ಗೋಣಿಕೊಪ್ಪಲು: ಆಕ್ಷೇ ಪಾರ್ಹ ಭಾಷಣ ಮಾಡಿದ ಆರೋಪ ದಿಂದ ಬಂಧನವಾಗಿದ್ದ ಪತ್ರಕರ್ತ ಮಾಣಿ ಪಂಡ ಸಂತೋಷ್ ತಮ್ಮಯ್ಯ ಘಟನೆ ಖಂಡಿಸಿ ಹಾಗೂ ಕೊಡವರ ಜನಾಂ ಗೀಯ ನಿಂದನೆ ಮಾಡಿರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರ ಹಿಸಿ ಕರೆಯಲಾಗಿದ್ದ ಸ್ವಯಂಘೋಷಿತ ಬಂದ್ ಕರೆಗೆ ದಕ್ಷಿಣ ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಗೋಣಿಕೊಪ್ಪ, ಪೊನ್ನಂಪೇಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಬೆರಳೆಣಿಕೆ ಅಂಗಡಿಗಳಷ್ಟು ಮುಚ್ಚಲಾಗಿತ್ತು.
ವರ್ತಕರು ಬಂದ್ ಮಾಡಬೇಕೇ ಬೇಡವೇ ಗೊಂದಲದಿಂದ ನಿರ್ಧಾರ ತೆಗೆದುಕೊ ಳ್ಳಲು ಆಗಲಿಲ್ಲ. ಅಷ್ಟರೊಳಗೆ ಕರೆಯ ಲಾಗಿದ್ದ 1 ಗಂಟೆಯ ಅವಧಿ ಮುಗಿದು ನೀರಸವಾಯಿತು. ಪೊನ್ನಂಪೇಟೆಯಲ್ಲಿ ವರ್ತಕರು ಕೂಡ ಸ್ಪಂದನೆ ನೀಡಲಿಲ್ಲ. ಬಂದ್ ಬಗ್ಗೆ ಮಾಹಿತಿ ಕೊರತೆ ಕೂಡ ಹಿನ್ನಡೆಯಾಯಿತು ಎನ್ನಲಾಗಿದೆ.
ಬಾಳೆಲೆ, ಮಾಯಮುಡಿ, ಕೋಣನಕಟ್ಟೆ ಹಾಗೂ ಕಾನೂರು ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಟ್ಟದಲ್ಲಿ ಬಿಜೆಪಿ ವತಿಯಿಂದ ಮಾನವ ಸರಪಳಿ ರಚಿಸಿ ಬೆಂಬಲ ಸೂಚಿಸಿತು. ಬಿರು ನಾಣಿಯಲ್ಲಿ ಕೂಡ ಬಂದ್ ಯಶಸ್ವಿಯಾ ಯಿತು. ಟಿ. ಶೆಟ್ಟಿಗೇರಿಯಲ್ಲಿ ಪ್ರತಿಭಟಿಸಿ ಕ್ರಮಕ್ಕೆ ಆಗ್ರಹಿಸಿದರು. ಪಾಲಿಬೆಟ್ಟ, ಅಮ್ಮತ್ತಿ, ತಿತಿಮತಿ ವ್ಯಾಪ್ತಿಯಲ್ಲಿ ನೀರಸ ಉಂಟಾಯಿತು. ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಿದ್ದರಿಂದ ಪಟ್ಟಣದಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾದರು. ಸಾಕಷ್ಟು ಜನರಿಗೆ ಬಂದ್ ಮಾಹಿತಿ ಇರಲಿಲ್ಲ. ಬಂದ್‍ಗೆ ಕರೆ ನೀಡಿದ್ದರೂ ಸ್ಥಳೀಯ ಮುಖಂಡರುಗಳು ಮಾಹಿತಿ ನೀಡದೆ ಗೊಂದಲಕ್ಕೆ ಕಾರಣವಾಯಿತು ಎನ್ನಲಾಗಿದೆ.