ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆಯಲ್ಲಿ ಅಕ್ರಮ
ಹಾಸನ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆಯಲ್ಲಿ ಅಕ್ರಮ

July 16, 2019

ಮೂವರು ಸಿಇಓಗಳ ಅಮಾನತು: ಹೆಚ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು
ಹಾಸನ, ಜು.15- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಸಾಲ ವಿತರಿಸುವಾಗ ಅಕ್ರಮವೆಸಗಿದÀ ಮೂವರು ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳನ್ನು ಅಮಾನತು ಮಾಡಲಾ ಗಿದೆ ಎಂದು ಹೆಚ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ತಿಳಿಸಿದರು.

ನಗರದ ಹೆಚ್‍ಡಿಸಿಸಿ ಬ್ಯಾಂಕ್ ಸಭಾಂ ಗಣದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಸಾಲಮನ್ನಾ ಆದ ರೈತರಿಗೆ ಸಾಲ ವಿತರಿಸುವಾಗ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಕೋರಮಂಗಲ, ಹಳೆಕೊಪ್ಪಲು ಹಾಗೂ ಹಿರೇಕಡಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳನ್ನು ಅಮಾನತುಪಡಿಸಲಾಗಿದೆ ಎಂದರು.

ರೈತರ ಸಾಲ ಮನ್ನಾ ಹಣದಲ್ಲಿ ಯಾವುದೇ ಕಾರಣಕ್ಕೂ ಮೋಸವಾಗದಂತೆ ಹಲವು ಕ್ರಮ ಕೈಗೊಂಡಿದ್ದರೂ, ಜಿಲ್ಲೆಯ ಐದಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳಲ್ಲಿ ಅಕ್ರಮವಾಗಿರುವುದು ಮೇಲ್ನೋ ಟಕ್ಕೆ ಕಂಡು ಬಂದಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳಿಂದ ಮೋಸವಾಗಿದ್ದ ರೈತರಿಗೆ ಅವರ ಹಣ ಹಿಂದಿರುಗಿಸಲಾಗಿದ್ದು, ಈ ರೀತಿಯ ಮೋಸ ಮತ್ತೆ ಮರುಕಳಿಸದಂತೆ ನಿಗಾ ವಹಿಸಿ ಎಟಿಎಂ ಕಾರ್ಡ್‍ಗಳನ್ನು ನೀಡ ಲಾಗಿದೆ ಎಂದರು.

ಜಿಲ್ಲೆಯ 197 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಸಾಲ ಮನ್ನಾವಾಗಿದ್ದು, ಜಿಲ್ಲೆಯ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಲ್ಲಿ ಮಾತ್ರ ಈ ರೀತಿ ಮೋಸವಾಗಿ ರುವುದು ಕಂಡು ಬಂದಿದೆ. ಆದರೂ ಹೆಚ್‍ಡಿಸಿಸಿ ಬ್ಯಾಂಕ್‍ನಿಂದ ತನಿಖೆ ನಡೆ ಸಲು ಈಗಾಗಲೇ ಸಮಿತಿ ರಚನೆ ಮಾಡಿ ಪರಿಶೀಲಿಸಲಾಗುತ್ತಿದೆ. ಇನ್ನು ಮುಂದೆ ಜಿಲ್ಲೆಯ ಡೈರಿಗಳ ಮೇಲೆ ಎಲ್ಲಾ ಗ್ರಾಮ ಗಳಲ್ಲಿ ಸಾಲಮನ್ನಾ ವಿವರವನ್ನು ಪ್ರಕಟಿಸ ಲಾಗುವುದು. ಮತ್ತು ಎಲ್ಲಾ ರೈತರಿಗೆ ಪಾಸ್ ಬುಕ್‍ಗಳನ್ನು ಸಹ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದರು. ಬ್ಯಾಂಕ್‍ನ ಕ್ಷೇತ್ರಾಧಿಕಾರಿಗಳಿಗೆ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಪರಿವೀಕ್ಷಣೆ ನಡೆಸಿ ಶೀಘ್ರದಲ್ಲೇ ವರದಿ ನೀಡುವಂ ತೆಯೂ ಸೂಚನೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ನಿರ್ದೇಶಕ ರಾದ ಬಿದರೆಕೆರೆ ಜಯರಾಂ, ಹೆಚ್‍ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಇತರರಿದ್ದರು.

Translate »