ಮಡಿಕೇರಿ: ರಷ್ಯಾದ ಅತಿ ಎತ್ತರದ ಮೌಂಟ್ ಎಲ್‍ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬರುವ ಮೂಲಕ ಕೊಡಗಿನ ಯುವತಿಯೊಬ್ಬಳು ಸಾಧನೆಯ ಶಿಖರವನ್ನೇರಿ ಎಲ್ಲರ ಗಮನ ಸೆಳೆದಿದ್ದಾರೆ. ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ-ಪಾರ್ವತಿ ದಂಪತಿ ಪುತ್ರಿ ಭವಾನಿ ಎಂಬಾಕೆಯೇ ರಷ್ಯಾದ 5,642 ಮೀಟರ್ ಎತ್ತರದ ಮೌಂಟ್ ಎಲ್‍ಬ್ರಸ್ ಪರ್ವತವನ್ನೇರಿ ಬಂದ ಪರ್ವತಾರೋಹಿಯಾಗಿದ್ದಾರೆ.
ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವ ತಾರೋಹಿಗಳ ನಡುವೆ ಭಾರತವನ್ನು ಭವಾನಿ ಪ್ರತಿನಿಧಿಸಿದ್ದರು. ನಾಲ್ವರು ಪರ್ವತಾರೋಹಿ ಗಳಿಗೆ ರಷ್ಯಾದಲ್ಲಿ ಮೂರು ದಿನಗಳ ಕಾಲ ತರ ಬೇತಿಯನ್ನು ನೀಡಲಾಗಿತ್ತು. ಎಲ್‍ಬ್ರಸ್ ಪರ್ವತವು ರಷ್ಯಾದ ಅತಿ ಎತ್ತರದ ಪರ್ವತವಾಗಿದ್ದು, ಯೂರೋಪ್ ದೇಶಗಳ ಪೈಕಿ ಇದು ಅತಿ ಎತ್ತರದ 10ನೇ ಪರ್ವತವಾಗಿದೆ. ಆದರೆ ಹಿಮಚ್ಚಾದಿತ ಈ ಪರ್ವತವನ್ನು ನಿರಂತರವಾಗಿ ಏರಿ ಸುಮಾರು 8 ಗಂಟೆಗಳಲ್ಲಿ ತುತ್ತ ತುದಿ ಯಲ್ಲಿ ಭಾರತದ ಬಾವುಟವನ್ನು ಹಾರಿಸುವಲ್ಲಿ ಭವಾನಿ ಯಶಸ್ವಿಯಾಗಿದ್ದು, ಪರ್ವತವೇರಿದ ಭಾರತದ ವೇಗದ ಹುಡುಗಿ ಎಂಬ ಪ್ರಶಂ ಸೆಗೂ ಪಾತ್ರರಾಗಿದ್ದಾರೆ.
ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿ ಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದ ಲಾಕೆ ಭವಾನಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮೂವರು ಪುರುಷ ಪರ್ವತಾರೋಹಿಗಳ ನಡುವೆ ಅವರಿಗೆ ಸರಿಸಮಾನವಾಗಿ ಮತ್ತು ಅವರಿಗಿಂತ ಮೊದಲೇ ಪರ್ವತದ ತುತ್ತತುದಿಯನ್ನು ತಲು ಪಿದ್ದು ಕೂಡ ಭವಾನಿಯ ಸಾಧನೆಯಾಗಿದೆ.
ಅಕ್ಟೋಬರ್ 18ರಂದು ನಡುರಾತ್ರಿ ಪರ್ವ ತಾರೋಹಣ ಆರಂಭಿಸಿದ್ದು, ಕೊರೆಯುವ ಚಳಿ, ಹಿಮದ ಮೇಲೆಯೇ ನಿರಂತರವಾಗಿ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ ನಾಲ್ವರ ತಂಡ ಮೌಂಟ್ ಎಲ್‍ಬ್ರಸ್ ತುತ್ತ ತುದಿ ತಲುಪುವ ಮೂಲಕ ಸಾಧನೆಯ ಶಿಖರವೇರಿದ ಸಂಭ್ರ ಮದಲ್ಲಿ ತೇಲಿದರು.
