ಕೊಡಗು ಬಂದ್‍ಗೆ ವಿರಾಜಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಕೊಡಗು

ಕೊಡಗು ಬಂದ್‍ಗೆ ವಿರಾಜಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ

November 15, 2018

ವಿರಾಜಪೇಟೆ:  ಹಿಂದೂ ಸುರಕ್ಷಾ ವೇದಿಕೆ ವತಿಯಿಂದ ಸಂತೋಷ್ ತಮ್ಮಯ್ಯ ಅವರ ಬಂಧನ ಖಂಡಿಸಿ 1 ಗಂಟೆ ಕಾಲ ಕರೆ ನೀಡಿದ್ದ ಕೊಡಗು ಬಂದ್‍ಗೆ ವಿರಾಜಪೇಟೆಯಲ್ಲಿ ಕೆಲವೊಂದು ಅಂಗಡಿ ಮುಂಗ ಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು. ಬಂದ್ ಸಂದರ್ಭ ಹಿಂದೂ ಸಂಘಟನೆಗಳು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಸಾಮಾ ಜಿಕ ಜಾಲತಾಣದಲ್ಲಿ ಹಿಂದು ಸಮುದಾ ಯದ ವಿರುದ್ಧ ಧರ್ಮ ನಿಂದನೆ ಮಾಡಿ ರುವ ನಾಪೋಕ್ಲುವಿನ ಎಂ.ಆಸಿಫ್ ಎಂಬುವ ನನ್ನು ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸಂದರ್ಭ ಹಿಂದೂ ಜಾಗ ರಣ ವೇದಿಕೆಯ ಜಿಲ್ಲಾ ಅಧ್ಯಕ್ಷ ಮೇವಡ ಅಯ್ಯಣ ಅವರು ಮಾತನಾಡಿ, ನಿನ್ನೆ ಪತ್ರ ಕರ್ತ ಸಂತೋಷ್ ತಮ್ಮಯ್ಯನನ್ನು ಗೋಣಿ ಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲ ಯಕ್ಕೆ ಹಾಜರು ಪಡಿಸಿದ್ದರು. ಮುಸ್ಲಿಂ ಸಂಘ ಟನೆಗಳು ಪ್ರತಿಭಟನೆ ನಡೆಸಿರುವುದು. ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಎಂ.ಬಿ.ಚಂದ್ರನ್ ಮಾತ ನಾಡಿ, ನಾವು ಕೋಮುವಾದಿಗಳಲ್ಲ ಪೊಲೀ ಸರು ಹಿಂದೂಗಳನ್ನು ಮಾತ್ರ ಬಂಧಿಸು ತ್ತಾರೆ. ಮುಂದಿನ ಏಳು ದಿನದಲ್ಲಿ ಎಂ.ಆಸಿಫ್ ನನ್ನು ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಕಾಫಿ ಮಂಡಳಿಯ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣ ಪತಿ, ಜಿಲ್ಲಾ ಘಟಕದ ಉರ್ಮಿಳ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಸದಸ್ಯೆ ಸೀತಮ್ಮ, ಮುಖಂಡರಾದ ಕುಂಬೆ ಯಂಡ ಗಣೇಶ್, ಚೋಟು ಕಾವೇರಪ್ಪ, ಹಿಂದೂ ಸಂಘಟನೆಯ ಸುರೇಶ್, ದಿನೇಶ್ ರೈ, ವಿವೇಕ್ ರೈ ಹಾಗೂ ಹಿಂದೂ ಸಂಘ ಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು.

ಐಜಿ ಭೇಟಿ: ಹಿಂದೂ ಸುರಕ್ಷಾ ವೇದಿಕೆ ಕರೆದಿದ್ದ ಬಂದ್ ಹಿನ್ನೆಲೆಯಲ್ಲಿ ಮೈಸೂರು ದಕ್ಷಿಣ ವಲಯದ ಅರಕ್ಷಕ ಮಹಾ ನಿರೀ ಕ್ಷಕರಾದ ಕೆ.ವಿ.ಶರತ್ ಚಂದ್ರ ಅವರು ವಿರಾಜಪೇಟೆಗೆ ಭೇಟಿ ನೀಡಿ ಕಳೆದ ಟಿಪ್ಪು ಜಯಂತಿ ಹಾಗೂ ಮೂರು ದಿನಗಳಿಂದ ನಡೆದ ಪ್ರತಿಭಟನೆ ಮತ್ತು ಈ ಘಟನೆ ಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿ ಗಳನ್ನು ಡಿವೈಎಸ್‍ಪಿ ನಾಗಪ್ಪ ಅವರಿಂದ ಪಡೆದುಕೊಂಡರು. ನಂತರ ಮಾಧ್ಯಮ ದವರು ಶರತ್‍ಚಂದ್ರ ಅವರನ್ನು ಎಂ.ಆಸಿಫ್ ಬಗ್ಗೆ ಕ್ರಮ ಕೈಗೊಳ್ಳುವಿರ ಎಂದು ಪ್ರಶ್ನಿ ಸಿದಾಗ ಆಸಿಫ್ ದುಬೈನಲ್ಲಿದ್ದಾನೆ. ಆದರೂ ಆತನನ್ನು ಕೆಲವೇ ದಿನಗಳಲ್ಲಿ ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Translate »