ಅರಸೀಕೆರೆ, ಜು.1- ಸರ್ಕಾರಿ ಸವಲತ್ತು ಗಳನ್ನು ಅರ್ಹ ಫಲಾನುಭವಿಗಳಿಗೆ ತಲು ಪಿಸಲು ವಿಫಲರಾಗುವ ಅಧಿಕಾರಿಗಳನ್ನು ನೀರು ನೆರಳಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲಾ ಅಧಿಕಾರಿಗಳೂ ಸಹಕಾರ ನೀಡ ಬೇಕು. ಒಂದು ವೇಳೆ ಅಭಿವೃದ್ಧಿ ವಿಚಾರ ದಲ್ಲಿ ರಾಜಕಾರಣ ಮಾಡಿದರೆ ತಕ್ಕ ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧಿ ಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿಯಲ್ಲಿ ಸೋಮ ವಾರ ಆಯೋಜಿಸಿದ್ದ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಗ್ರಾಮ ವಾಸ್ತವ್ಯ ಹೂಡಲು ಸಾಧ್ಯವಿಲ್ಲದಿರುವು ದರಿಂದ ಆಯಾ ಕ್ಷೇತ್ರಗಳ ಶಾಸಕರಿಗೆ ಜವಾ ಬ್ದಾರಿ ನೀಡಲು ಕೋರಲಾಗಿತ್ತು. ಹಾಗಾ ಗಿಯೇ ತಾಲೂಕು ಕೇಂದ್ರಗಳಲ್ಲಿ ಜನ ಸಂಪರ್ಕ ಸಭೆಗಳನ್ನು ಆಯೋಜಿಸಲಾಗು ತ್ತಿದೆ. ಕ್ಷೇತ್ರದ ಜನತೆ ನೂರಾರು ಸಮಸ್ಯೆ ಗಳನ್ನು ನಮ್ಮ ಮನೆ ಬಾಗಿಲಿಗೆ ತರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆದರೆ ಅಧಿಕಾರಿ ವರ್ಗದ ಮೂಲಕ ಅವರ ಕೆಲಸ ಗಳು ಆಗಬೇಕಾಗಿರುವುದರಿಂದ ಜನರ ಸಮಸ್ಯೆ ಗಳಿಗೆ ಇಂತಹ ಸಾರ್ವಜನಿಕ ಸಭೆಗಳಲ್ಲಿ ಪರಿ ಹಾರ ಒದಗಿಸಬಹುದಾಗಿರುತ್ತದೆ ಎಂದರು.
ಸ್ವಾತಂತ್ರ್ಯ ಪೂರ್ವದಿಂದಲೂ ಜನತೆ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ಪರಿಹಾರ ಮಾತ್ರ ಶೂನ್ಯವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳು ಆಗುವುದು ತಡÀವಾಗುತ್ತಿದೆ. ಇದ ನ್ನೆಲ್ಲ ಶಾಸಕರಷ್ಟೇ ಬಗೆಹರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕಾರ ನೀಡದ ಹಾಗೂ ಸಾರ್ವಜನಿಕ ವಲಯ ದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ವರ್ಗಾವಣೆ ಮೂಲಕವೇ ಉತ್ತರವನ್ನು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮ್ಮ ಆಡಳಿತದ ವಿರುದ್ಧ ಜನರು ತಿರುಗಿ ಬೀಳುವ ಮೊದಲೇ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು. ಸರ್ಕಾರಿ ಕಚೇರಿಗಳು ಎಂದೆಂ ದಿಗೂ ಜನ ಸ್ನೇಹಿ ಕೇಂದ್ರಗಳಾಗಿರಬೇಕು. ಜನಪ್ರತಿನಿಧಿ ಮತ್ತು ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮೊದಲು ಅರಿಯಬೇಕು. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮತ್ತು ಅಂಗವಿಕಲರ ವೇತನ ಸೇರಿ ದಂತೆ ಸಾಮಾಜಿಕ ಭದ್ರತಾ ಯೋಜನೆ ಗಳನ್ನು ಪಡೆಯಲು ಫಲಾನುಭವಿಗಳು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಪ್ರಮುಖ ವಾಗಿ ಕಂದಾಯ ಇಲಾಖೆ, ಸರ್ವೆ ಇಲಾಖೆ, ವಿದ್ಯುತ್ ಪ್ರಸರಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮೇಲೆಯೇ ದೂರುಗಳು ಹೆಚ್ಚಾಗಿ ಬಂದಿವೆ. ಈ ಸಂಬಂಧ ಇಂದಿನ ಸಭೆಯಲ್ಲಿ ಉಪಸ್ಥಿತರಿರುವ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಉತ್ತರ ನೀಡಬೇಕು ಎಂದು ತಾಕೀತು ಮಾಡಿದರು.
ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಸೇರಿದಂತೆ ಬಾಕಿಯಾಗಿರುವ ಕೆಲಸಗಳನ್ನು ಯಾವಾಗ ಮುಗಿಸುತ್ತೀರಿ? ಎಂದು ಪ್ರಭಾರಿ ತಹಸಿಲ್ದಾರ್ ಪಾಲಾಕ್ಷಯ್ಯ ಅವರನ್ನು ಶಾಸಕರು ಪ್ರಶ್ನಿಸಿದರು. ಜು.15 ರೊಳಗೆ ಎಲ್ಲ ಫಲಾನುಭವಿಗಳಿಗೂ ಮಂಜೂ ರಾತಿ ಪತ್ರ ನೀಡಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದೇ ವೇಳೆಗೆ ಬಗೆಹರಿಸಿಕೊಡಲಾಗುವುದು ಎಂದು ಪಾಲಾಕ್ಷಯ್ಯ ಭರವಸೆ ನೀಡಿದರು.
ತಾಪಂ ಇಓ ಕೃಷ್ಣಮೂರ್ತಿ, ಪೌರಾಯುಕ್ತ ಪರಮೇಶ್ವರಪ್ಪ, ಶಿರಸ್ತೇದಾರ್ ಶಿವ ಶಂಕರ್, ತಾ.ಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಪ್ರೇಮ, ಜಿಪಂ ಸದಸ್ಯರಾದ ವತ್ಸಲ, ಪಟೇಲ್ ಶಿವಪ್ಪ, ಲೀಲಾ, ಮಾಡಾಳು ಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು, ಜನಪ್ರತಿನಿಧಿಗಳು ಸಭೆಯಲ್ಲಿದ್ದರು.
ಸಭೆಯಲ್ಲಿ ಹೆಚ್ಚಾಗಿ ಕೃಷಿ ಭೂಮಿ ಖಾತೆ ಬದಲಾವಣೆಯಲ್ಲಿ ವಿಳಂಬ, ಭಾಗ್ಯಲಕ್ಷ್ಮಿ ಬಾಂಡ್ ಲಭಿಸದಿರುವುದು, ಗಂಗಾ ಕಲ್ಯಾಣ ಯೋಜನೆ ಲಭ್ಯವಿರದಿರು ವುದು, ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಸಿಗದಿರು ವುದು, ನಿವೇಶನ ಮತ್ತು ಮನೆಗೆ ಬೇಡಿಕೆ ಕುರಿತೇ ಹೆಚ್ಚು ಅರ್ಜಿಗಳು ಬಂದಿದ್ದವು.