ಹಾಸನ: ಸರ್ದಾರ್ ವಲ್ಲಭ ಬಾಯ್ ಪಟೀಲ್ ರಾಷ್ಟ್ರೀಯ ಐಕ್ಯತೆಯ ಸಂಕೇತವಾಗಿದ್ದಾರೆ. ಅವರ ಆದರ್ಶ ಗಳನ್ನು ನಾವೆಲ್ಲರು ಪಾಲಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದಲ್ಲಿ ಏಕತಾ ಪ್ರತಿಜ್ಞಾ- ಭೋದಿಸಿ ಮಾತನಾಡಿದ ಅವರು, ಭಾಷಾ ವಾರು ಪ್ರಾಂತ್ಯವಾಗಿ ಹರಿದು ಹಂಚಿ ಹೋದ ಭಾರತವನ್ನು ಒಂದು ಸಂಯುಕ್ತ ರಾಷ್ಟ್ರವನ್ನಾಗಿ ನಿರ್ಮಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರದ್ದು ಎಂದು ಬಣ್ಣಿಸಿದರು.
ಇದೇ ಸಂದರ್ಭ ‘ರಾಷ್ಟ್ರದ ಐಕತೆ, ಸಮ ಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನನ್ನ ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ’ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.
ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಯಿಂದ ಸಾಧಿಸಿದ ರಾಷ್ಟ್ರೀಯ ಏಕೀ ಕರಣದ ಸ್ಪೂರ್ತಿಯನ್ನು ಕಾಪಾ ಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ ಎಂದು ಒಮ್ಮನಸ್ಸಿನಿಂದ ಶ್ರಮಿ ಸುತ್ತೇವೆ ಎಂದು ಪ್ರತಿಜ್ಞಾ ಸ್ವೀಕರಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಂ.ಶಿವಣ್ಣ, ಜಿಲ್ಲಾ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಅಧಿಕಾರಿ ವಿನೋದ್ ಚಂದ್ರ, ಆಹಾರ ಇಲಾಖೆ ಉಪನಿರ್ದೆ ೀಶಕರಾದ ಸವಿತಾ ಪಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.