ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಪ್ರತಿಭಟನೆ
ಕೊಡಗು

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಪ್ರತಿಭಟನೆ

November 15, 2018

ಮಡಿಕೇರಿ: ಪತ್ರಕರ್ತ, ಅಂಕಣಕಾರ ಸಂತೋಷ ತಮ್ಮಯ್ಯ ಅವರನ್ನು ಬಂಧಿಸಿದ ಕ್ರಮಕ್ಕೆ ಹಿಂದೂ ಸುರಕ್ಷಾ ವೇದಿಕೆ ಮತ್ತು ವಿವಿಧ ಹಿಂದೂ ಪರ ಸಂಘಟನೆ ಗಳು ಆಕ್ರೋಶ ವ್ಯಕ್ತಪಡಿಸಿ, ನಗರದ ಜನರಲ್ ತಿಮ್ಮಯ್ಯ ವೃತದಲ್ಲಿ ಪ್ರತಿಭಟನೆ ನಡೆಸಿದವು.
ರಾಜ್ಯ ಸಮ್ಮಿಶ್ರ ಸರಕಾರ ಒಂದು ಕೋಮಿನ ಜನರನ್ನು ಸಂತೃಪ್ತಗೊಳಿಸುವ ಮೂಲಕ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ.

ಹಿಂದೂ ಸಮಾ ಜವನ್ನು ದಮನಿಸುವ ದೃಷ್ಠಿಯಿಂದಲೇ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಕ್ಕೆ ಒತ್ತಡ ಹೇರ ಲಾಗಿತ್ತು ಎಂದು ಆರೋಪಿಸಿದ ಪ್ರತಿಭಟನಾಕಾ ರರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಮ್ಮಿಶ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದೂ ಪ್ರತಿಭಟನಾಕಾರರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿ ರುವ ಮಾದಾಪುರದ ಹ್ಯಾರೀಸ್ ಮತ್ತು ಕೊಡವ ಜನಾಂಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿರುವ ನಾಪೋಕ್ಲುವಿನ ಆಸಿಫ್‍ನನ್ನು ಕೂಡ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೊಡಗು ಜಿಲ್ಲಾ ವಿದ್ಯಾರ್ಥಿ ಪ್ರಮುಖ ವಿನಯ್ ಮಾತನಾಡಿ, ರಾಜ್ಯ ಸಮ್ಮಿಶ್ರ ಸರಕಾರ ಕೊಡಗು ಜಿಲ್ಲೆಯಲ್ಲಿ ಬಲವಂತದಿಂದ ಟಿಪ್ಪು ಜಯಂತಿ ಆಚರಿಸಿ ಹಿಂದೂ ಸಮಾಜವನ್ನು ದಮ ನಿಸಲು ಮುಂದಾಗಿದೆ. ಟಿಪ್ಪುವಿನಂತಹ ಕ್ರೂರಿ, ಮತಾಂ ಧನ ವಿರುದ್ಧ ಮಾತನಾಡಿದ ಆರೋಪದ ಅಡಿ ಯಲ್ಲಿ ಪತ್ರಕರ್ತ, ಅಂಕಣಕಾರ ಸಂತೋಷ ತಮ್ಮಯ್ಯ ಅವರನ್ನು ಬಂಧಿಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅವಮಾನ ಮಾಡಲಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಮಾದಾಪುರ ಹ್ಯಾರೀಸ್ ಮತ್ತು ಕೊಡ ವರ ವಿರುದ್ಧ ಅವಹೇಳನ ಮಾಡಿದ ನಾಪೋಕ್ಲುವಿನ ಆಸೀಫ್‍ನನ್ನು ಬಂಧಿಸಲು ರಾಜ್ಯ ಸರಕಾರ ಮತ್ತು ಕೊಡಗು ಜಿಲ್ಲಾ ಪೊಲೀಸರು 24 ಗಂಟೆಗೆ ಒಳಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರಕಾರ ಮುಂದು ವರಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿನಯ್ ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬೀನ್ ದೇವಯ್ಯ ಮಾತನಾಡಿ, ದೇಶದಲ್ಲಿ ಹಿಂದೂ ಸಮು ದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿ ರುವುದನ್ನು ನೋಡಿದರೆ ನಾವು ಭಾರತದಲ್ಲಿದ್ದೇ ವೆಯೇ ಎಂಬ ಪ್ರಶ್ನೆ ಮೂಡುತ್ತದೆ. ರಾಜ್ಯ ಸಮ್ಮಿಶ್ರ ಸರಕಾರದ ಆಳ್ವಿಕೆಯ ನೀತಿ ಪಾಕಿಸ್ತಾನ ಪ್ರೇರಿತ ವಾದಂತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಜರಂಗದಳ ಚೇತನ್, ಗಣೇಶ್ ಮಕ್ಕಂದೂರು, ಕುಶ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಸೋಮವಾರಪೇಟೆ ತಾಪಂ ಸದಸ್ಯ ಬಲ್ಲಾ ರಂಡ ಮಣಿ ಉತ್ತಪ್ಪ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಬಿಜೆಪಿ ಪ್ರಮುಖರಾದ ಬಾಲ ಚಂದ್ರ ಕಳಗಿ, ನಾಪಂಡ ರವಿ ಕಾಳಪ್ಪ, ಉಮೇಶ್ ಸುಬ್ರಮಣಿ, ಮನು ಮಂಜುನಾಥ್, ಸುಕುಮಾರ್ ಮತ್ತಿತ್ತರರು ಹಾಜರಿದ್ದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಡಿವೈಎಸ್‍ಪಿ ಸುಂದರ್ ರಾಜ್ ನೇತೃ ತ್ವದಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Translate »