ಚುನಾವಣಾ ಸಂದರ್ಭ ಲಾಲಿಪಪ್ ನೀಡುವ ಕಾಂಗ್ರೆಸ್ ನಂಬಬೇಡಿ.
ಮೈಸೂರು

ಚುನಾವಣಾ ಸಂದರ್ಭ ಲಾಲಿಪಪ್ ನೀಡುವ ಕಾಂಗ್ರೆಸ್ ನಂಬಬೇಡಿ.

April 27, 2018

ಬೆಂಗಳೂರು: ಚುನಾ ವಣಾ ಸಂದರ್ಭದಲ್ಲಿ ಲಾಲಿಪಪ್ ನೀಡಿ ಮತ ಪಡೆಯುವ ಕಾಂಗ್ರೆಸ್‍ನ್ನು ನಂಬಬೇಡಿ ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.

ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾ ಟಕದಿಂದ ಮುಕ್ತಗೊಳಿಸಿ ಅಭಿವೃದ್ಧಿ ಪರ ವಾದ ಬಿಜೆಪಿಯನ್ನು ಪೂರ್ಣ ಬಹುಮತ ದೊಂದಿಗೆ ಅಧಿಕಾರಕ್ಕೆ ತರಬೇಕೆಂದು ಮೋದಿ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ 40 ನಿಮಿಷಗಳ ಕಾಲ ಚುನಾವಣಾ ಕಣಕ್ಕಿಳಿದಿರುವ ಕೆಲವು ಹಾಲಿ ಶಾಸಕರೊಟ್ಟಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ಸಿ ಗರು ಮತದಾರರಿಗೆ ಲಾಲಿಪಪ್ ಕೊಡುವು ದರಲ್ಲಿ ನಿಸ್ಸೀಮರು. ಕೇವಲ ಕ್ಷಣ ಕ ಸುಖ ಕ್ಕಾಗಿ ಆಸೆ ಪಟ್ಟರೆ ಐದು ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಕೆಲವರು ತುದಿ ಗಾಲಲ್ಲಿ ನಿಂತಿದ್ದಾರೆ. ನನಗೆ ಖಚಿತವಾದ ಭರವಸೆಯಿದೆ. ಕರ್ನಾಟಕದ ಜನತೆ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರು ತ್ತಾರೆ ಎಂದರು. ನೀವು ಹಾಕುವ ಒಂದೊಂದು ಮತವು ದೇಶದ ಭವಿಷ್ಯವನ್ನು ತೀರ್ಮಾ ನಿಸುತ್ತದೆ. ಅಭಿವೃದ್ಧಿ ಪರವಾದ ಬಿಜೆಪಿ ಬೇಕೋ ಬೇಡವೋ ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಹೇಳಿದರು.

ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಮುಂಚೂಣ ಯಲ್ಲಿದೆ. ಕಾಂಗ್ರೆಸ್‍ನ ಬೇಜವಾಬ್ದಾರಿ ಯಿಂದಾಗಿ ರಾಜ್ಯ ಇಂದು ಹಿಂದುಳಿದಿದೆ. ಇಂಥ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರ ಬಾರದು ಎಂದು ಮನವಿ ಮಾಡಿದರು.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ರುವ ಇಂದಿನ ಎಲ್ಲ ದೋಷಗಳಿಗೆ ಮೂಲ ಕಾಂಗ್ರೆಸ್ ಎಂಬ ಸತ್ಯವನ್ನು ಯಾರೊ ಬ್ಬರೂ ನಿರಾಕರಿಸುವುದಿಲ್ಲ. ಕಾಂಗ್ರೆಸ್ ದೇಶ ದಿಂದ ಹೊರಹೋಗುವ ತನಕ ಅಭಿವೃದ್ಧಿ ಎಂಬುದು ಮರೀಚಿಕೆಯಾಗುತ್ತದೆ. ಮತದಾರರು ಪ್ರಬುದ್ಧರಾಗಿದ್ದು , ಯೋಗ್ಯ ಪಕ್ಷವನ್ನು ಆರಿಸಿಕೊಳ್ಳುವಂತೆ ಸಲಹೆ ಮಾಡಿದರು. ತಮ್ಮ ಸಂವಾದದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಎಂದಿನಂತೆ ತೀಕ್ಷ್ಣ ಮಾತುಗಳಲ್ಲೇ ಹರಿಹಾಯ್ದ ಅವರು, ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವಂತಹ ಹೀನ ಕೃತ್ಯಕ್ಕೆ ಕಾಂಗ್ರೆಸ್ ಇಳಿದಿದೆ. ಒಂದೊಂದು ರಾಜ್ಯ ದಲ್ಲಿ ಒಂದೊಂದು ರೀತಿಯ ಸುಳ್ಳು ಹೇಳುವ ಆ ಪಕ್ಷವನ್ನು ಜನತೆ ನಂಬುವ ಸ್ಥಿತಿ ಯಲ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಯುಪಿಎ ಮತ್ತು ಎನ್‍ಡಿಎ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಬಗ್ಗೆ ನೀವೇ ಯೋಚಿಸಿ. ಅಭಿವೃದ್ಧಿ ಆಧಾರದಲ್ಲಿ ಮತ ನೀಡಿ. ಅವರು ಜಾತಿ, ಧರ್ಮದ ಆಧಾ ರದ ಮೇಲೆ ಚುನಾವಣೆ ನಡೆಸುವ ಅವರು ಜಾತಿ ಎಂಬ ಲಾಲಿಪಪ್ ನೀಡಿ ಚುನಾ ವಣೆ ನಡೆಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕ ಜನತೆಯ ದರ್ಶನಕ್ಕೆ ಬರುತ್ತೇನೆ. ಅವರ ಆಶೀರ್ವಾದ ಪಡೆಯುತ್ತೇನೆ.

