ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಸಂಘಟನೆಗಳ ಭಾರೀ ಪ್ರತಿಭಟನೆ
ಚಾಮರಾಜನಗರ

ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಸಂಘಟನೆಗಳ ಭಾರೀ ಪ್ರತಿಭಟನೆ

February 5, 2019

ಹನೂರು: ಮಲೆಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳ ಜನತೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾ ಯಿಸಿ ಕರವೇ ಸ್ವಾಭಿಮಾನಿ ಬಣ ಹಾಗೂ ಕೊಳ್ಳೇಗಾಲ ತಾಲೂಕು ಜಯ ಕರ್ನಾಟಕ ಸಂಘಟನೆಗಳು ಹನೂರು ಪಟ್ಟಣ ದಲ್ಲಿಂದು ಭಾರೀ ಪ್ರತಿಭಟನೆ ನಡೆಸಿದರು.

ಹನೂರು ಪಟ್ಟಣದ ಟಿ.ಕೆ.ಎನ್ ಪೆಟ್ರೋಲ್ ಬಂಕ್‍ನಿಂದ ಹೊರಟ ಮೆರ ವಣಿಗೆ ಪ್ರತಿಭಟನಾಕಾರರು, ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ಅಂಬೇ ಡ್ಕರ್ ವೃತ್ತದಿಂದ ಸಾಗಿ ಹನೂರು ವಿಶೇಷ ತಹಶೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿ ಧರಣಿ ನಡೆಸಿದರು.

ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾ ನಿರತರು ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ದರು. ಕರವೇ ಸ್ವಾಭಿಮಾನಿ ಬಳಗದ ಅಧ್ಯಕ್ಷ ವಿನೋದ್ ಮಾತನಾಡಿ, ರಾಮಾಪುರ ಹೋಬಳಿ ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕಂದಾಯ ಗ್ರಾಮ ಗಳಾದ ತೊಳಸಿಕೆರೆ, ಇಂಡಿಗನತ್ತ, ಮೆಂದರೆ, ತೇಕಾಣೆ(ನಾಗಮಲೆ), ಪಡಸಲ ನತ್ತ, ಮೆದಗಾಣೆ, ತೊಕೆರೆ, ಕೊಕ್ಕಬರೆ, ದೊಡ್ಡಾಣೆ, ಗ್ರಾಮಗಳ ಜನ ಮತ್ತು ಜಾನುವಾರುಗಳು ಮೂಲ ಸೌಕರ್ಯ ದಿಂದ ವಂಚಿತವಾಗಿದ್ದು, ಅಲ್ಲಿನ ಜನರು ತಮ್ಮ ಬದುಕನ್ನು ಅಪಾಯದ ಅಂಚಿನಲ್ಲಿ ಸಾಗಿಸುತ್ತಿರುತ್ತಾರೆ. ಈ ಹಿನೆÀ್ನಲೆಯಲ್ಲಿ ಇಲ್ಲಿನ ಜನಕ್ಕೆ ಸಂರಕ್ಷಿತ ವನ್ಯಜೀವಿ ವಲಯದ ಜೀವ ವಿರೋಧಿ ಕಾನೂನು ಗಳ ಸಮಸ್ಯೆಯಿಂದ ಮುಕ್ತಿ, ಸಮರ್ಪಕ ಶುದ್ಧ ಕುಡಿಯುವ ನೀರು, ಯೋಗ್ಯ ರಸ್ತೆ ನಿರ್ಮಾಣ, ಸಮಗ್ರ ಮತ್ತು ಸುಶಿಕ್ಷಿತ ಶೈಕ್ಷಣಿಕ, ಪಡಿತರ ವ್ಯವಸ್ಥೆ, ಆರೋಗ್ಯ ಕೇಂದ್ರ, ವಿದ್ಯುಚ್ಛಕ್ತಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮನವೊಲಿಕೆ ಯತ್ನ ವಿಫಲ: ಸುದ್ದಿ ತಿಳಿದು ಪ್ರತಿಭಟನಾ ತಾಪಂ ಇಓ ಉಮೇಶ್, ವಿಶೇಷ ತಹಶೀಲ್ದಾರ್ ಶಿವರಾಂ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗದ ಎಇಇ ಮಾದೇವಮೂರ್ತಿ, ಮಲೆ ಮಹ ದೇಶ್ವರ ಬೆಟ್ಟ ಗ್ರಾಪಂ ಪಿಡಿಓ ರಾಜೇಶ್ ಸ್ಥಳಕ್ಕಾಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಪ್ರಯೋ ಜನವಾಗಲಿಲ್ಲ. ಪ್ರತಿಭಟನಾಕಾರರು 15 ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಹಾಗೂ ಮೂಲ ಸೌಲಭ್ಯ ಗಳನ್ನು ಕಲ್ಪಿಸುವ ಭರವಸೆಯ ಪತ್ರ ನೀಡುವಂತೆ ಒತ್ತಾಯಿಸಿದರು.

ಪಟ್ಟು ಸಡಿಲಿಸದ ಪ್ರತಿಭಟನಾಕಾರರು: ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟು ಹಿಡಿದ ಪ್ರತಿಭಟ ನಾಕಾರರು, ಕ್ಷೇತ್ರದ ಜನಪ್ರತಿನಿಧಿಗಳು, ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಭರವಸೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಡಳಿತ ಯಂತ್ರಕ್ಕೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ಪ್ರಕಾಶ್, ಕರವೇ ಕಾರ್ಯದರ್ಶಿ ಗಿರೀಶ್, ಹಿಂಡಿಗನತ್ತ ಪುಟ್ಟಸ್ವಾಮಿ, ಪಡಸಲನತ್ತ ಪುಟ್ಟಮ್ಮ, ರಾಜಮ್ಮ, ಮಾದೇವ, ನಾಗರಾಜ್, ಮತ್ತು ಮಹಿಳೆಯರು ಇದ್ದರು.

Translate »