ಭವಾನಿ ಅವರಿಗೆ ಮೊದಲಿನಿಂದಲೂ ಪರ್ವ ತಾರೋಹಣದಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಅದರಲ್ಲೇ ಏನಾದರೊಂದು ಸಾಧಿಸಬೇಕು ಎಂಬ ಛಲವೂ ಇದೆ. ಮುಂದಿನ ದಿನಗಳಲ್ಲಿ ವಿಶ್ವದ ಅತಿ ಎತ್ತರ ವಾದ ಮೌಂಟ್ ಎವರೆಸ್ಟ್‍ನ್ನೇರುವ ಹಂಬಲವೂ ಇದೆ. ಆದರೆ ಅದು ಅಷ್ಟು ಸುಲಭವಲ್ಲ ಅದಕ್ಕೆ ಪೂರ್ವ ತಯಾರಿ, ತರಬೇತಿ, ಜತೆಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯತೆಯೂ ಇದೆ. ಸರ್ಕಾರ, ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಮೌಂಟ್ ಎವರೆಸ್ಟ್ ಏರುವುದಾಗಿ ಭವಾನಿ ಹೇಳುತ್ತಾರೆ. ಈಗಾಗಲೇ ಉತ್ತರ ಭಾರತದ ಡಾರ್ಜಲಿಂಗ್‍ನಲ್ಲಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿ ಗಮನಸೆಳೆದಿದ್ದಾರೆ.
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಗಾಳಿ ಬೀಡುವಿನ ಜವಾಹರ ನವೋದಯ ವಿದ್ಯಾ ಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಸೆಂಟ್ ಅ್ಯಗ್ನೇಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಇದೀಗ ಡಾರ್ಜಲಿಂಗ್‍ನ ಹಿಮಾಲಯ ಮೌಂಟೇ ನಿಯರಿಂಗ್ ಇನ್ಸಿಟ್ಯೂಟ್‍ನಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ರಕ್ಷಣಾ ಕ್ಷೇತ್ರ, ಸಾಹಸ ಕ್ಷೇತ್ರಗಳತ್ತ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು, ಪ್ರೌಢಶಾಲೆಯಿಂದಲೇ ಎನ್‍ಸಿಸಿ ಸೇರಿ ಕಾಲೇಜಿನಲ್ಲೂ ಮುಂದುವರೆಸಿ ವಿವಿಧ ಕ್ಯಾಂಪ್ ಗಳಲ್ಲಿ ಭಾಗವಹಿಸಿ ತರಬೆÉೀತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್‍ನಲ್ಲಿ ನಡೆದ ಗಣರಾಜ್ಯೋ ತ್ಸವದ ಪೆರೇಡ್‍ನಲ್ಲಿ ಭಾಗವಹಿಸಿದ್ದರು.
ಇನ್ನು ಜೋದ್‍ಫುರ್‍ನಲ್ಲಿ ನಡೆದ ವಾಯು ದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾ ಮಯ್ಯ, ಎನ್‍ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್‍ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ರುವ ಭವಾನಿ ಅವರು, ಪ್ರಾಥಮಿಕ ತರ ಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್‍ಟ್ಯೂಟ್ ಆಫ್ ಮೌಂಟೇ ನರಿಂಗ್ ಆಲೈಡ್ ಸ್ಪೋಟ್ರ್ಸ್(ಎಬಿವಿಐ ಎಂಎಎಸ್) ಪಡೆದಿದ್ದಾರೆ. ಆ ನಂತರ ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್‍ನ ಹಿಮಾಲಯ ಮೌಂಟೇ ನಿಯರಿಂಗ್ ಇನ್ಸಿಟ್ಯೂಟ್(ಹೆಚ್‍ಎಂಐ) ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ಸಿ ಟ್ಯೂಟ್‍ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವ ತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿ ಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿ ದ್ದಾರೆ. ಈಗಾಗಲೇ ಉತ್ತರಾಖಂಡ್‍ನ ರುಡು ಗೈರ್, ಮನಾಲಿಯ ಫ್ರೆಂಡ್‍ಶಿಪ್, ಸಿಕ್ಕಿಮ್‍ನ ರೆನಾಕ್, ಲೇಹ್‍ನ ಸ್ಟಾಕ್ ಕಂಗ್ರಿಯಲ್ಲಿ ಮಂಜು ಗಡ್ಡೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿದ್ದು ಈಜು, ಕುದುರೆ ಸವಾರಿ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿ ಸಿದ ಹಲವು ತರಬೇತಿಗಳನ್ನು ಪಡೆದಿದ್ದಾರೆ.