ಕನಸೆಂಬ ಬೀಜದ ಬೆಳೆ ಫಸಲಾಗಿ ಪರಿವರ್ತನೆಯಾಗಲಿ: ವಸ್ತು ಪ್ರದರ್ಶನ ಪ್ರಾಧಿಕಾರದ ಇಓ ಶಶಿಕುಮಾರ್ ಹಾರೈಕೆ
ಮೈಸೂರು

ಕನಸೆಂಬ ಬೀಜದ ಬೆಳೆ ಫಸಲಾಗಿ ಪರಿವರ್ತನೆಯಾಗಲಿ: ವಸ್ತು ಪ್ರದರ್ಶನ ಪ್ರಾಧಿಕಾರದ ಇಓ ಶಶಿಕುಮಾರ್ ಹಾರೈಕೆ

June 27, 2018

ಮೈಸೂರು:  ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ ವಿದ್ಯಾಥಿಗಳೇ ನಿಮ್ಮ ಕನಸೆಂಬ ಬೀಜದ ಬೆಳೆ ಫಸಲಾಗಿ ಪರಿವರ್ತನೆಯಾಗಲಿ ಎಂದು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಾರ್ಯನಿರ್ವಣಾಧಿಕಾರಿ ಶಶಿಕುಮಾರ್ ಹಾರೈಸಿದರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಕೊಠಡಿಯಲ್ಲಿ ಜ್ಞಾನಬುತ್ತಿ ಸಾಹಿತ್ಯ ಸಂಸ್ಕøತಿ ಸಂಸ್ಥೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಬರೆಯುವ ಕನಸು ಒತ್ತು ಬಂದಿರುವವರು ಮೊದಲು ದೃಡ ಮನಸ್ಸು ಮಾಡಬೇಕು.

ಎಲ್ಲದಕ್ಕೂ ಮುಖ್ಯವಾಗಿ ಸರಿಯಾದ ಬದ್ಧತೆ ಇರಬೇಕು. ಐಎಎಸ್ ಮತ್ತು ಕೆಎಎಸ್ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವುದರಿಂದ ಕೆಳದರ್ಜೆಯ ಹುದ್ದೆಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಕೆ ಸವಿತಾ ಮಾತನಾಡಿ, ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳು ಬಹಳ ಮುಖ್ಯವಾಗಿದೆ. ದಿನ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ಹ¯ವಾರು ವಿಚಾರಗಳನ್ನು ತಿಳಿಯಬಹುದು ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದಿನ ಪತ್ರಿಕೆಯನ್ನು ಓದಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪತ್ರಿಕೆಗಳ ಮಹತ್ವದ ಅರಿವನ್ನು ಮೂಡಿಸಿದರು.

ಬ್ಯಾಂಕರ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಎನ್.ಎಸ್.ಸೋಮನಾಥ್, ಸಹಾಯಕ ಪ್ರಾಧ್ಯಾಪಕ ಕೆ.ಎಂ ಪ್ರಸನ್ನಕುಮಾರ್, ಕೆ.ಬಿ.ನವೀನ್‍ಕುಮಾರ್, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಹೆಚ್.ಬಾಲಕೃಷ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Translate »