ಮುಂದಿನ ದಿನಗಳಲ್ಲಿ ದೊಡ್ಡ ಯೋಜನೆಗಳು ಬರಲಿವೆ. ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸುಳ್ಳು ಸಮೀಕ್ಷೆ ನಡೆಸುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸಂಸ್ಕøತಿಯನ್ನು ದೇಶದಿಂದ ಹೊರ ಹಾಕುವ ತನಕ ನಾವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಅಸಾಧ್ಯ. ಕಾಂಗ್ರೆಸ್ ಮನಸ್ಥಿತಿ ಬದಲಾಗುವವರೆಗೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು. ಸಂವಾದದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ನಿಮ್ಮ ಗೆಲುವಿಗೆ ಕಾರ್ಯಕರ್ತರೇ ಅಡಿಗಲ್ಲು ಎಂಬುದನ್ನು ಮರೆಯ ಬೇಡಿ. ಪ್ರತಿದಿನ ನಿಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಬೇಕು. ಕಷ್ಟ-ಸುಖದಲ್ಲಿ ಭಾಗಿಯಾದರೆ ಮಾತ್ರ ನಿಮ್ಮನ್ನು ಕೈ ಹಿಡಿಯುತ್ತಾರೆ ಎಂದು ಮೋದಿ ಸಲಹೆ ನೀಡಿದರು.

ನಾನೂ ಕನ್ನಡಿಗ… ನಾನೊಬ್ಬ ಬಿಜೆಪಿ ಕಾರ್ಯಕರ್ತ…
ನಾನು ಕನ್ನಡಿಗ. ಕರ್ನಾಟಕದಲ್ಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಉತ್ತರಭಾರತದವರು ಎಂದು ಕಾಲೆಳೆದಿದ್ದರು. ಸಂವಾದದಲ್ಲಿ ಮುಖ್ಯಮಂತ್ರಿಯವರ ಹೇಳಿಕೆಗೆ ತಿರುಗೇಟು ನೀಡಿದ ಮೋದಿ ಅವರು, ನಾನು ಕನ್ನಡಿಗ. ಕರ್ನಾಟಕದಲ್ಲಿ ಬಿಜೆಪಿ ಪರ ಮತ ಕೇಳಲು ನಿಮ್ಮ ಮನೆಬಾಗಿಲಿಗೆ ಬರುತ್ತೇನೆ. ಪಕ್ಷವನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು. ಕರ್ನಾಟಕ ಎಂದರೆ ನೆನಪಿಗೆ ಬರುವುದು ಶ್ರೀಗಂಧದ ಮರ. ಆಸ್ಟ್ರೇಲಿಯಾದಲ್ಲಿ ಕರ್ನಾಟಕದಿಂದ ಶ್ರೀಗಂಧ ತೆಗೆದುಕೊಂಡು ಹೋಗಿ ಬೃಹದಾಕಾರದ ಅರಣ್ಯ ಬೆಳೆಸಿದ್ದಾರೆ. ಆದರೆ ರಾಜ್ಯದಲ್ಲಿರುವ ಕೆಲವರ ಕಣ್ಣು ಶ್ರೀಗಂಧದ ಮೇಲೆ ಬಿದ್ದಿದೆ ಎಂದು ಕುಹಕವಾಡಿದರು.

