ಕೃಷಿಯಲ್ಲಿ ನೀರಿನ ಅತಿಯಾದ ಅವಲಂಬನೆ ಕಡಿಮೆಗೊಳಿಸಲು
ಹಾಸನ

ಕೃಷಿಯಲ್ಲಿ ನೀರಿನ ಅತಿಯಾದ ಅವಲಂಬನೆ ಕಡಿಮೆಗೊಳಿಸಲು

July 16, 2019

ಹನಿ ನೀರಾವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ: ಜಿ.ಪ್ರಿಯಾಂಕ
ಹಾಸನ, ಜು.15- ಕೃಷಿ ಮತ್ತು ತೋಟ ಗಾರಿಕೆ ಚಟುವಟಿಕೆಗಳಲ್ಲಿ ನೀರಿನ ಮೇಲಿನ ಅತಿಯಾದ ಅವಲಂಬನೆ ಕಡಿಮೆಗೊಳಿ ಸುವ ನಿಟ್ಟಿನಲ್ಲಿ ಆಧುನಿಕ ಹನಿ ನೀರಾವರಿ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ನವದೆಹಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಹಾಯಕ ಕಾರ್ಯ ದರ್ಶಿ ಜಿ.ಪ್ರಿಯಾಂಕ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮ ವಾರ ಅರಸೀಕೆರೆ ಮತ್ತು ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ಜಲಶಕ್ತಿ ಅಭಿ ಯಾನ ಚುರುಕುಗೊಳಿಸುವ ನಿಟ್ಟಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹನಿ ನೀರಾವರಿ ಮತ್ತು ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನ ಹೆಚ್ಚಿಸ ಬೇಕು. ಇದಕ್ಕಾಗಿ ನೀಡಲಾಗುತ್ತಿರುವ ಸಬ್ಸಿಡಿ ಸೌಲಭ್ಯಗಳು ವಿಸ್ತರಣೆಯಾಗಬೇಕು. ಅಲ್ಲದೇ ಇವುಗಳ ಬಳಕೆಯ ಲಾಭದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಹಲವು ಕಡೆ ರೈತರಿಗೆ ಹನಿ ನೀರಾವರಿ ಅನುಕೂಲಗಳ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ನೀಡುವ ಕೆಲಸವಾಗಬೇಕು ಎಂದರು.

ಸಂಬಂಧಪಟ್ಟ ಇಲಾಖೆಗಳು ಜಲಶಕ್ತಿ ಅಭಿಯಾನದಡಿ ನೀರಿನ ಸಂರಕ್ಷಣೆ, ಮಿತ ಬಳಕೆ ಹಾಗೂ ಸಂಸ್ಕರಣೆ ಬಗ್ಗೆ ಕಿರು ಪುಸ್ತಕ ಗಳನ್ನು ರಚಿಸುವÀ ಮೂಲಕ ರೈತರಲ್ಲಿ ಅರಿವು ಮೂಡಿಸಬಹುದು ಎಂದರು.

ಗ್ರಾಮೀಣ ಮಟ್ಟದಲ್ಲಿ ಕೆರೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಬಹುದಾಗಿದೆ. ಅಲ್ಲದೇ ಜನರಿಗೆ ನೀರಿನ ಮಹತ್ವ ತಿಳಿಸುವು ದರೊಂದಿಗೆ ಜಲ ಸಂರಕ್ಷಣೆಗೆ ಮುಂದಾಗು ವಂತೆ ಮಾಡಬಹುದು. ಕೆರೆಗಳ ಪುನ ಶ್ಚೇತನ, ಚೆಕ್ ಡ್ಯಾಂಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಪ್ರಭಾರ ಸಿಇಓ ಎಂ.ಎಲ್.ವೈಶಾಲಿ ಮಾತ ನಾಡಿ, ಅರಸೀಕೆರೆ ಮತ್ತು ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ರೈತರು ಹಲವು ರೀತಿಯ ಸಮಸ್ಯೆ ಎದು ರಿಸುತ್ತಿದ್ದಾರೆ. ಹಾಗಾಗಿ ನೀರಿನ ಸದ್ಬಳಕೆಯ ಬಗ್ಗೆ ಅರಿವು ಕಾರ್ಯ ತೀವ್ರಗೊಳಿಸ ಬೇಕು. ಇದರಲ್ಲಿ ಸಾರ್ವಜನಿಕರ ಸಹ ಭಾಗಿತ್ವ ಪ್ರಮುಖ ಎಂದರು.

ಮಳೆನೀರು ಕೊಯ್ಲು ಹಾಗೂ ಚೆಕ್ ಡ್ಯಾಂಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸ ಬೇಕಿದೆ. ಈಗಾಗಲೇ ಜಲ ಸಂರಕ್ಷಣೆಗಾಗಿ ಹತ್ತಾರು ಕ್ರಮಗಳನ್ನು ಅನುಸರಿಸಲಾಗು ತ್ತಿದೆ. ಕೆರೆ ಕಟ್ಟೆಗಳ ಅಭಿವೃದ್ಧಿ ಹೊಸ ಚೆಕ್ ಡ್ಯಾಂ ನಿರ್ಮಾಣ ನಡೆಯುತ್ತಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಮಧು ಸೂದನ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತ ನಾಡಿ ಹನಿ ನೀರಾವರಿ, ಸಣ್ಣ ನೀರಾವರಿ ಅನುಕೂಲಗಳು ಇಲಾಖೆಗಳಲ್ಲಿ ಲಭ್ಯವಿ ರುವ ಸೌಲಭ್ಯಗಳ ಯೋಜನೆಗಳ ಬಗ್ಗೆ ವಿವರಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಆನಂದ್, ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ನಿರ್ಮಾಣಗೊಂಡಿರುವ ಬಹು ಕಮಾನು ಅಣೆಕಟ್ಟೆಗಳು, ವೇದಾ ವತಿ ನದಿ ಪುನಶ್ಚೇತನ ಯೋಜನೆ, ನಿಷ್ಕ್ರೀಯ ಕೊಳವೆ ಬಾವಿಗೆ ಜಲ ಮರುಪೂರಣ ಕ್ರಮಗಳ ಬಗ್ಗೆ ವಿವರಿಸಿದರು.

ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಜಾರಿಗೊಳಿಸ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರ ಮನೆಗಳಿಗೆ ಈ ಯೋಜನೆ ಅನುಷ್ಠಾನ ಕಡ್ಡಾಯವಾಗಲಿದೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಸುಧಾ ಅವರು ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ನೀರಿನ ಪರಿಸ್ಥಿತಿಯನ್ನು ವಿವರಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »