ ಲಯ ಬಳಿ ಪುರಪ್ರವೇಶ ಮಾಡಿದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿಯವರನ್ನು ಸ್ವಾಗತಿಸಿ ಮಾತನಾಡಿದ ನಗರಸಭೆ ಪೌರಾ ಯುಕ್ತ ಪರಮೇಶ್ವರಪ್ಪ, ಇಲ್ಲಿನ ಪ್ರಸಿದ್ಧ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ ರಾಜ್ಯದಲ್ಲೇ ಮನೆ ಮಾತಾಗಿದೆ ಎಂದರು.

ಶ್ರೀಲಕ್ಷ್ಮೀವೆಂಕಟೇಶ್ವರಸ್ವಾಮಿ ಅವರನ್ನು ನೂರಾರು ವರ್ಷಗಳಿಂದ ಮನೆ ದೇವರ ನ್ನಾಗಿ ಪೂಜಿಸುತ್ತಿದ್ದ ಅನೇಕ ಕುಟುಂಬ ಗಳು ಬೇರೆಡೆ ನೆಲೆಸಿದ್ದರೂ, ಇಂದಿಗೂ ಜಾತ್ರೆಯಲ್ಲಿ ಕುಟುಂಬ ಸಮೇತರಾಗಿ ಭಾಗ ವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ತಾಲೂಕಿನ ಪ್ರಸಿದ್ಧ ಕ್ಷೇತ್ರ ಅಮರಗಿರಿ ಮಾಲೇಕಲ್ಲು ತಿರುಪತಿ ದೇವರನ್ನು ನಗರಕ್ಕೆ ಬರಮಾಡಿಕೊಂಡು ನಮ್ಮ ನಗರಸಭೆ ಆಡಳಿತ ಮತ್ತು ಚುನಾಯಿತ ಸದಸ್ಯರು ಪೂಜೆ ಸಲ್ಲಿಸಿದ್ದೇವೆ. ತಾಲೂಕಿನಲ್ಲಿ ಬರಗಾಲ ತಾಂಡವಾಡುತ್ತಿದ್ದು, ಭಗವಂತ ಕಾಲ ಕಾಲಕ್ಕೆ ಮಳೆ ನೀಡುವ ಮೂಲಕ ರೈತರ ಮತ್ತು ನಾಗರಿಕರ ಸಂಕಷ್ಟ ದೂರ ಮಾಡಲಿ ಎಂದರು.

ಉತ್ಸವ ಸಮಿತಿ ಸದಸ್ಯ ಟಿ.ಆರ್.ನಾಗ ರಾಜ್ ಮಾತನಾಡಿ, ಪ್ರಾಚೀನ ಕಾಲ ದಿಂದಲೂ ನಗರದ ಜನತೆ ಶ್ರೀಯವರ ಉತ್ಸವಾದಿಗಳಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀಕ್ಷೇತ್ರ ದಿಂದ ಹೊರಟ ದೇವರು ಮಾರ್ಗ ಮಧ್ಯ ಮುರುಗೇಂದ್ರಪ್ಪ ತೋಟದಲ್ಲಿ ನೀಡಲಾ ಗುವ ಪೂಜೆ ಧಾರ್ಮಿಕ ವಿಧಿ ವಿಧಾನ ಗಳನ್ನು ಸ್ವೀಕರಿಸಿ ಪುರಪ್ರವೇಶ ಮಾಡಿದೆ. ನಗರದ ಆಯ್ದ ರಸ್ತೆಗಳಲ್ಲಿ ಶ್ರೀಗಳ ಮೆರವ ಣಿಗೆ ಸಂಚರಿಸಿ ಗಣಪತಿ ಪೆಂಡಾಲ್‍ನಲ್ಲಿ ಕೆಲಕಾಲ ಪ್ರತಿಷ್ಠಾಪಿಸಲಾಗುವುದು. ನಗರದ ಭಕ್ತರು ಶ್ರೀಯವರ ಪೂಜೆಯಲ್ಲಿ ಭಾಗ ವಹಿಸಲಿದ್ದಾರೆ. ನಂತರ ಶ್ರೀಯವರನ್ನು ಪುನಃ ಶ್ರೀಕ್ಷೇತ್ರಕ್ಕೆ ಕರೆತಂದು ರಾತ್ರಿ ಸಿಂಹ ವಾಹನೋತ್ಸವ, ಧ್ವಜಾವರೋಹಣ, ಮಹಾ ಪೂರ್ಣಾವತಿ, ರಕ್ಷಾಬಂಧನ ವಿಸರ್ಜನೆ ಮತ್ತು ಮೌನಬಲಿ ಧಾರ್ಮಿಕ ಕಾರ್ಯ ಗಳನ್ನು ನಡೆಸಲಾಗುವುದು ಎಂದರು.

ಮೆರವಣಿಗೆಯಲ್ಲಿ ನಗರಸಭೆ ವ್ಯವಸ್ಥಾ ಪಕ ಮಹಾತ್ಮ, ರಾಜಸ್ವ ಹೇಮಂತ್ ಕುಮಾರ್, ಗೋಪಿ, ರಾಜು, ಆರೋಗ್ಯ ನಿರೀಕ್ಷಕ ರಮೇಶ್, ರೇವಣ್ಣ ಸಿದ್ದಪ್ಪ, ಅನಿತಾ, ಪುಷ್ಪಲತಾ, ಅಗ್ಗುಂದ ಗ್ರಾಪಂ ಸದಸ್ಯ ಗೀರೀಶ್, ನಗರಸಭೆ ಮಾಜಿ ಅಧ್ಯಕ್ಷ ವಿದ್ಯಾ ಧರ್, ಸದಸ್ಯರಾದ ರಾಜು, ಗಿರೀಶ್, ಮನೋಜ್ ಕುಮಾರ್, ಮಲ್ಲಿಕಾರ್ಜುನ್, ಸಿಖಂಧರ್, ಟಿಪ್ಪು, ಉತ್ಸವ ಸಮಿತಿ ಸದಸ್ಯರಾದ ರಂಗ ರಾಜು, ಎನ್.ಸಿ ಗೋವಿಂದರಾಜು, ವಿಶ್ವ ನಾಥ್, ಚಂದ್ರು, ಸತೀಶ್, ಪರಮಶಿವ ಮೂರ್ತಿ, ಅರ್ಚಕರಾದ ರಾಮ್‍ಪ್ರಸಾದ್, ವರದರಾಜು, ಮುಖಂಡರಾದ ರಮೇಶ್ ನಾಯ್ಡು, ಪದ್ಮನಾಭ, ಶ್ರೀನಿಧಿ, ಶಿವನ್‍ರಾಜ್, ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

Translate »