ಮೈಸೂರು: ಮೈಸೂರಿನ ಕುವೆಂಪುನಗರದ ಶ್ರೀ ಕಾವೇರಿ ಎಜುಕೇಷನಲ್ ಇನ್ಸ್‍ಟಿಟ್ಯೂಷನ್‍ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ನೆಲ್ಲೀರಾ ವಿಸ್ಮಿತಾ ಬೋಜಮ್ಮ ಅವರು ಬೆಂಗಳೂರಿನಲ್ಲಿ 2019ರ ಗಣರಾಜ್ಯೋತ್ಸವ ದಿನಾಚರಣೆ ಪೆರೇಡ್ ಗಾಗಿ ನಡೆದ ಕರ್ನಾಟಕ-ಗೋವಾ ನಿರ್ದೇ ಶನಾಲಯದ ಅಂತರ- ಎನ್‍ಸಿಸಿ ಗ್ರೂಪ್ ಸ್ಪರ್ಧೆಯ ಆಯ್ಕೆ ಶಿಬಿರದಲ್ಲಿ ಅತ್ಯುತ್ತಮ ಕೆಡೆಟ್ ಚಿನ್ನದ ಪದಕ ಪಡೆದಿದ್ದಾರೆ.
ವಿಸ್ಮಿತಾ ಅವರು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಪ್ಲೆಟೂನ್ ಆಧಾರಿತ 3 ಕೆಎಆರ್ ಬಾಲಕಿಯರ ಬೆಟಾಲಿಯನ್ ಕೆಡೆಟ್ ಆಗಿದ್ದಾರೆ. ಅವರು ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವಾಗ 2016ರಲ್ಲಿ ರಿಪಬ್ಲಿಕ್ ಡೇ ಪೆರೇಡ್‍ನಲ್ಲಿ ಭಾಗವಹಿಸಿದ್ದರು. ಇದು ಅವರಿಗೆ ದೊರೆದ ಎರಡನೇ ಅಪರೂಪದ ಅವಕಾಶವಿದು.
ವಿಸ್ಮಿತಾ ಬೋಜಮ್ಮ ಅವರು ಮೈಸೂರಿನ ಆಲನಹಳ್ಳಿ ನಿವಾಸಿ ನೆಲ್ಲೀರಾ ಸುಭಾಷ್ ಸೋಮಣ್ಣ ಮತ್ತು ಧನು ದಮಯಂತಿ (ಬೊಳಿಯಾಡೀರಾ) ದಂಪತಿ ಪುತ್ರಿ. ಸೋಮಣ್ಣ ಅವರು ಪ್ಯಾರಾ ಮಿಲಿಟರಿ ಫೋರ್ಸ್ (ಸಿಐಎಸ್‍ಎಫ್)ನಿಂದ ನಿವೃತ್ತರಾಗಿದ್ದು, ಧಮಯಂತಿ ಅವರು ಸಿದ್ದಾರ್ಥನಗರದಲ್ಲಿ ಬೋಟಿಕ್ ಅನ್ನು ನಡೆಸುತ್ತಿದ್ದಾರೆ.