ಬೆಂಗಳೂರಲ್ಲಿ ಸಭೆ ನಡೆಸಿದ ಶೋಧ ಸಮಿತಿ
ಮೈಸೂರು

ಬೆಂಗಳೂರಲ್ಲಿ ಸಭೆ ನಡೆಸಿದ ಶೋಧ ಸಮಿತಿ

November 15, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿಯು ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಪ್ರೊ. ಕೆ.ನಾರಾಯಣಗೌಡರ ನೇತೃತ್ವದ ಶೋಧನಾ ಸಮಿತಿಯ ಸದಸ್ಯರಾದ ಪ್ರೊ. ಬಿ.ಸಿ. ಚಪ್ಪರ್‍ವಾಲ್, ಪ್ರೊ. ಎಂ.ಜಗದೀಶ್‍ಕುಮಾರ್, ಪ್ರೊ. ಎಸ್.ಚಂದ್ರಶೇಖರ್ ಅವರು ಮಂಗಳ ವಾರ ಬೆಂಗಳೂರಿನ ಬಹುಮಹಡಿ ಗಳ ಕಟ್ಟಡದ ಉನ್ನತ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿದರು.

ಕುಲಪತಿ ಸ್ಥಾನಕ್ಕೆ ಒಟ್ಟು 82 ಮಂದಿ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದು, ಆ ಪೈಕಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಆರ್.ರಾಜಣ್ಣ, ಪ್ರೊ. ಸಿ.ಬಸವರಾಜು, ಪ್ರೊ. ರಾಜಶೇಖರ್, ಪ್ರೊ. ಹೇಮಂತ್‍ಕುಮಾರ್, ಪ್ರೊ. ಮಿಡತಲಾರಾಣಿ ಅವರುಗಳ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಶೋಧನಾ ಸಮಿತಿಯು ಮೂವರು ಪ್ರಾಧ್ಯಾಪಕರ ಹೆಸರು ಅಂತಿಮಗೊಳಿಸಿದ್ದು, ಶೀಘ್ರವೇ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ನಂತರ ಸರ್ಕಾರವು ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಿದೆ. ರಾಜ್ಯಪಾಲರು ಅಂತಿಮವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಗಳ ನೇಮಕ ಮಾಡಿ ಆದೇಶ ಹೊರಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

Translate »