ಗ್ರಾಪಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರತಿಭಟನೆ
ಹಾಸನ

ಗ್ರಾಪಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರತಿಭಟನೆ

July 16, 2019

ಬೇಲೂರು, ಜು.15- ತಾಲೂಕಿನ ಗ್ರಾಪಂ ಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯ ಕರ್ತರು ಸೋಮವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಪಂ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಬೇಲೂರು ತಾಪಂ ಇಓ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ನರೇಗಾ ಹಾಗೂ ಇತರೆ ಅಭಿವೃದ್ಧಿ ಕಾಮ ಗಾರಿಗಳಲ್ಲಿ ಲಕ್ಷಾಂತರ ರೂ. ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ, ತಾಲೂ ಕಿನ 37 ಗ್ರಾಪಂಗಳಲ್ಲಿ ಯಾವುದೇ ಅಭಿ ವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪಿಡಿಓ ಮತ್ತು ತಾಪಂ ಇಓ ಮತ್ತು ಜನಪ್ರತಿ ನಿಧಿಗಳು ಹಣದ ಹಿಂದೆ ಹೋಗುತ್ತಿದ್ದು, ಎಲ್ಲ ಕಾಮಗಾರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶ ದಲ್ಲಿ ನಡೆದಾಡಲು ಉತ್ತಮ ರಸ್ತೆ, ಕುಡಿ ಯುವ ನೀರು ಇಲ್ಲದಂತಾಗಿದೆ. ಒಂದು ಮನೆಗೆ ದಿನಕ್ಕೆ ಐದು ಕೊಡ ನೀರು ಕೊಡ ಲಾಗುತ್ತಿದ್ದು ತುಂಬಿದ ಕುಟುಂಬವಿರುವ ಮನೆಯವರು ಹನಿ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದಾರೆ ಎಂದು ಕಿಡಿಕಾರಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸ್ವಾಮಿಗೌಡ ಮಾತನಾಡಿ, ತಾಲೂಕು ಆಡಳಿತ ರೈತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಶಾಸಕರು ಮೌನವಾಗಿದ್ದಾರೆ. ನರೇಗಾ ಯೋಜನೆ ಯಲ್ಲಿ ಪಿಡಿಓ ಹಾಗೂ ತಾಪಂ ಇಓ ಹಾಗೂ ಜನಪ್ರತಿನಿಧಿಗಳು ಹಣ ಲೂಟಿ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಸರಿಯಾಗಿ ಕೆರೆ ಹೂಳು ಎತ್ತಿಲ್ಲ. ಕೆರೆ ಏರಿಯನ್ನು ಕಟ್ಟಿಲ್ಲ ಜಲ್ಲಿ ರಸ್ತೆಗೆ ಜಲ್ಲಿ ಹಾಕಿಲ್ಲ. ತಾಲೂಕಿ ನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಬಗ್ಗೆ 2 ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನ ವಾಗಿಲ್ಲ. ತಾಲೂಕು ಆಡಳಿತ ನಮ್ಮ ಮನವಿಯನ್ನು ಪರಿಗಣಿಸಬೇಕು. ಇಲ್ಲದಿ ದ್ದರೆ ಉಗ್ರ ಚಳವಳಿ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಕುಮಾರ್ ಬಸವೇಗೌಡ, ಪದ್ಮಪ್ರಭು, ಬಸವರಾಜು, ಪುಟ್ಟೇಗೌಡ, ಬಸವೇಗೌಡ, ಇತರರಿದ್ದರು.

Translate »