ಜಿಲ್ಲಾಧಿಕಾರಿಗಳಿಂದ ಲ್ಯಾನ್ಸ್‍ಡೌನ್ ಕಟ್ಟಡ,  ದೇವರಾಜ ಮಾರುಕಟ್ಟೆ ಪರಿಶೀಲನೆ
ಮೈಸೂರು

ಜಿಲ್ಲಾಧಿಕಾರಿಗಳಿಂದ ಲ್ಯಾನ್ಸ್‍ಡೌನ್ ಕಟ್ಟಡ,  ದೇವರಾಜ ಮಾರುಕಟ್ಟೆ ಪರಿಶೀಲನೆ

November 15, 2018

ಮೈಸೂರು: ಶಿಥಿಲಾ ವಸ್ಥೆಯಲ್ಲಿರುವ ಮೈಸೂರಿನ ಲ್ಯಾನ್ಸ್‍ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಂಗಳ ವಾರ ಭೇಟಿ ನೀಡಿ ಪರಿಶೀಲಿಸಿದರು.

ಅತೀ ಹಳೆಯ ಕಟ್ಟಡಗಳಾದ್ದರಿಂದ ಅವು ಗಳನ್ನು ಕೆಡವಿ ಹೊಸದಾಗಿ ಮೂಲ ಸೌಕರ್ಯಗಳೊಂದಿಗೆ ನಿರ್ಮಿಸುವುದು ಸೂಕ್ತ ಎಂದು ರಾಜ್ಯ ಟಾಸ್ಕ್‍ಫೋರ್ಸ್ ಸಮಿತಿಯ ತಜ್ಞರು ವರದಿ ನೀಡಿರುವು ದರಿಂದ ಮೈಸೂರು ಮಹಾನಗರ ಪಾಲಿಕೆಯು ವಿನ್ಯಾಸದೊಂದಿಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಗಾಗಿ ಕಾಯುತ್ತಿತ್ತು. ಇತ್ತೀಚೆಗಷ್ಟೇ ಪಾರಂಪರಿಕ ಇಲಾಖೆ ತಜ್ಞರು ಈ ಎರಡೂ ಪಾರಂ ಪರಿಕ ಕಟ್ಟಡಗಳಾಗಿರುವುದರಿಂದ ಹೇಗಿ ದೆಯೋ ಹಾಗೆಯೇ ಉಳಿಸಿಕೊಂಡು ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ದುರಸ್ತಿ ಹಾಗೂ ನವೀಕರಣ ಮಾಡಿಸಿ ಕೊಳ್ಳುವುದು ಸೂಕ್ತ ಎಂದು ತನ್ನ ಮಧ್ಯಂ ತರ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ವರದಿಗಳಿಂದ ಸಾಕಷ್ಟು ಗೊಂದಲ ಉಂಟಾಗಿರುವ ಕಾರಣ, ತಾವು ಏನು ಮಾಡಬೇಕೆಂದು ತೋಚದೆ ಸಲಹೆಗಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಮಂಗಳವಾರ ಎರಡೂ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಜಿಲ್ಲಾ ಧಿಕಾರಿಗಳು ಈ ಹಿಂದೆ ನಡೆದಿರುವ ಪ್ರಕ್ರಿಯೆ ಗಳು, ಸರ್ಕಾರದೊಂದಿಗೆ ಮಾಡಿರುವ ಪತ್ರ ವ್ಯವಹಾರ, ಕಟ್ಟಡಗಳ ಸ್ಥಿತಿ-ಗತಿಗಳ ಬಗ್ಗೆ ಪಾಲಿಕೆ ವಲಯಾಧಿಕಾರಿ ವೀಣಾ, ಅಭಿವೃದ್ಧಿ ಅಧಿಕಾರಿ ನಾಗರಾಜ್ ಅವ ರಿಂದ ಮಾಹಿತಿ ಪಡೆದುಕೊಂಡರು.

ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಸಲಹೆ ಕೋರಲಾಗುವುದು ಹಾಗೂ ಹೆರಿ ಟೇಜ್ ಇಲಾಖೆಯಿಂದ ಅಂತಿಮ ವರದಿ ಬಾಕಿ ಇರುವುದರಿಂದ ಅವರು ಏನು ಸಲಹೆ ಕೊಡುತ್ತಾರೆ ಎಂಬುದನ್ನು ನೋಡಿ ಅದ ರಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ದೇವರಾಜ ಮಾರುಕಟ್ಟೆಯ ಉತ್ತರ ಭಾಗದ ಕಟ್ಟಡ ಭಾಗಶಃ ಕುಸಿದಿತ್ತು. ಅಂದಿನ ಜಿಲ್ಲಾ ಉಸ್ತು ವಾರಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇ ವಪ್ಪ, ಕಟ್ಟಡವನ್ನು ಪುನರ್‍ನಿರ್ಮಿಸುವ ಬಗ್ಗೆ ಆಸಕ್ತಿ ತೋರಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »