ಪ್ರತಿಭಟನಾ ಸ್ಥಳಕ್ಕೆ ಶಾಸಕ ಪ್ರೀತಂ ಗೌಡ ಭೇಟಿ
ಹಾಸನ: ನಗರದ ಹೊರವಲಯ ಹನುಮಂತಪುರ ಬಳಿ ಇರುವ ನ್ಯೂ ಮಿನರ್ವ ಮಿಲ್‍ನ ಕಾರ್ಮಿಕರು ವೇತನ ಒಪ್ಪಂದ ಕುರಿತು ನಡೆಸುತ್ತಿರುವ ಮುಷ್ಕರ ಮಂಗಳವಾರ 94ನೇ ದಿನಕ್ಕೆ ಕಾಲಿಟ್ಟಿತು. ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕ ಮುಖಂಡರ ಜತೆ ಚರ್ಚಿಸಿದರು. ಬಳಿಕ ಶಾಸಕರು ಮಿನರ್ವ ಮಿಲ್‍ನ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದರು.
ಇಲ್ಲಿನ ಕಾರ್ಮಿಕರ ಸಮಸ್ಯೆಯನ್ನು ನೂತನ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ಗಮನಕ್ಕೆ ತಂದು ಅದಷ್ಟು ಬೇಗ ಪರಿಹಾರ ದೊರಕಿಸಿಕೊಡಲು ಯತ್ನಿಸುವುದಾಗಿಯೂ, ಕಾರ್ಮಿಕರು 3 ತಿಂಗಳಿಂದ ಅನುಭವಿಸುತ್ತಿರುವ ಕಷ್ಟಗಳಿಗೆ ಕೊನೆ ಹಾಡುವುದಾಗಿಯೂ ಶಾಸಕರು ಭರವಸೆ ನೀಡಿದರು. ಈ ಸಂದರ್ಭ ಎಐ ಟಿಯುಸಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡೋಂಗ್ರೆ ಮಧು ಮತ್ತಿತರರಿದ್ದರು.