ಮೂವರು ಶಾಸಕರೊಂದಿಗೆ ಪ್ರಧಾನಿ ಚರ್ಚೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಪಕ್ಷದ ಮೂವರು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಿಂದ ಸಂವಾದ ನಡೆಸಿದ ಮೋದಿ ಅವರು, 40 ನಿಮಿಷಗಳ ಕಾಲ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಪಕ್ಷದ ಮುಖಂಡರಿಗೂ ಕಿವಿಮಾತು ಹೇಳುವುದನ್ನು ಮರೆಯಲಿಲ್ಲ. ಈ ಮೊದಲು ಸಂಸದರು, ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರ ಜೊತೆ ಸಮಾಲೋಚನೆ ಮಾಡುವ ಉದ್ದೇಶ ಪ್ರಧಾನಿಯವರಲ್ಲಿತ್ತು. ಆದರೆ ಕಡೇ ಗಳಿಗೆ ಯಲ್ಲಿ ಇದನ್ನು ಬದಿಗಿರಿಸಿ, ಆರ್‍ಎಸ್‍ಎಸ್ ಮೂಲದ ಹಾಲಿ ವಿಧಾನ ಸಭಾ ಸದಸ್ಯರಾದ ಎಸ್.ಸುರೇಶ್‍ಕುಮಾರ್, ಶಶಿಕಲಾ ಜೊಲ್ಲೆ ಹಾಗೂ ಸುನೀಲ್‍ಕುಮಾರ್ ಅವರಿಗೆ ಪ್ರಧಾನಿಯನ್ನು ಪ್ರಶ್ನೆ ಕೇಳುವ ಅವಕಾಶ ಒದಗಿ ಬಂದಿತು. ಮೊದಲು ಶಶಿಕಲಾ ಜೊಲ್ಲೆ ಅವರು ಪ್ರಧಾನಿ ಮೋದಿಗೆ ರೈತರ ಕಲ್ಯಾಣ ಕುರಿತಂತೆ ಕೇಳಲಾದ ಪ್ರಶ್ನೆಗೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅದರಲ್ಲಿ ಫಸಲ್ ಭೀಮಾ ಯೋಜನೆ ಪ್ರಮುಖವಾದುದು. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ಉತ್ತರಿಸಿದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಅಲ್ಲಿನ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಯಾವುದೇ ಸರ್ಕಾರ ಅನ್ನದಾತನನ್ನು ಮರೆಯಬಾರದು. ನೀವು ರೈತರಿಗೆ ಎಷ್ಟು ಅನುಕೂಲ ಮಾಡಿಕೊಡು ತ್ತೀರೋ ಅದು ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಬೆಂಗಳೂರು ನಗರ ಕುರಿತಂತೆ ಸುರೇಶ್ ಕುಮಾರ್ ಕೇಳಿದ ಮತ್ತೊಂದು ಪ್ರಶ್ನೆಗೆ, ಕರ್ನಾಟಕ ಎಂದರೆ ನೆನಪಾಗುವುದೇ ಬೆಂಗಳೂರು. ಇಂದು ಬೆಂಗಳೂರು ವಿಶ್ವದ ಮಾನ್ಯತೆ ಪಡೆದ ನಗರವಾಗಿದೆ. ಈ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಆಡಳಿತಾರೂಢ ಸರ್ಕಾರ ಇಂಥ ನಗರವನ್ನು ಕಡೆಗಣಸಿರುವುದು ಸರಿಯಲ್ಲ ಎಂದು ಪ್ರಧಾನಿ ಆಕ್ಷೇಪಿಸಿದರು.

ಇನ್ನು ಕಾರ್ಯಕರ್ತರ ಬಗ್ಗೆ ಕಾರ್ಕಳದ ಸುನೀಲ್‍ಕುಮಾರ್ ಕೇಳಿದ ಪ್ರಶ್ನೆಗೆ ಯಾವುದೇ ಪಕ್ಷಕ್ಕೆ ಕಾರ್ಯಕರ್ತರು ಆಧಾರಸ್ತಂಭ. ನೀವು ಎಲ್ಲಿಯ ತನಕ ಕಾರ್ಯಕರ್ತರನ್ನು ಗೆಲ್ಲುವುದಿಲ್ಲವೋ ಅಲ್ಲಿಯ ತನಕ ನೀವು ಗೆಲ್ಲಲು ಸಾಧ್ಯವಿಲ್ಲ. ಬೂತ್ ಮಟ್ಟವನ್ನು ಗೆದ್ದರೆ ಚುನಾವಣೆಯನ್ನು ಗೆದ್ದಂತೆ. ಕ್ಷೇತ್ರದಲ್ಲಿ ಇದ್ದು, ದಿನ ಕಾರ್ಯಕರ್ತರ ಕುಂದು-ಕೊರತೆಗಳನ್ನು ಆಲಿಸಬೇಕು. ಅವರನ್ನು ಮರೆತರೆ ಪಕ್ಷಕ್ಕೂ ಭವಿಷ್ಯವಿಲ್ಲ. ನಿಮಗೂ ಭವಿಷ್ಯವಿಲ್ಲ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ಎಂಬುದನ್ನು ಮರೆಯಬಾರದು ಎಂದು ಮೋದಿ ಕಿವಿಮಾತು ಹೇಳಿದರು.

Translate »