ಸಿಎಂ ಆರ್ಥಿಕ ಸಲಹೆಗಾರರಿಂದ ಕೆಆರ್‍ಎಸ್ ಉದ್ಯಾನವನ ಪರಿಶೀಲನೆ
ಮೈಸೂರು

ಸಿಎಂ ಆರ್ಥಿಕ ಸಲಹೆಗಾರರಿಂದ ಕೆಆರ್‍ಎಸ್ ಉದ್ಯಾನವನ ಪರಿಶೀಲನೆ

November 15, 2018

ಮೈಸೂರು: ಡಿಸ್ನಿಲ್ಯಾಂಡ್ ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಾಲಸುಬ್ರಹ್ಮಣ್ಯ, ಇತ್ತೀಚೆಗೆ ಕೃಷ್ಣರಾಜ ಸಾಗರ (ಕೆಆರ್‍ಎಸ್)ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರವು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‍ಎಸ್ ಉದ್ಯಾನವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದ್ದು, ಕ್ರಿಯಾಯೋಜನೆ, ನಕ್ಷೆ, ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯ ಅವರು ನವೆಂಬರ್ 12ರಂದು ಕೆಆರ್‍ಎಸ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಕಾವೇರಿ ನೀರಾವರಿ ನಿಗಮ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‍ಸಿ)ದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆ ಕುರಿತು ಮಾಹಿತಿ ಕಲೆ ಹಾಕಿದರು.

ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ಅಭಿವೃದ್ಧಿಪಡಿಸುವ ಸಂಬಂಧ ಅಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಚರ್ಚಿಸಿದ ಬಾಲಸುಬ್ರಹ್ಮಣ್ಯ ಅವರು, ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರಧಾನ ಕಾರ್ಯದರ್ಶಿಗಳೊಂದಿಗಿನ ಸಭೆಗೆ ಮಾಹಿತಿ ಒದಗಿಸಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕ ಪ್ರಸನ್ನ, ಚೀಫ್ ಇಂಜಿನಿಯರ್ ಪ್ರಕಾಶ್, ಸೂಪರಿಂಟೆಂ ಡಿಂಗ್ ಇಂಜಿನಿಯರ್ ರವೀಂದ್ರ ವಾಸುದೇವ್, ಎಕ್ಸಿಕ್ಯೂ ಟಿವ್ ಇಂಜಿನಿಯರ್ ಬಸವರಾಜೇಗೌಡ, ಅಸಿಸ್ಟೆಂಟ್ ಎಕ್ಸಿಕ್ಯೂ ಟಿವ್ ಇಂಜಿನಿಯರ್ ವಾಸು ಸೇರಿದಂತೆ ಹಲವು ಅಧಿಕಾರಿ ಗಳು, ಸಿಎಂ ಆರ್ಥಿಕ ಸಲಹೆಗಾರರಿಗೆ ಮಾಹಿತಿ ನೀಡಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಬೃಂದಾವನ ವನ್ನು 1,300 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಜೈಪುರ ಮೂಲದ ಸಿನ್ಸೆರ್ ಆರ್ಕಿಟೆಕ್ಟ್ಸ್ ಅಂಡ್ ಇಂಜಿನಿ ಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಯೋಜ ನೆಗೆ ಡಿಪಿಆರ್ ತಯಾರಿಸಿ ಕಾವೇರಿ ನೀರಾವರಿ ನಿಗ ಮವು ಸರ್ಕಾರಕ್ಕೆ ಸಲ್ಲಿಸಿತ್ತು. ತದ ನಂತರ ಬಂದ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೆಆರ್‍ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸಲು ಮುಂದಾಗಿ 5 ಕೋಟಿ ರೂ.ಗಳ ಆರಂಭಿಕ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.

ಕಾವೇರಿ ನೀರಾವರಿ ನಿಗಮದ 69.82 ಎಕರೆ, 104 ಎಕರೆ ತೋಟಗಾರಿಕಾ ಇಲಾಖೆ ಸುಪರ್ದಿಯಲ್ಲಿರುವ ಕೆಆರ್‍ಎಸ್ ಉದ್ಯಾನವನದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಕೆಇಆರ್‍ಸಿಯ ಚಟುವಟಿಕೆಗಳೂ ನಡೆಯುತ್ತಿರುವುದರಿಂದ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಕಾರ್ಯಕ್ಕೆ ಅವರ ನೆರವು-ಸಹಕಾರವನ್ನು ನಿಗಮವು ಕೋರಿದೆ.

ಪ್ರತೀ ದಿನ ಸರಾಸರಿ 10 ಸಾವಿರ ಪ್ರವಾಸಿಗರು ಕೆಆರ್‍ಎಸ್‍ಗೆ ಭೇಟಿ ನೀಡುತ್ತಿದ್ದು, ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಯಾದಲ್ಲಿ ದಿನಕ್ಕೆ 30ರಿಂದ 50 ಸಾವಿರ ಮಂದಿಯನ್ನು ಕೆಆರ್‍ಎಸ್ ನತ್ತ ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ.

Translate »