ಹಾಸನಾಂಬ ದೇವಾಲಯದಂತೆ ಇತರೆ ದೇವಸ್ಥಾನಗಳಿಗೂ ದೀಪಾಲಂಕಾರಕ್ಕೆ ಮನವಿ
ಹಾಸನ

ಹಾಸನಾಂಬ ದೇವಾಲಯದಂತೆ ಇತರೆ ದೇವಸ್ಥಾನಗಳಿಗೂ ದೀಪಾಲಂಕಾರಕ್ಕೆ ಮನವಿ

November 1, 2018

ಹಾಸನ: ನಾಳೆ(ನ.1) ಪುರಾತನ ಪ್ರಸಿದ್ಧ ಶ್ರೀ ಹಾಸನಾಂಬೆ ದೇವಾಲಯದ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನ ಕೊಡಲು ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯದ ಜನಪ್ರತಿನಿಧಿಗಳು, ಸಚಿವರು, ಮುಖ್ಯ ಮಂತ್ರಿ, ಮ್ಯಾಯಾಧೀಶರು, ಮಠಾಧಿ ಪತಿಗಳು, ಅತೀ ಗಣ್ಯವ್ಯಕ್ತಿಗಳು, ಚಲನಚಿತ್ರ ಕಲಾವಿದರು ಸೇರಿದಂತೆ ರಾಜ್ಯ ಮತ್ತು ದೇಶದ ನಾನಾ ಕಡೆಯಿಂದ ಭಕ್ತ ಸಾಗರ ಹರಿದು ಬರುತ್ತದೆ. ಈ ಜಾತ್ರಾ ಮಹೋತ್ಸವದ ನಿಮಿತ್ತ ಜಿಲ್ಲಾಡಳಿತ ದಿಂದ ಹಾಸನಾಂಬೆ ಮುಖ್ಯ ರಸ್ತೆ ಹಾಗೂ ಸಭಾಂಗಣಕ್ಕೆ ಮಾತ್ರ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಶ್ರೀ ಹಾಸನಾಂಬ ದೇವಸ್ಥಾನದ ಪೂಜಾ ಕಾರ್ಯಕ್ಕೆ ಸಂಬಂ ಧಪಟ್ಟಂತೆ ಇದೇ ದೇವಸ್ಥಾನದ ಆಸು-ಪಾಸಿನ ರಾಜಬೀದಿಗಳಲ್ಲಿ ಪುರಾತನ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ, ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸೇರಿ ದಂತೆ ಎಲ್ಲಾ ದೇವಸ್ಥಾನಗಳನ್ನು ಜಿಲ್ಲಾಡಳಿತ ನಿರ್ಲಕ್ಷಿಸದೇ ಈ ದೇವಸ್ಥಾನಗಳಿಗೂ ಸಾರ್ವ ಜನಿಕ ಮಾಹಿತಿ ಫಲಕ ಮತ್ತು ವಿದ್ಯುತ್ ದೀಪಾಲಂಕಾರ ಮಾಡುವುದರಿಂದ ಜಾತ್ರಾ ಮಹೋತ್ಸವಕ್ಕೆ ಮೆರಗು ಹೆಚ್ಚುತ್ತದೆ. ಜೊತೆಗೆ ದೂರದ ಸ್ಥಳದಿಂದ ಬಂದಿರುವ ಭಕ್ತರಿಗೆ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುವ ಅವ ಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಸಾರ್ವ ಜನಿಕ ಸೇವಾ ಸಮಿತಿಯಿಂದ ಜಿಲ್ಲಾ ಡಳಿತಕ್ಕೆ ಮನವಿ ಮಾಡಲಾಗಿದೆ.

Translate »